- Home
- Entertainment
- Cine World
- Madhuban Controversy: ಸನ್ನಿ ಡ್ಯಾನ್ಸ್‌ನಲ್ಲಿ ಅಶ್ಲೀಲ ದೃಶ್ಯ, ಧಾರ್ಮಿಕ ಭಾವನೆಗೆ ಧಕ್ಕೆ, ಬ್ಯಾನ್‌ಗೆ ಡಿಮ್ಯಾಂಡ್!
Madhuban Controversy: ಸನ್ನಿ ಡ್ಯಾನ್ಸ್‌ನಲ್ಲಿ ಅಶ್ಲೀಲ ದೃಶ್ಯ, ಧಾರ್ಮಿಕ ಭಾವನೆಗೆ ಧಕ್ಕೆ, ಬ್ಯಾನ್‌ಗೆ ಡಿಮ್ಯಾಂಡ್!
ಇತ್ತೀಚೆಗೆ ಬಿಡುಗಡೆಯಾದ ಸಿಂಗರ್ ಕನ್ನಿಕಾ ಕಪೂರ್ (Kannika Kapoor) ಮಧುಬನ್ (Madhuban) ಮ್ಯೂಸಿಕ್ ವಿಡಿಯೋ ಸದ್ದು ಮಾಡುತ್ತಿದೆ. ಸನ್ನಿ ಲಿಯೋನ್ (Sunny Leone) ಹೆಜ್ಜೆ ಹಾಕಿರುವ ಈ ಹಾಡು ತೊಂದರೆಯಲ್ಲಿದೆ. ಈ ಹಾಡು ಧಾರ್ಮಿಕ ಭಾವನೆಗಳಿಗೆ ಉಂಟುಮಾಡುತ್ತಿದೆ ಎಂದು ನೆಟ್ಟಿಗ್ಗರು ಆರೋಪಿಸಿದ್ದಾರೆ ಹಾಗೂ ಇದನ್ನು ಬ್ಯಾನ್ ಮಾಡಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ನಟಿಸಿರುವ ಹೊಸ ಮ್ಯೂಸಿಕ್ ಮಧುಬನ್ ವಿಡಿಯೋ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬರುತ್ತಿರುವುದರಿಂದ ಸನ್ನಿ ಲಿಯೋನ್ ಈ ಬಾರಿ ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಸಿಂಗರ್ ಕನ್ನಿಕಾ ಕಪೂರ್ ಅವರ ಸನ್ನಿ ಲಿಯೋನ್ ನಟಿಸಿರುವ ಮಧುಬನ್ ಹಾಡು ವೈರಲ್ ಆಯಿತು. ಆದರೆ ಇದು ಈಗ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಧಾರ್ಮಕ ಭಾವನೆಗೆಳಿಗೆ ದಕ್ಕೆ ಉಂಟುಮಾಡುತ್ತಿದೆ ಎಂದು ಅರೋಪಿಸಿ ಬ್ಯಾನ್ ಮಾಡಲು ಆಗ್ರಹಿಸುತ್ತಿದ್ದಾರೆ.
'ಮಧುಬನ್' ಶೀರ್ಷಿಕೆಯು ಅಸ್ಸಾಂನ ಪವಿತ್ರ ಸ್ಥಳವನ್ನು ಅಪಹಾಸ್ಯ ಮಾಡುತ್ತದೆ ಎಂದು ಅನೇಕ ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. 'ಮಧುಬನ್ ಮೇ ರಾಧಿಕಾ ಎನ್ನುವುದು ಎಮೋಷನ್. ಸರೆಗಮ ಪವಿತ್ರ ಭಾವನೆಗೆ ಅಗೌವರ ತೋರಿಸಿದೆ. ಇದನ್ನು ಕ್ರಿಯೇಟಿವಿಟಿ ಎನ್ನುವುದಿಲ್ಲ' ಎಂದು ಒಬ್ಬ ಯೂಸರ್ ಬರೆದಿದ್ದಾರೆ.
