ಮುಂಬೈ ಏರ್ಪೋರ್ಟ್‌ನಲ್ಲಿ ಶಾರೂಖ್‌ನನ್ನು ತಡೆದ NCB ಆಫೀಸರ್ ವಾಂಖೆಡೆ
- ಮುಂಬೈ (Mumbai)ಏರ್ಪೋರ್ಟ್‌ನಲ್ಲಿ ಕಿಂಗ್‌ಖಾನ್‌ಗೆ ತಡೆ
- ಸ್ಟಾರ್ ನಟನ ತಡೆದ ಎನ್‌ಸಿಬಿ(NCB) ಅಧಿಕಾರಿ ವಾಂಖೆಡೆ
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ(Drugs Case) ತನಿಖೆಯ ಮುಖ್ಯಸ್ಥರಾಗಿರುವ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು 2011 ರಲ್ಲಿ ಕಸ್ಟಮ್ಸ್ ಸಹಾಯಕ ಕಮಿಷನರ್ ಆಗಿದ್ದಾಗ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ಶಾರುಖ್ ಖಾನ್ ಅವರನ್ನು ತಡೆದಿದ್ದರು.
ಹೌದು. ವಾಂಖೆಡೆ ಹಾಗೂ ಶಾರೂಖ್ ಆಗ ಮುಖಾಮುಖಿಯಾಗಿದ್ದರು. ಈಗ ಮತ್ತೆ ಆರ್ಯನ್ ಖಾನ್(Aryan Khan)ಡ್ರಗ್ಸ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಸುಮಾರು 20 ಬ್ಯಾಗ್‌ಗಳನ್ನು ಹೊಂದಿದ್ದ ಶಾರುಖ್ ಅವರನ್ನು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ನಂತರ ಶಾರುಖ್‌ಗೆ ₹1.5 ಲಕ್ಷ ಕಸ್ಟಮ್ಸ್ ಟ್ಯಾಕ್ಸ್ ಪಾವತಿಸುವಂತೆ ಕೇಳಲಾಯಿತು.
ಬಾಲಿವುಡ್ ಸ್ಟಾರ್ ನಟ ಟ್ಯಾಕ್ಸ್ ಪಾವತಿಸಿದ ನಂತರವೇ ಅವರಿಗೆ ಹೊರಹೋಗಲು ಅವಕಾಶ ನೀಡಲಾಯಿತು. ಇದು 2011ರಲ್ಲಿ ನಡೆದ ಘಟನೆ.
ಸದ್ಯ ಮುಂಬೈ(Mumbai) ಐಷರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ(Drugs Party) ನಡೆಸಿದ ಸಂಬಂಧ ಆರ್ಯನ್ ಖಾನ್‌ನನ್ನು ಬಂಧಿಸಲಾಗಿದ್ದು ಸ್ಟಾರ್ ಕಿಡ್‌ಗೆ ಹಲವು ಬಾರಿ ಜಾಮೀನು ನಿರಾಕರಿಸಲಾಗಿದೆ
ಇತ್ತ ಶಾರೂಖ್ ತಮ್ಮ ಪುತ್ರನ ಬಿಡಿಸಿಕೊಳ್ಳಲು ಬಹಳಷ್ಟು ಪ್ರಯತ್ನಪಡುತ್ತಿದ್ದು ಇತ್ತೀಚೆಗಷ್ಟೇ ಜೈಲಿನಲ್ಲಿರುವ ಮಗನನ್ನು ಭೇಟಿ ಮಾಡಿ ಬಂದಿದ್ದರು