ಶ್ರೀಮುರಳಿ ನಟನೆಯ 'ಪ್ರೀತಿಗಾಗಿ' ನಟಿ ಮುದ್ದು ಮೊಗದ ಶ್ರೀದೇವಿ ಈಗ ಡ್ರಾಮಾ ಜೂನಿಯರ್ ಜಡ್ಜ್
ತಮಿಳು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಸಿನಿಮಾರಂಗ ಪ್ರವೇಶಿಸಿದ ಕನ್ನಡ ಸಿನಿಮಾ 'ಪ್ರೀತಿಗಾಗಿ' ಯಲ್ಲಿ ನಟಿಸಿದ್ದ ಮುದ್ದು ಮೊಗದ ಚೆಲುವೆ ನಟಿ ಶ್ರೀದೇವಿ ಈಗ ಏನ್ ಮಾಡ್ತಿದ್ದಾರೆ ಗೊತ್ತಾ? ಮದುವೆ ಮಕ್ಕಳು ನಂತರ ಸಿನಿಮಾದಿಂದ ಬ್ರೇಕ್ ತಗೊಂಡಿದ್ದ ಅವರು ಈಗ ಏನ್ ಮಾಡ್ತಿದ್ದಾರೆ. ಇಲ್ಲಿದೆ ಡಿಟೇಲ್ಸ್.
ಅಪ್ಪ ಹಾಗೂ ಸೋದರಿ ಜೊತೆ ಶ್ರೀದೇವಿ
ನಟಿ ಶ್ರೀದೇವಿ ವಿಜಯ್‌ಕುಮಾರ್, ತಮಿಳಿನ ಆಟೋ ಮಾಮಾ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ವಿಜಯ್‌ಕುಮಾರ್ ಈಗ ಜೀ ತೆಲುಗುವಿನ ಡ್ರಾಮಾ ಜೂನಿಯರ್‌ನ ಜಡ್ಜ್.
sridevi vijayaykumar
2000ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿದ್ದ ಈ ಮುದ್ದು ಮುಖದ ಚೆಲುವೆ ನಂತರ ಮದುವೆ ಮಕ್ಕಳು ಕುಟುಂಬ ಅಂತ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿ ಹೋಗಿದ್ದರು.
sridevi vijayaykumar
ಈಗ ಅವರು ಮತ್ತೆ ತೆಲುಗು ಡ್ರಾಮಾ ಜೂನಿಯರ್‌ಗೆ ಸೀಸನ್ 6 ಕ್ಕೆ ಜಡ್ಜ್ ಆಗಿ ಬರುವ ಮೂಲಕ ಅಭಿಮಾನಿಗಳ ಮನ ರಂಜಿಸುತ್ತಿದ್ದಾರೆ. ತೆಲುಗು, ತಮಿಳು ಸೇರಿದಂತೆ ಅವರು ಕನ್ನಡದ ಕಾಂಚನಾ ಗಂಗಾ ಸಿನಿಮಾದಲ್ಲಿಯೂ ನಟಿಸಿದ್ದಾರೆ.
ಸಹೋದರಿ ಜೊತೆ ಶ್ರೀದೇವಿ
ತಮ್ಮ ಸಿನಿ ಪಯಣದ ಬಗ್ಗೆ ವೆಬ್‌ಸೈಟೊಂದರ ಜೊತೆ ಮಾತನಾಡಿದ ಈ ಕಾಂಚನಾ ಗಂಗಾದ ಉರ್ಮಿಳಾ, ನನ್ನ ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿ ಇದ್ದುದರಿಂದ ಸಿನಿಮಾ ರಂಗಕ್ಕೆ ನನ್ನ ಎಂಟ್ರಿ ಅನಿರೀಕ್ಷಿತವೇನು ಆಗಿರಲಿಲ್ಲ ಎಂದು ಹೇಳಿದ್ದಾರೆ.
sridevi vijayaykumar
1992ರಲ್ಲಿ ತಮಿಳು ಸಿನಿಮಾ ಆಟೋ ಮಾಮಾ ಮೂಲಕ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಶ್ರೀದೇವಿ, ಹೀರೋಯಿನ್ ಆಗುವವರೆಗೂ ಹಲವು ಸಿನಿಮಾಗಳಲ್ಲಿ ನಟಿಸುತಲೇ ಹೋದೆ ಎಂದು ಹೇಳಿದ್ದಾರೆ.
