- Home
- Entertainment
- Cine World
- Baahubali The Beginning: 10 ವರ್ಷದ ಬಳಿಕ ಬಾಹುಬಲಿ ವಿವಾದದ ಬಗ್ಗೆ ಮೌನ ಮುರಿದ ಮಿಲ್ಕಿ ಬ್ಯುಟಿ ತಮನ್ನಾ!
Baahubali The Beginning: 10 ವರ್ಷದ ಬಳಿಕ ಬಾಹುಬಲಿ ವಿವಾದದ ಬಗ್ಗೆ ಮೌನ ಮುರಿದ ಮಿಲ್ಕಿ ಬ್ಯುಟಿ ತಮನ್ನಾ!
Tamannaah Bhatia Controversy: ಸೂಪರ್ ಹಿಟ್ ಬಾಹುಬಲಿ ಚಿತ್ರದಲ್ಲಿ ತಮನ್ನಾ ನಟಿಸಿದ ದೃಶ್ಯವು ವರ್ಷಗಳ ನಂತರ ಚರ್ಚೆಗೆ ಗ್ರಾಸವಾಗಿದ್ದು, ಇದರ ಬಗ್ಗೆ ನಟಿ ಇದೀಗ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.

ತಮನ್ನಾ ಸ್ಪಷ್ಟನೆ
ಬಾಹುಬಲಿ ಚಿತ್ರದ ಒಂದು ದೃಶ್ಯವು ವರ್ಷಗಳ ನಂತರ ಚರ್ಚೆಗೆ ಗ್ರಾಸವಾಗಿದೆ. ಈ ದೃಶ್ಯದ ಬಗ್ಗೆ ನಟಿ ತಮನ್ನಾ ಭಾಟಿಯಾ ಸ್ಪಷ್ಟನೆ ನೀಡಿದ್ದಾರೆ. ಬಾಹುಬಲಿ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗಿತ್ತು. ಇದೀಗ ಮೊದಲ ಭಾಗದ ಹಾಡಿನ ಸೀನ್ ಬಗ್ಗೆ ಉಂಟಾಗಿದ್ದ ವಿವಾದ ಮುನ್ನಲೆಗೆ ಬಂದಿದೆ.
ಏನಿದು ವಿವಾದ?
ಬಾಹುಬಲಿ ಚಿತ್ರದಲ್ಲಿಆವಂತಿಕಾ ಆಗಿ ತಮನ್ನಾ ಕಾಣಿಸಿಕೊಂಡಿದ್ದರು. ಭಾಗ-2ರಲ್ಲಿಯೂ ಆವಂತಿಕ ಪಾತ್ರ ಮುಂದುವರಿದ್ದರೂ ಅವಧಿ ತುಂಬಾ ಕಡಿಮೆಯಾಗಿತ್ತು. ಬಾಹುಬಲಿ ಬಿಗಿನ್ನಿಂಗ್‌ನಲ್ಲಿ ಬಾಹುಬಲಿ ಶಿವು, ಪ್ರೇಯಸಿ ಅವಂತಿಕಾಳನ್ನು ಅಲಂಕರಿಸುತ್ತಾನೆ. ಈ ಸಂದರ್ಭದಲ್ಲಿ ಆವಂತಿಕಾ ಬಟ್ಟೆ ತೆಗೆಯುವ ದೃಶ್ಯಗಳಿವೆ. ಈ ದೃಶ್ಯದಲ್ಲಿ ತಮನ್ನಾ ಧರಿಸಿದ್ದ ಮೇಲುಡುಗೆಯನ್ನು ನಟ ಪ್ರಭಾಸ್ ಕಳಚುತ್ತಾರೆ. ಈ ಒಂದು ಸನ್ನಿವೇಶ ಚರ್ಚೆಗೆ ಗ್ರಾಸವಾಗಿತ್ತು.
ಇದು ದೌರ್ಜನ್ಯ ಅಲ್ಲ, ಸ್ವ-ಅನ್ವೇಷಣೆ: ತಮನ್ನಾ
ಈ ದೃಶ್ಯವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದು ದೌರ್ಜನ್ಯವಲ್ಲ, ಅವಂತಿಕಳ ಸ್ವ-ಅನ್ವೇಷಣೆ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ನಿರ್ದೇಶಕರ ದೃಷ್ಟಿಕೋನ
ಚಿತ್ರದ ಸನ್ನಿವೇಶ ಮತ್ತು ನಿರ್ದೇಶಕರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ತಮನ್ನಾ ಹೇಳಿದ್ದಾರೆ. ಬಾಹುಬಲಿ ಚಿತ್ರದ ನಿರ್ದೇಶಕರಾದ ರಾಜಮೌಳಿ ಇಬ್ಬರು ನಟಿಯರನ್ನು ಅತ್ಯದ್ಭುತವಾಗಿ ತೋರಿಸಿದ್ದಾರೆ.