- Home
- Entertainment
- Cine World
- ಟ್ರೆಂಡ್ ಆಗುತ್ತಿದೆ ತಮನ್ನಾ ಭಾಟಿಯಾ ಬ್ಲಾಕ್ ಡ್ರೆಸ್ ಫ್ಯಾಶನ್, ಡಬಲ್ ಮಾಡಲಿದೆ ಸೌಂದರ್ಯ
ಟ್ರೆಂಡ್ ಆಗುತ್ತಿದೆ ತಮನ್ನಾ ಭಾಟಿಯಾ ಬ್ಲಾಕ್ ಡ್ರೆಸ್ ಫ್ಯಾಶನ್, ಡಬಲ್ ಮಾಡಲಿದೆ ಸೌಂದರ್ಯ
ತಮನ್ನಾ ಭಾಟಿಯಾಗೆ ಯಾವ ಡ್ರೆಸ್‌ನಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಆದರೆ ಈ ಬಾರಿ ತಮನ್ನ ಬೇಸಿಗೆಯ ಬ್ಲಾಕ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಆಜ್ ಕಿ ರಾತ್ ಬೆಡಗಿಯ ಈ ಹೊಸ ಫ್ಯಾಶನ್ ಟ್ರೆಂಡ್ ಆಗಿದೆ. ವಿಶೇಷ ಅಂದರೆ ಈ ಡ್ರೆಸ್ ಸೌಂದರ್ಯವನ್ನು ಡಬಲ್ ಮಾಡಲಿದೆ. ಏನಿದು ತಮನ್ನಾ ಫ್ಯಾಶನ್ ಟ್ರೆಂಡ್?

ತಮನ್ನಾ ಭಾಟಿಯಾ ತಮ್ಮ ಫ್ಯಾಷನ್‌ಗೆ ಹೆಸರುವಾಸಿಯಾಗಿದ್ದಾರೆ. ಮಿಲ್ಕಿ ಬ್ಯೂಟಿ ಎಂದೇ ತಮನ್ನಾ ಗುರುತಿಸಿಕೊಂಡಿದ್ದಾರೆ. ತಮನ್ನಾ ಉಡುಗೆ ತೊಡೆಗೆಗಳನ್ನು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಹೀಗಾಗಿ ತಮನ್ನ ಏನೇ ಧರಿಸಿದರೂ ಟ್ರೆಂಡ್ ಆಗುತ್ತೆ. ಈ ಬಾರಿ ತಮನ್ನಾ ಭಾಟಿಯಾ ಕಪ್ಪು ಡ್ರೆಸ್ ಧರಿಸಿ ಹೊಸ ಫ್ಯಾಶನ್ ಟ್ರೆಂಡ್ ಹುಟ್ಟು ಹಾಕಿದ್ದಾರೆ.
ತಮನ್ನಾ ಅವರ ಈ ಲುಕ್ ಸರಳತೆ ಜೊತೆಗೆ ಸೊಗಸಾದ ಮತ್ತು ಟ್ರೆಂಡಿ ಕೂಡ ಆಗಿದೆ, ಇದು ಬೇಸಿಗೆಗೆ ಸೂಕ್ತ ಆಯ್ಕೆಯಾಗಿದೆ. ಬ್ಲಾಕ್ ಡ್ರೆಸ್‌ನಲ್ಲಿ ತಮನ್ನಾ ಸೌಂದರ್ಯ ಡಬಲ್ ಆಗಿದೆ. ವಿಶೇಷ ಅಂದರೆ ಈ ಫ್ಯಾಶನ್ ಡ್ರೆಸ್ ಎಲ್ಲಾ ಮಹಿಳೆಯರ ಅಂದ ಹೆಚ್ಚಿಸಲಿದೆ. ಇದೇ ಕಾರಣದಿಂದ ಈ ಡ್ರೆಸ್ ಇದೀಗ ಟ್ರೆಂಡ್ ಆಗುತ್ತಿದೆ.