ನಮ್ಮ ಭಜನೆ ಮಧುಬನ್ ಮೇ ರಾಧಿಕಾ ಅನ್ನು ದುರುಪಯೋಗ ಮಾಡಿದ್ದಿರಿ, ನಿಮಗೆ ನಾಚಿಕೆ ಆಗಬೇಕು. ಈ ಸಾಹಿತ್ಯದಿಂದ ನೀವುಗಳು ಕೆಟ್ಟ ಐಟಂ ಸಾಂಗ್ ಮಾಡಿದ್ದರೀರಾ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸನ್ನಿ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಮೇಲೆ ನೆಟ್ಟಿಗ್ಗರು ವಾಗ್ದಾಳಿ ನೆಡೆಸಿದ್ದಾರೆ ಮತ್ತು ಹಲವರು ದ್ವೇಷಪೂರಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಮತ್ತು ಹಾಡಿನ YouTube ವೀಡಿಯೊದ ಕಾಮೆಂಟ್‌ಗಳನ್ನು ಸಹ ಆಫ್ ಮಾಡಲಾಗಿದೆ.
ಲಿಯೋನ್ ತೊಂದರೆಗೆ ಸಿಲುಕಿರುವುದು ಇದೇ ಮೊದಲಲ್ಲ, ಆದರೆ, ಇತ್ತೀಚಿನ ವಿವಾದವು ಅವರ ಕೆಲಸದಲ್ಲಿ ಕೋಲಾಹಲವನ್ನು ಉಂಟುಮಾಡುವ ಸಾಧ್ಯತೆಯಿದೆ. ಕನಿಕಾ ಕಪೂರ್ ಅವರ ಗಾಯನದೊಂದಿಗೆ ಸನ್ನಿ ಲಿಯೋನ್ ನಟಿಸಿದ ಇತ್ತೀಚಿನ ಹಾಡು 'ಮಧುಬನ್' ಎಲ್ಲಾ ತಪ್ಪು ಕಾರಣಗಳಿಗಾಗಿ ಚರ್ಚೆಯಲ್ಲಿದೆ.
ಇತ್ತೀಚಿನ ಹಾಡಿನಲ್ಲಿ ಸನ್ನಿಯನ್ನು ಸೆಕ್ಸಿ ಔಟ್‌ಫಿಟ್ ತೋರಿಸಲಾಗಿದೆ, ಆದಾಗ್ಯೂ, ಸಾಹಿತ್ಯ ಮತ್ತು ಅದರ ವಿಷಯವು ನಟಿಯನ್ನು ವಿವಾದಕ್ಕೆ ತಳ್ಳುತ್ತಿದೆ. ಶರೀಬ್-ತೋಷಿಯ ಅವರ ಸಂಗೀತದ ಕನ್ನಿಕಾ ಕಪೂರ್ ಗಾಯನದ 'ನಾಚೆ... ಮಧುಬನ್ ಮೇ ರಾಧಿಕಾ' ಹಾಡಿಗೆ ರಾಗಿಣಿ ಎಂಎಂಎಸ್ 2 ನಟಿ ಸನ್ನಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
,'ನಮಗೆ ಗ್ಯಾರಂಟಿ ಇದೆ ಈ ಹಾಡು, 'ಮಧುಬನ್' ಹಿಟ್ ಆಗಲಿದೆ ಮತ್ತು ಚಾರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಮಧುಬನ್ ಈ ವರ್ಷದ ಅತಿದೊಡ್ಡ ಪಾರ್ಟಿ ಗೀತೆಯಾಗಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ಹುಡುಗರೇ ವೀಕ್ಷಿಸಿ ಅದನ್ನು ಮತ್ತು ನಿಮ್ಮ ರೀಲ್‌ಗಳನ್ನು ಮಾಡಿ' ಎಂದು ಕೆಲವು ದಿನಗಳ ಹಿಂದೆ, ಸನ್ನಿ ಆತ್ಮವಿಶ್ವಾಸದಿಂದ ಹೇಳಿದರು.
ಆದರ ತನ್ನ ಹಾಡಿಗೆ ಇಂತಹ ಪ್ರತಿಕ್ರಿಯೆಗಳು ಬರಬಹುದು ಮತ್ತು ಹಾಡಿನಿಂದ ತೊಂದರೆಗೆ ಸಿಲುಕಬಹುದು ಎಂದು ಸನ್ನಿ ಊಹಿಸಿರಲಿಲ್ಲ. ಕೆಲಸದ ಮುಂಭಾಗದಲ್ಲಿ, ಸನ್ನಿ ಶೀಘ್ರದಲ್ಲೇ ವೆಬ್ ಸರಣಿ 'ಅನಾಮಿಕಾ' ಮತ್ತು 'ಶೆರೋ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.