ಮಗಳು ನಿಶಾ ಬರ್ತ್‌ಡೇ: ಮಮ್ಮಿ ಸನ್ನಿ ಲಿಯೋನ್‌ನ ಭಾವುಕ ಪತ್ರ
- ಸನ್ನಿ ಲಿಯೋನ್ ಮಗಳ 6 ವರ್ಷದ ಬರ್ತ್‌ಡೇ
- ನಿಶಾಗೆ ವಿಶ್ ಮಾಡಿದ ಬಾಲಿವುಡ್ ನಟಿ
ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ತಮ್ಮ ಮಗಳು ನಿಶಾ ಅವರ ಹುಟ್ಟುಹಬ್ಬವನ್ನು ಗುರುವಾರ ಆಚರಿಸಿದ್ದಾರೆ. ಬರ್ತ್‌ಡೇ ಸಂಭ್ರಮದ ಚಂದದ ಫೋಟೋಗಳನ್ನು ದಂಪತಿ ಹಂಚಿಕೊಂಡಿದ್ದಾರೆ.
ಸನ್ನಿ ಸಂಭ್ರಮಾಚರಣೆಯ ಹಲವಾರು ಫೋಟೋ ಶೇರ್ ಮಾಡಿದ್ದು ಆರು ವರ್ಷದ ಮಗುವಿಗೆ ಹುಟ್ಟುಹಬ್ಬದ ಚಂದದ ವಿಶ್ ಕೂಡಾ ಮಾಡಿದ್ದಾರೆ.
ಅವರು ಒಟ್ಟಿಗೆ ಪೋಸ್ ನೀಡುವ ಹಲವಾರು ಫೋಟೋಗಳನ್ನು ಹಂಚಿಕೊಂಡ ಸನ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಮಗಳಿಗಾಗಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ.
ನನ್ನ ಸ್ಪೆಷಲ್ ಹುಡುಗಿ ಮಗು ನಿಶಾ ವೆಬರ್‌ಗೆ ಜನ್ಮದಿನದ ಶುಭಾಶಯಗಳು! ಇಂದು 6 ವರ್ಷ ತುಂಬಿದೆ. ನನಗೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ! ಎಂದಿದ್ದಾರೆ
ಅಷ್ಟು ದೊಡ್ಡ ಹುಡುಗಿ! ನಿಮ್ಮ ಪಾಪ ಮತ್ತು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ! ನೀನು ನಮ್ಮ ಜೀವನದ ಬೆಳಕು !!ಲವ್ ಯೂ ಮಗಳೇ! ಎಂದಿದ್ದಾರೆ.
ಮೊದಲನೆಯದು ಸನ್ನಿ ಮತ್ತು ಡೇನಿಯಲ್ ಅವರು ಮೂವರು ಮಕ್ಕಳು ಅವರ ನಡುವೆ ಕುಳಿತಿದ್ದ ಫ್ಯಾಮಿಲಿ ಫೋಟೋ. ಹುಟ್ಟುಹಬ್ಬದ ಹುಡುಗಿ ನಿಶಾ ಮಧ್ಯದಲ್ಲಿ ವರ್ಣರಂಜಿತ ಫ್ರಾಕ್‌ನಲ್ಲಿ ಮಿಂಚಿದ್ದಾಳೆ.
ಅವಳ ಕೂದಲಿನಲ್ಲಿ ಕೆಂಪು ರಿಬ್ಬನ್. ನಿಶಾ ತನ್ನ ಅವಳಿ ಸಹೋದರರಾದ ಆಶರ್ ಮತ್ತು ನೋಹ್ ಜೊತೆ ಪ್ರತ್ಯೇಕವಾಗಿ ಪೋಸ್ ನೀಡಿದ ಚಿತ್ರಗಳೂ ಇವೆ.
ಸನ್ನಿ ತನ್ನ ಹೊಸ ಮನೆಯಲ್ಲಿ ಸನ್ನಿ ಆಯೋಜಿಸಿದ್ದ ಹುಟ್ಟುಹಬ್ಬದ ಒಂದು ಗ್ರೂಪ್ ಫೋಟೋ ಹಂಚಿಕೊಂಡಿದ್ದಾರೆ. ಈ ವರ್ಷ ಜುಲೈನಲ್ಲಿ ಕುಟುಂಬವು ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.
ಪಾರ್ಟಿಯಲ್ಲಿ ಹಾಜರಿದ್ದ ಪ್ರತಿಯೊಬ್ಬರನ್ನು ಟ್ಯಾಗ್ ಮಾಡಿದ ಸನ್ನಿ ನಮ್ಮ ಕುಟುಂಬವು ಅದೃಷ್ಟಶಾಲಿಯಾಗಿರುವುದಕ್ಕೆ ಕಾರಣ ನೀವು! ನಿಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿದಿನ ನನ್ನ ಜೀವನ ಮತ್ತು ನನ್ನ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತೀರಿ !! ಲವ್ ಯೂ ಆಲ್ ಎಂದಿದ್ದಾರೆ
ಸನ್ನಿ ಮತ್ತು ಡೇನಿಯಲ್ ನಿಶಾಗೆ ಕೇವಲ 21 ತಿಂಗಳಿದ್ದಾಗ ಮಹಾರಾಷ್ಟ್ರದ ಲಾತೂರ್ ಹಳ್ಳಿಯಿಂದ ಅವಳನ್ನು ದತ್ತು ಪಡೆದಿದ್ದರು. ಸನ್ನಿ ಒಮ್ಮೆ ಸಂದರ್ಶನದಲ್ಲಿ ನಿಶಾಳನ್ನು ದತ್ತು ಬಗ್ಗೆ ಮಾತನಾಡಿದ್ದಾರೆ.
Sunny Leone
ನಿಜವಾಗಿ ನಾವು ಈ ಸಂಗತಿಯನ್ನು ಅವಳಿಗೆ ತಿಳಿಸಬೇಕು. ದತ್ತು ಪತ್ರಗಳಿಂದ ಹಿಡಿದು ಎಲ್ಲವನ್ನೂ ಅವಳಿಗೆ ತೋರಿಸಲಾಗುತ್ತದೆ. ನಿಶಾ ತನ್ನ ತಾಯಿ ಆಕೆಯನ್ನು ತೊರೆಯಲಿಲ್ಲ ಎಂಬ ಸತ್ಯವನ್ನು ತಿಳಿದುಕೊಳ್ಳಬೇಕು. ಅವಳು ಒಂಬತ್ತು ತಿಂಗಳು ನಿಶಾಳನ್ನು ಹೆತ್ತಳು. ನಾನು ಅವಳ ನಿಜವಾದ ತಾಯಿಯಲ್ಲ. ಆದರೆ ನಾನು ಅವಳ ಆತ್ಮದೊಂದಿಗೆ ಬೆಸೆದುಕೊಂಡಿದ್ದೇನೆ. ಅವಳನ್ನು ದತ್ತು ತೆಗೆದುಕೊಂಡ ನಂತರ ನಾನು ಅವಳ ತಾಯಿ ಎಂದಿದ್ದರು.