ತಮನ್ನಾ ಹೊಸ ಬ್ಲಾಕ್ ಡ್ರೆಸ್ ಫ್ಯಾಶನ್ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಬ್ಲಾಕ್ ಡ್ರೆಸ್ ಹಾಗೂ ಬ್ಲಾಕ್ ವ್ಯಾನಿಟಿ ಬ್ಯಾಗ್ ಮೂಲಕ ತಮನ್ನಾ ಕಾಣಿಸಿಕೊಂಡಿದ್ದಾರೆ. ಬೇಸಿಲಿನ ಕಾರಣದಿಂದ ಬ್ಲಾಕ್ ಗಾಗಲ್ಸ್ ಕೂಡ ಧರಿಸಿದ್ದರು.
ಸಂಜೆ ವೇಳೆ ತಮನ್ನಾ ಭಾಟಿಯಾ ಸನ್‌ಗ್ಲಾಸ್‌ನೊಂದಿಗೆ ಪೋಸ್ ನೀಡುತ್ತಿದ್ದರು. ತಮನ್ನಾ ಹೊಸ ಟ್ರೆಂಡಿ ಫ್ಯಾಶನ್ ಇದೀಗ ಜನಸಾಮಾನ್ಯರಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದು ಎಲ್ಲರಿಗೂ ಒಪ್ಪುವಂತಾ ಡ್ರೆಸ್ ಅನ್ನೋ ಮಾತುಗಳು ಕೇಳಿಬರುತ್ತಿದೆ.
ತಮನ್ನಾ ತಮ್ಮ ಉಡುಪಿಗೆ ಹೊಂದಿಕೆಯಾಗುವ ಕಪ್ಪು ಹ್ಯಾಂಡ್‌ಬ್ಯಾಗ್ ಅನ್ನು ಕೂಡ ಒಯ್ದಿದ್ದರು. ತಮನ್ನಾ ಫೋಟೋಗಳು ಇದೀಗ ಭಾರಿ ವೈರಲ್ ಆಗಿದೆ. ಹೊಸ ಡ್ರೆಸ್‌ನಲ್ಲಿ ತಮನ್ನಾ ಕಾಣಿಸಿಕೊಂಡು ಇದೀಗ ಮತ್ತೆ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ವಿಜಯ್ ವರ್ಮಾ ಜೊತೆ ರಿಲೇಶನ್‌ಶಿಪ್‌ನಲ್ಲಿರುವ ತಮನ್ನಾ ಭಾಟಿಯಾ ಸೂಪರ್ ಹಿಟ್ ಚಿತ್ರಗಳ ಮೂಲಕ ಗಮನಸೆಳೆದಿದ್ದಾರೆ. ಸ್ತ್ರೀ 2 ಚಿತ್ರದಲ್ಲಿ ತಮನ್ನ ಭಾಟಿಯಾ ಆಜ್ ಕಿ ರಾತ್ ಹಾಡು ಭಾರಿ ಸೂಪರ್ ಹಿಟ್ ಆಗಿತ್ತು. ಈ ಹಾಡು ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು. ಬಾಲಿವುಡ್, ತೆಲುಗು ಸಿನಿಮಮಾಗಳಲ್ಲಿ ಗುರುತಿಸಿಕೊಂಡಿರುವ ತಮನ್ನಾ ಒಡೆಲಾ 2 ತೆಲುಗು ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.
ತೆಲುಗು, ಹಿಂದಿ ಮಾತ್ರವಲ್ಲ, ವೆಬ್ ಸೀರಿಸ್‌ಗಳಲ್ಲೂ ತಮನ್ನಾ ಭಾರಿ ಗಮನಸೆಲೆದಿದ್ದಾರೆ. ಅಮೆಜಾನ್ ಪ್ರೈಮ್‌ನ ಡಯಾನಾ ಪೆಂಟಿ ಸೀರಿಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನ ಸಿಕಂದರ್‌ಕಾ ಮುಕಾದರ್ ಥ್ರಿಲ್ಲರ್ ಸೀರಿಸ್‌ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.