- Home
- Entertainment
- Cine World
- ಪಂಚ್ ಡೈಲಾಗ್, ಸ್ಟೈಲಿಶ್ ಲುಕ್: ರಜನಿಕಾಂತ್ ‘ಕೂಲಿ’ ಟ್ರೇಲರ್‌ನಲ್ಲಿ ಉಪ್ಪಿ ಜೊತೆ ರಚಿತಾ ರಾಮ್ ಇದ್ದಾರಾ?
ಪಂಚ್ ಡೈಲಾಗ್, ಸ್ಟೈಲಿಶ್ ಲುಕ್: ರಜನಿಕಾಂತ್ ‘ಕೂಲಿ’ ಟ್ರೇಲರ್‌ನಲ್ಲಿ ಉಪ್ಪಿ ಜೊತೆ ರಚಿತಾ ರಾಮ್ ಇದ್ದಾರಾ?
ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕೂಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಕೂಲಿ ಚಿತ್ರ ತಮಿಳು ಸಿನಿಮಾದಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ವಿಕ್ರಮ್, ಲಿಯೋ, ಮಾಸ್ಟರ್ ಬ್ಲಾಕ್ ಬಸ್ಟರ್ ಚಿತ್ರಗಳ ನಿರ್ದೇಶಕ ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ನಾಯಕರಾಗಿ ನಟಿಸಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್, ತೆಲುಗು ನಟ ನಾಗಾರ್ಜುನ, ಕನ್ನಡ ನಟ ಉಪೇಂದ್ರ, ಮಲಯಾಳಂ ನಟ ಸೌಬಿನ್ ಷಾಹಿರ್, ಸತ್ಯರಾಜ್, ಶ್ರುತಿ ಹಾಸನ್ ಮುಂತಾದವರು ನಟಿಸಿರುವ ಮಲ್ಟಿಸ್ಟಾರ್ಸ್ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ.
ಕೂಲಿ ಚಿತ್ರಕ್ಕೆ ಅನಿರುದ್ ಸಂಗೀತ ನೀಡಿದ್ದಾರೆ. ಲೋಕೇಶ್ - ಅನಿರುದ್ ಜೋಡಿ ಎಂದರೆ ಹಾಡುಗಳು ಸೂಪರ್ ಹಿಟ್. ಕೂಲಿ ಚಿತ್ರದಲ್ಲಿ ಬಿಡುಗಡೆಯಾದ ಮೂರು ಹಾಡುಗಳು ಈಗಾಗಲೇ ಸೂಪರ್ ಹಿಟ್. ಮೋನಿಕಾ ಹಾಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿದೆ. ಸೌಬಿನ್ ಷಾಹಿರ್ ಜೊತೆ ಪೂಜಾ ಹೆಗ್ಡೆ ನೃತ್ಯ ಮಾಡಿದ್ದಾರೆ. ಚಿತ್ರಕ್ಕೆ ಗಂಗಾಧರನ್ ಛಾಯಾಗ್ರಹಣ ಮಾಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರದಲ್ಲೂ ಇವರೇ ಛಾಯಾಗ್ರಾಹಕರಾಗಿದ್ದರು.
ಕೂಲಿ ಚಿತ್ರ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೆ ಎರಡು ವಾರಗಳು ಬಾಕಿ ಇರುವುದರಿಂದ, ಕೂಲಿ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ನಿರ್ದೇಶಕ ಲೋಕೇಶ್ ಕನಕರಾಜ್ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಕೂಲಿ ಚಿತ್ರದ ಸಂಗೀತ ಬಿಡುಗಡೆ ಸಮಾರಂಭ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಸದ್ಯ ಚಿತ್ರತಂಡವು ಕೂಲಿ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಕೂಲಿ ಚಿತ್ರದ ಟ್ರೇಲರ್ ಆಕ್ಷನ್ ದೃಶ್ಯಗಳಿಂದ ತುಂಬಿದೆ. ನಾಗಾರ್ಜುನ, ಸೌಬಿನ್ ಷಾಹಿರ್, ಅಮೀರ್ ಖಾನ್ ದೃಶ್ಯಗಳು ಮೊದಲು ಕಾಣಿಸಿಕೊಂಡರೆ, ರಜನಿ ಎಂಟ್ರಿ ಸಖತ್ ಮಾಸ್ ಆಗಿದೆ. ಈ ವಯಸ್ಸಿನಲ್ಲೂ ಆಕ್ಷನ್ ದೃಶ್ಯಗಳಲ್ಲಿ ಖಳನಾಯಕರನ್ನು ಮಟ್ಟಹಾಕಿದ್ದಾರೆ. ಅವರ ಸ್ಟೈಲಿಶ್ ಎಂಟ್ರನ್ಸ್ ಲುಕ್, ಪಂಚ್ ಡೈಲಾಗ್ ಗಳು, ಆಕ್ಷನ್ ದೃಶ್ಯಗಳು ಮತ್ತು ಮಾಸ್ ಶೈಲಿಯ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತವೆ. ಟ್ರೇಲರ್‌ನಲ್ಲಿ ಸ್ಯಾಂಡಲ್‌ವುಡ್‌ನ ರಚಿತಾ ರಾಮ್ ಸಹ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ಈ ಚಿತ್ರ ಪಕ್ಕಾ ಕಮರ್ಷಿಯಲ್ ಪ್ಯಾಕೇಜ್ ಎಂದು ಟ್ರೇಲರ್ ನೋಡಿದರೆ ತಿಳಿಯುತ್ತದೆ. ಸದ್ಯ ಯೂಟ್ಯೂಬ್‌ನಲ್ಲಿ ಟ್ರೇಲರ್ ವೈರಲ್ ಆಗುತ್ತಿದೆ.