ವಿಜಯ್ ವರ್ಮಾ ಜೊತೆ ಯಾಕೆ ಡೇಟ್ ಮಾಡ್ತಿದ್ದೀರಾ, ಸೂಟ್ ಆಗಲ್ಲ; ತಮನ್ನಾಗೆ ಅಭಿಮಾನಿಗಳ ಪ್ರಶ್ನೆ
ವಿಜಯ್ ವರ್ಮಾ ಜೊತೆ ಯಾಕೆ ಡೇಟ್ ಮಾಡುತ್ತಿದ್ದೀರಿ, ಸೂಟ್ ಆಗಲ್ಲ ಎಂದು ತಮನ್ನಾಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ದಕ್ಷಿಣ ಭಾರತೀಯ ಸಿನಿಮಾರಂಗದ ಮೂಲಕ ಪ್ರಸಿದ್ಧಿ ಗಳಿಸಿರುವ ನಟಿ ತಮನ್ನಾ ಸದ್ಯ ಪ್ರೀತಿ, ಪ್ರೇಮದ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮಿಲ್ಕಿ ಬ್ಯೂಟಿ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಎಲ್ಲಾ ಕಡೆ ಇಬ್ಬರ ಲವ್ ಸ್ಟೋರಿದೆ ಮಾತು. ಹೊಸ ವರ್ಷವನ್ನು ಒಟ್ಟಿಗೆ ಆಚರಿಸುವ ಮೂಲಕ ತಮನ್ನಾ ಮತ್ತು ವಿಜಯ್ ವರ್ಮಾ ಲವ್ ಸ್ಟೋರಿ ಬಹಿರಂಗವಾಗಿದೆ.
ಅಂದಹಾಗೆ ಇಬ್ಬರೂ ಹೊಸ ವರ್ಷ ಆಚರಿಸಿ ಒಟ್ಟಿಗೆ ವಾಪಾಸ್ ಆದ ವಿಡಿಯೋ ಕೂಡ ವೈರಲ್ ಆಗಿತ್ತು. ಮುಂಬೈ ಏರ್ಪೋಟ್ ಗೆ ಇಬ್ಬರೂ ಒಟ್ಟಿಗೆ ಬಂದಿದ್ದು ಕ್ಯಾಮರಾ ಮುಂದೆ ಮಾತ್ರ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಕೆಲವೇ ನಿಮಿಷಗಳ ಅಂತರ ನಡುವೆ ಇಬ್ಬರೂ ಏರ್ಪೋರ್ಟ್ ನಿಂದ ಹೊರ ಬಂದಿದ್ದಾರೆ.
ಅಂದಹಾಗೆ ತಮನ್ನಾ ಸದ್ಯಾ ಹೊಸ ವರ್ಷ ಸಂಭ್ರಮಿಸಿದ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ತಮನ್ನಾ ಫೋಟೋ ಶೇರ್ ಮಾಡಿದ್ರೆ ಅಭಿಮಾನಿಗಳು ವಿಜಯ್ ವರ್ಮಾ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ತಮನ್ನಾ ಫೋಟೋ ಕೆಳಗೆ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಅಭಿಮಾನಿಯೊಬ್ಬ, 'ನೀವು ಯಾಕೆ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, 'ನಿಮಗೆ ವಿಜಯ್ ವರ್ಮಾ ಸೂಟ್ ಆಗಲ್ಲ' ಎಂದು ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, 'ತುಂಬಾ ಕೆಟ್ಟ ಸೆಲೆಕ್ಷನ್ ತಮನ್ನಾ', 'ಅವರ ಜೊತೆ ಹೇಗೆ ಲಿಪ್ ಲಾಕ್ ಮಾಡಿದ್ರಿ' ಎಂದು ಕೇಳುತ್ತಿದ್ದಾರೆ.
ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಅಂದಹಾಗೆ ಇಬ್ಬರೂ ಲಸ್ಟ್ ಸ್ಟೋರಿ -2 ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದು ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮನ್ನಾ ಮತ್ತು ವಿಜಯ್ ವರ್ಮಾ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೆ ಇಬ್ಬರೂ ಡೇಟಿಂಗ್ ಮಾಡುತ್ತಿರುದ್ದಾರೆ ಎನ್ನುವ ಸುಳಿವು ಎಲ್ಲೂ ನೀಡಿರಲಿಲ್ಲ. ಇದೀಗ ಹೊಸ ವರ್ಷ ಒಟ್ಟಿಗೆ ಆಚರಿಸಿ ಸುದ್ದಿಯಾಗಿದ್ದಾರೆ. ಆಕಾಶದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಆಗ ವಿಜಯ್ ಮತ್ತು ತಮನ್ನಾ ಇಬ್ಬರೂ ತಬ್ಬಿಕೊಂಡು ಸಂಭ್ರಮಿಸಿದ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ನಟಿ ತಮನ್ನಾ 2005ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಿಂದಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಚಾಂದ್ ಸಾ ರೋಷನ್ ಚೆಹ್ರಾ ಸಿನಿಮಾ ಮೂಲಕ ಮೊದಲ ಬಾರಿಗೆ ತರೆಮೇಲೆ ಮಿಂಚಿದರು. ಬಳಿಕ ತೆಲುಗು ಸಿನಿಮಾರಂಗಕ್ಕೆ ಬಂದರು. ನಂತರ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾದರು. ಈಗಲೂ ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬೋಲ ಶಂಕರ್. ಗುರ್ತುಂದ ಸೀತಕಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.