- Home
- Entertainment
- Cine World
- Cannes Film Festival ಕ್ಯಾನ್ಸ್ ಚಲನ ಚಿತ್ರೋತ್ಸವದಲ್ಲಿ ಭಾರತೀಯ ನಿಯೋಗದ ಮೆರುಗು ಹೆಚ್ಚಿಸಿದ ಠಾಕೂರ್!
Cannes Film Festival ಕ್ಯಾನ್ಸ್ ಚಲನ ಚಿತ್ರೋತ್ಸವದಲ್ಲಿ ಭಾರತೀಯ ನಿಯೋಗದ ಮೆರುಗು ಹೆಚ್ಚಿಸಿದ ಠಾಕೂರ್!
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕ್ಯಾನ್ಸ್ ಚಲನಚಿತ್ರೋತ್ಸವಭಾರತೀಯ ನಿಯೋಗಕ್ಕೆ ಸಚಿವ ಅನುರಾಗ್ ಠಾಕೂರ್ ನೇತೃತ್ವರೆಡ್ ಕಾರ್ಪೆಟ್‌ನಲ್ಲಿ ಸ್ಟಾರ್ ನಟ ನಟಿಯರ ಜೊತೆ ಹೆಜ್ಜೆ ಹಾಕಿದ ಠಾಕೂರ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಭಾರತೀಯ ನಿಯೋಗ ಈಗಾಗಲೇ ಫ್ರಾನ್ಸ್ ತಲುಪಿದೆ. ಸ್ಟಾರ್ ನಟ ನಟಿಯರ ಭಾರತೀಯ ನಿಯೋಗವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮುನ್ನಡೆಸುತ್ತಿದ್ದಾರೆ.
ಕ್ಯಾನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಅನುರ್ ಠಾಕೂರ್‌ಗೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ, ಆರ್ ಮಾಧವನ್, ಸಂಗೀತ ನಿರ್ದೇಶ ರಿಕಿ ಕೇಜ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಾಥ್ ನೀಡಿದರು.
ಅನುರಾಗ್ ಠಾಕೂರ್ ನೇತೃತ್ವದ ಭಾರತದ ನಿಯೋಗದಲ್ಲಿ ಎ ಆರ್ ರೆಹಮಾನ್, ನವಾಜುದ್ದೀನ್ ಸಿದ್ದಿಕಿ, ನಯನತಾರಾ ಪೂಜಾ ಹೆಗ್ಡೆ, ಪ್ರಸೂನ್ ಜೋಶಿ, ಆರ್ ಮಾಧವನ್, ರಿಕಿ ಕೇಜ್, ಶೇಖರ್ ಕಪೂರ್, ತಮನ್ನಾ ಭಾಟಿಯಾ, ವಾಣಿ ತ್ರಿಪಾಠಿ ಮತ್ತು ಜಾನಪದ ಗಾಯಕ ಮಾಮ್ ಖಾನ್ ಸೇರಿದಂತೆ ಹಲವು ಪ್ರಮುಖರು ಜೊತೆಯಾಗಿದ್ದಾರೆ.
ಫ್ರಾನ್ಸ್ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಗೌರವ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸ್ಟಾರ್ ಸೆಲೆಬ್ರೆಟಿಗಳ ನಿಯೋಗದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ನಿರ್ದೇಶಿಸಿದ ಪ್ರತಿದ್ವಂದಿ ಚಿತ್ರದ ವಿಶೇಷ ಪ್ರದರ್ಶನವೂ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ನಡೆಯಲಿದೆ. ಇದರ ಜೊತೆಗೆ ಹಲವು ಭಾರತೀಯ ಚಲನ ಚಿತ್ರಗಳ ಪ್ರದರ್ಶನವೂ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಬಾಲಿವುಟ್ ನಟ ಅಕ್ಷಯ್ ಕುಮಾರ್ ಪಾಲ್ಗೊಳ್ಳಬೇಕಿತ್ತು. ಆದರೆ ಅಕ್ಷಯ ಕುಮಾರ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕಾನ್ಸ್ ಚಲನ ಚಿತ್ರೋತ್ಸವದ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.