sridevi vijayaykumar
ತೆಲುಗಿನಲ್ಲಿ ಪ್ರಭಾಸ್ ನಟನೆಯ ಈಶ್ವರ್ ನನ್ನ ಮೊದಲ ಸಿನಿಮಾವಾಗಿತ್ತು. ತಮಿಳು, ತೆಲುಗು ಕನ್ನಡದಲ್ಲಿ ನಟಿಸಿದ್ದ ನಾನು ಮದುವೆಯಾಗಿ ಸೆಟಲ್ ಆದೆ. ದೊಡ್ಡದೊಂದು ಬ್ರೇಕ್‌ನ ನಂತರ ರವಿತೇಜ ನಟನೆಯ ತೆಲುಗು ಸಿನಿಮಾ ವೀರ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಮರಳಿದೆ ಎಂದರು.
sridevi vijayaykumar
ಮಗಳು ಹುಟ್ಟಿದ ನಂತರ ನಾನು ಯಾವುದೇ ಸಿನಿಮಾ ಮಾಡಲಿಲ್ಲ, ಆದರೆ ಸಿನಿಮಾ ರಂಗ ಬಿಟ್ಟೆ ಮತ್ತೆ ವಾಪಸ್ ಬಂದೆ ಎಂದು ನನಗೆ ಎಂದೂ ಅನಿಸಲೇ ಇಲ್ಲ, ಏಕೆಂದರೆ ನಾನು ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾರಂಗದೊಂದಿಗೆ ಸಂಪರ್ಕದಲ್ಲೇ ಇದ್ದೇ ಎಂದು ಹೇಳ್ತಾರೆ 'ಪ್ರೀತಿಗಾಗಿ' ನಟಿ.
sridevi vijayaykumar
ಟಿವಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು ಎಲ್ಲರ ಮನೆಯಲ್ಲಿ ಟಿವಿ ಇರುವುದರಿಂದ ಹೆಚ್ಚಿನ ಜನರನ್ನು ತಲುಪಲಾಗುತ್ತದೆ. ಇದು ನನಗೆ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ.
ಪತಿ ಮಗಳೊಂದಿಗೆ ಶ್ರೀದೇವಿ
ಡ್ರಾಮಾ ಜೂನಿಯರ್ ಮಕ್ಕಳ ಬಗ್ಗೆ ಮಾತನಾಡಿದ ಅವರು ಈಗಿನ ಮಕ್ಕಳ ಟ್ಯಾಲೆಂಟ್ ನೋಡಿದರೆ ಅಚ್ಚರಿ ಆಗುತ್ತದೆ. ಐದು ವರ್ಷದವಳಿರುವಾಗಲೇ ನಾ ಸಿನಿಮಾದಲ್ಲಿ ಅಭಿನಯಿಸಿದ್ದರೂ ಆಗಕ್ಕೂ ಈಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಅವರು ಹೇಳಿದರು.
sridevi vijayaykumar
ಇನ್ನು ಶ್ರೀದೇವಿ ಅಪ್ಪ ವಿಜಯ್‌ಕುಮಾರ್ ಅಮ್ಮಮಂಜುಳಾ ಇಬ್ಬರೂ ಕೂಡ ಸಿನಿಮಾ ರಂಗದವರೇ, ಇವರ ಅಮ್ಮ ದಿವಂಗತ ನಟಿ ಮಂಜುಳಾ ದಕ್ಷಿಣ ಭಾರತದ ತೆಲುಗು ತಮಿಳು, ಕನ್ನಡ ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.
ಪತಿ ಮಗಳೊಂದಿಗೆ ಶ್ರೀದೇವಿ
ಇಬ್ಬರು ಸಹೋದರಿ, ಓರ್ವ ಸಹೋದರನನ್ನು ಹೊಂದಿರುವ ಶ್ರೀದೇವಿ, ಕನ್ನಡದಲ್ಲಿ ಶ್ರೀಮುರಳಿ ನಟನೆಯ ಪ್ರೀತಿಗಾಗಿ ಕಾಂಚನ ಗಂಗಾ, ಲಕ್ಷ್ಮಣ ಸಿನಿಮಾದಲ್ಲಿ ನಟಿಸಿದ್ದಾರೆ.