ಭಾಗ್ಯಶ್ರೀ ವಯಸ್ಸು ರಿವರ್ಸ್ ಗೇರಲ್ಲಿ ಓಡ್ತಿದ್ಯಾ: 55ರಲ್ಲೂ ಫಿಟ್&ಫೈನ್ ಆಗಿರುವ ಮೈನೇ ಪ್ಯಾರ್ ಕಿಯಾ ನಟಿ
ಸಲ್ಮಾನ್ ಖಾನ್ ನಟನೆಯ ಮೈನೆ ಪ್ಯಾರ್ ಕಿಯಾದ ಸಾಧು ಸುಮನ್ ಅಂದ್ರೆ ಎಲ್ಲರಿಗೂ ತಟ್ಟನೇ ನೆನಪಾಗೋದು ನಟಿ ಭಾಗ್ಯಶ್ರೀ. ಪ್ರಸ್ತುತ ಅವರಿಗೆ 55ರ ಹರೆಯ. ಈ ವಯಸ್ಸಲ್ಲೂ ಅವರು ಯುವತಿಯರಂತೆ ಕಂಗೊಳಿಸುತ್ತಿದ್ದು, 35 ವರ್ಷಗಳಲ್ಲಿ ಅವರ ಲುಕ್ ಪೂರ್ತಿ ಬದಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಇತ್ತೀಚಿನ ಫೋಟೋಸ್ ನೋಡಿ ಅಭಿಮಾನಿಗಳು ಸ್ಟನ್ ಆಗಿದ್ದಾರೆ.
ಸೂರಜ್ ಬಡ್ಜಾತ್ಯಾ ನಿರ್ದೇಶನದ 'ಮೈನೆ ಪ್ಯಾರ್ ಕಿಯಾ' ರಿಲೀಸ್ ಆಗಿ 35 ವರ್ಷಗಳೇ ಕಳೆದಿವೆ. ಈ ಸಿನಿಮಾದಲ್ಲಿ ಭಾಗ್ಯಶ್ರೀ ಸಿಂಪಲ್ ಹುಡುಗಿ ಸುಮನ್ ಪಾತ್ರ ಮಾಡಿದ್ದರು. ಆದರೆ ಈಗ ಈ ಸುಮನ್ ಗ್ಲಾಮರ್ ಕ್ವಿನ್ ಬದಲಾಗಿದ್ದು, 55ರ ಹರೆಯದಲ್ಲೂ ಅವರ ಈ ಬದಲಾವಣೆ ಫಿಟ್‌ನೆಸ್ ನಿರ್ವಹಣೆ ಮಾಡಿರುವುದು ಅಭಿಮಾನಿಗಳನ್ನು ಅಚ್ಚರಿಗೆ ದೂಡಿದೆ.
ಸಲ್ಮಾನ್ ಖಾನ್ ನಟನೆಯ ಮೈನೆ ಪ್ಯಾರ್ ಕಿಯಾದ ಸಾಧು ಸುಮನ್ ಅಂದ್ರೆ ಎಲ್ಲರಿಗೂ ತಟ್ಟನೇ ನೆನಪಾಗೋದು ನಟಿ ಭಾಗ್ಯಶ್ರೀ. 'ಮೈನೆ ಪ್ಯಾರ್ ಕಿಯಾ' ಭಾಗ್ಯಶ್ರೀ ಅವರ ಮೊದಲ ಸಿನಿಮಾ. ಈ ಸಿನಿಮಾ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಎಲ್ಲರ ಬಾಯಲ್ಲೂ ಅವರ ಹೆಸರೇ ಇತ್ತು.
ಈ ಸಿನಿಮಾ ಬಿಡುಗಡೆಯಾಗಿ 35 ವರ್ಷಗಳೇ ಕಳೆದಿದ್ದು, 35 ವರ್ಷಗಳಲ್ಲಿ ಭಾಗ್ಯಶ್ರೀ ಲುಕ್ ತುಂಬಾ ಬದಲಾಗಿದೆ. ವಯಸ್ಸು ಮಾಗುತ್ತಿದ್ದಂತೆ ಅವರು ಇನ್ನಷ್ಟು ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತಿದ್ದಾರೆ.
'ಮೈನೆ ಪ್ಯಾರ್ ಕಿಯಾ' ನಂತರ ಭಾಗ್ಯಶ್ರೀ ಬೇರೆ ಸಿನಿಮಾಗಳಲ್ಲಿಯೂ ನಟಿಸಿದ್ರು, ಆದ್ರೆ ಮೊದಲ ಸಿನಿಮಾಗೆ ಸಿಕ್ಕಷ್ಟು ಜನಪ್ರಿಯತೆಯನ್ನು ಬೇರೆ ಸಿನಿಮಾಗಳಲ್ಲಿ ಗಳಿಸಲು ಸಾಧ್ಯವಾಗಲಿಲ್ಲ.
'ಮೈನೆ ಪ್ಯಾರ್ ಕಿಯಾ' ಶೂಟಿಂಗ್ ವೇಳೆಯೇ ಭಾಗ್ಯಶ್ರೀ ತಮ್ಮ ಬಾಯ್ ಫ್ರೆಂಡ್ ಹಿಮಾಲಯ ದಾಸಾನಿ ಜೊತೆ ಮದುವೆ ಆದ್ರು. ಆದ್ದರಿಂದ ಮೊದಲ ಫಿಲಂ ನಂತರ ಅವ್ರು ಹೆಚ್ಚಾಗಿ ಗಂಡನ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ರು.
ಭಾಗ್ಯಶ್ರೀ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಬೋಲ್ಡ್ ಎನಿಸುವ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ ಹಾಗೆಯೇ ಎಂಜಾಯ್ ಮಾಡ್ತಿರೋ ಫೋಟೋಸ್ ಕೂಡ ಹಾಕ್ತಿರ್ತಾರೆ
55 ವರ್ಷದ ಭಾಗ್ಯಶ್ರೀ ಫಿಟ್ನೆಸ್ ಬಗ್ಗೆ ತುಂಬಾ ಕೇರ್ ತಗೊಳ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರು ತಮ್ಮ ವರ್ಕೌಟ್ ವಿಡಿಯೋಗಳನ್ನು ಕೂಡ ಶೇರ್ ಮಾಡುತ್ತಿರುತ್ತಾರೆ.
ಮದುವೆ ಸಂಸಾರದ ನಂತರ ಆಕ್ಟಿಂಗ್ ನಿಂದ ದೂರ ಇದ್ದ ಭಾಗ್ಯಶ್ರೀ ಮತ್ತೆ ವಾಪಸ್ ಬಂದಿದ್ದು. ಟಿವಿ ಶೋಸ್ ಜೊತೆಗೆ ಬಾಲಿವುಡ್ ಮತ್ತು ಸೌತ್ ಫಿಲಂಗಳಲ್ಲೂ ನಟಿಸುತ್ತಿದ್ದಾರೆ.