ಭಾರತೀಯ ಮಹಿಳಾ ಕ್ರಿಕೆಟರ್ Mithali Raj ಪಾತ್ರದಲ್ಲಿ Taapsee Pannu !
ತಾಪ್ಸಿ ಪನ್ನು (Taapsee Pannu)ಇತ್ತೀಚಿನ ದಿನಗಳಲ್ಲಿ ಅವರ ಬಹು ನಿರೀಕ್ಷಿತ ಚಿತ್ರ ಶಭಾಷ್ ಮಿಥುಗಾಗಿ (Shabaash Mithu) ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ (Mithali Raj)ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.ಚಿತ್ರದ ಹೊಸ ದಿನಾಂಕವನ್ನು ನಿರ್ಮಾಪಕರು ಇನ್ನೂ ಘೋಷಿಸಿಲ್ಲ. ಚಿತ್ರವನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದಾರೆ. ಕ್ರೀಡಾ ಪಟುಗಳನ್ನು ಆಧರಿಸಿ ಮಾಡಲಾದ ಚಿತ್ರ ಇದೇ ಮೊದಲಲ್ಲ. ಇದಕ್ಕೂ ಮೊದಲು ಕ್ರೀಡಾಪಟುಗಳ ಮೇಲೆ ಅನೇಕ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ.
ನಿರ್ದೇಶಕ ರಾಹುಲ್ ಧೋಲಾಕಿಯಾ ಅವರ ಶಭಾಶ್ ಮಿಥು ಚಿತ್ರದಲ್ಲಿ ತಾಪ್ಸಿ ಪನ್ನು ತುಂಬಾ ಸ್ಟ್ರಾಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಮಹಿಳಾ ತಂಡದ ನಾಯಕಿಯಾಗಲು ಕ್ರಿಕೆಟಿಗ ಮಿಥಾಲಿ ರಾಜ್‌ನ ಹೋರಾಟದ ಕಥೆಯನ್ನು ಚಿತ್ರ ತೋರಿಸಲಿದೆ.
ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರ ಜೀವನಾಧಾರಿತ ಮೇರಿ ಕೋಮ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ಪ್ರಿಯಾಂಕಾ ತುಂಬಾ ಶ್ರಮಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ
ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತ್ತು. ಈ ಚಿತ್ರ ಕುಸ್ತಿಪಟು ಗೀತಾ ಫೋಗಟ್ ಅವರ ಜೀವನಾಧಾರಿತ ಚಿತ್ರವಾಗಿತ್ತು. ತಂದೆ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮಗಳನ್ನು ಹೇಗೆ ಕುಸ್ತಿಪಟುವನ್ನಾಗಿ ಮಾಡುತ್ತಾನೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಬಬಿತಾ ಫೋಗಟ್ ಪಾತ್ರವನ್ನು ಫಾತಿಮಾ ಸನಾ ಶೇಖ್ ನಿರ್ವಹಿಸಿದ್ದಾರೆ.
ಅನುಷ್ಕಾ ಶರ್ಮಾ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಜೂಲನ್ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಕೆಲವು ತಿಂಗಳ ಹಿಂದೆ ಬಿಡುಗಡೆಯಾದ 83 ಚಿತ್ರವು ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನಚರಿತ್ರೆಯಾಗಿದೆ. ಈ ಚಿತ್ರವು 1983 ರ ವಿಶ್ವಕಪ್ ಅನ್ನು ಆಧರಿಸಿದೆ. ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ನಿರ್ವಹಿಸಿದ್ದಾರೆ. ಆದರೆ, ಕೊರೋನಾ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಗಲಿಲ್ಲ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ಸಹ ಚಲನಚಿತ್ರವನ್ನು ನಿರ್ಮಿಸಲಾಗಿದೆ. ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಧೋನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.
ಸ್ಪ್ರಿಂಟರ್ ಮಿಲ್ಕಾ ಸಿಂಗ್ ಅವರ ಜೀವನವನ್ನು ಆಧರಿಸಿದ ಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿ ಫರ್ಹಾನ್ ಅಖ್ತರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ಥಿಯೇಟರ್‌ಗಳಲ್ಲಿ ಸಖತ್ ಸದ್ದು ಮಾಡಿತ್ತು.
ಭಾರತೀಯ ಹಾಕಿ ಆಟಗಾರ ಸಂದೀಪ್ ಸಿಂಗ್ ಅವರ ಜೀವನಾಧಾರಿತ ಸೂರ್ಮಾ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸಂದೀಪ್ ಅವರ ಜೀವನದ ಹೋರಾಟವನ್ನು ತೋರಿಸಲಾಗಿದೆ.