ಸ್ಟಾರ್ ಡೈರೆಕ್ಟರ್ RGV ಅಂದ್ರೆ ಸುಮ್ನೇನಾ: ಆರಾಧ್ಯ ದೇವಿಯ ಹಾಟ್‌ನೆಸ್ ನೋಡಿದ್ರೆ ಆಹಾ.. ಓಹೋ.. ಅಂತೀರಾ!
ಟಾಲಿವುಡ್‌ನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಪರಿಚಯಿಸುವ ಯುವತಿಯರು ರಾತ್ರೋರಾತ್ರಿ ಖ್ಯಾತಿ ಪಡೆದ ಪಟ್ಟಿ ದೊಡ್ಡದಿದೆ. ಅದೇ ಪಟ್ಟಿಯಲ್ಲಿ ಆರಾಧ್ಯ ದೇವಿ ಅಲಿಯಾಸ್ ಶ್ರೀ ಲಕ್ಷ್ಮಿ ಸತೀಶ್ ಇದ್ದಾರೆ.
ರಾಮ್ ಗೋಪಾಲ್ ವರ್ಮಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಹಾಗೂ ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.
ಮಾಡೆಲ್‌ಗಳ ಜತೆ ಬಾರ್‌ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಇದೀಗ ಆರಾಧ್ಯ ದೇವಿ ಹಿಂದೆ ಬಿದಿದ್ದು, ಸದ್ಯ ಆಕೆ ಶೇರ್ ಮಾಡಿರುವ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇನ್‌ಸ್ಟಾಗ್ರಾಂನಲ್ಲಿ ಸೀರೆ ಉಟ್ಟುಕೊಂಡು ರೀಲ್ ವಿಡಿಯೋ ಮಾಡುತ್ತಿದ್ದ ಶ್ರೀಲಕ್ಷ್ಮಿ ದಿಢೀರ್ ಆರ್‌ಜಿವಿ ಗಮನ ಸೆಳೆದಿದ್ದು, ಈ ಸುಂದರಿಯ ಹಣೆಬರಹ ಬದಲಾಯಿತು. ಆರ್‌ಜಿವಿ ನಿರ್ದೇಶನದಲ್ಲಿ ಆರಾಧ್ಯ 'ಸಾರಿ' ಎಂಬ ಸಿನಿಮಾದಲ್ಲಿಯೂ ನಟ ಸಿನಿಮಾ ಮಾಡುತ್ತಿದ್ದಾರೆ. ಇದರಿಂದ ಈ ಚೆಲುವೆಯ ಫಾಲೋಯಿಂಗ್ ಸಾಕಷ್ಟು ಹೆಚ್ಚಿದೆ.
ಇದಲ್ಲದೇ ಆರಾಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಚೆಲುವೆಯ ಸೌಂದರ್ಯಕ್ಕೆ ಸಾಕಷ್ಟು ಜನ ಮನಸೋತಿದ್ದಾರೆ. ದಿನವೂ ಈಕೆಯ ಅಪ್‌ಡೇಟ್‌ಗಾಗಿ ಕಾಯುತ್ತಿರುತ್ತಾರೆ. ಆರಾಧ್ಯ ದೇವಿ ಇತ್ತೀಚಿಗೆ ನೆಟಿಜನ್‌ಗಳೊಂದಿಗೆ ಚಿಟ್-ಚಾಟ್ ಮಾಡುವಾಗ, ಹಲವು ವೈಯಕ್ತಿಕ ವಿಷಯಗಳನ್ನು ತೆರೆದಿಟ್ಟಿದ್ದರು.
ಅಲ್ಲದೆ ಅವರ ದೇಹದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕಣ್ಣೀರು ಸುರಿಸಿದ್ದರು. ದೇಹದ ಆಕಾರ, ಕರ್ವ್‌ಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ, ಇವು ಯಾವುವು ಸುಲಭವಾಗಿ ಬರುವುದಿಲ್ಲ, ಸಾಕಷ್ಟು ತ್ಯಾಗ ಮಾಡಬೇಕು ಎಂದು ಆರಾಧ್ಯ ಧೈರ್ಯವಾಗಿ ವಿವರಿಸಿದಳು.
ಒಂದು ಹಂತದಲ್ಲಿ ತಮ್ಮ ಮೇಲೂ ಬಾಡಿ ಶೇಮಿಂಗ್ ಕಮೆಂಟ್ಸ್ ಬಂದಿತ್ತು. ಟ್ರೋಲಿಂಗ್ ಕೂಡ ಮಾಡಲಾಗಿದೆ ಎಂದು ಆರಾಧ್ಯ ದೇವಿ ಹೇಳಿದ್ದಾರೆ. ಹೈದರಾಬಾದ್‌ನಲ್ಲಿರುವ ಈ ಚೆಲುವೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಾರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸದ್ಯ ಟಾಲಿವುಡ್ ಸಿನಿರಂಗಕ್ಕೆ ಆರ್‌ಜಿವಿ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಚೆಲುವೆಯ ಅದೃಷ್ಟ ಹೇಗಿದೆ ಅಂತ ಕಾಯ್ದು ನೋಡಬೇಕು. ವಿಶೇಷವಾಗಿ ಆರಾಧ್ಯ ಫೋಟೋ ಶೂಟ್‌ನಲ್ಲಿ ಸಖತ್ ಹಾಟ್ ಹಾಟ್ ಆಗಿ ಪಡ್ಡೆಹೈಕ್ಳ ಹೃದಯ ಕದಿದ್ದಾರೆ.