ಶ್ರೀದೇವಿ ಪುಣ್ಯ ತಿಥಿ: ನಟಿಯ ಆಸ್ತಿಯೆಲ್ಲ ಮಾರಿದ್ದರಾ ಬೋನಿ ಕಪೂರ್?
ಬಾಲಿವುಡ್‌ನ ಎವರ್‌ಗ್ರೀನ್ ದಿವಾ ಶ್ರೀದೇವಿ ನಮ್ಮನ್ನಗಲಿ ಮೂರು ವರ್ಷಗಳಾಗಿವೆ. ಈ ನಟಿಯ ಅಕಾಲಿಕ ಸಾವು ಅಭಿಮಾನಿಗಳಿಗೆ ನಿಜಕ್ಕೂ ಒಂದು ದೊಡ್ಡ ಶಾಕ್. ಶ್ರೀದೇವಿಯವರ ಹತ್ತಿರದ ಸಂಬಂಧಿ ವೇಣುಗೋಪಾಲ್ /ರೆಡ್ಡಿ ಸಂದರ್ಶನವೊಂದರಲ್ಲಿ ನಟಿಯ ಬಗ್ಗೆ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿದೆ ವಿವರ.

ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್ ಶ್ರೀದೇವಿಯ ಅಕಾಲಿಕ ನಿಧನದ ಸುದ್ದಿ ಇಡೀ ದೇಶಕ್ಕೆ ಆಘಾತವನ್ನುಂಟುಮಾಡಿತ್ತು

ಶ್ರೀದೇವಿ ಪತಿ ಬೋನಿ ಕಪೂರ್ ಮತ್ತು ಮಗಳು ಖುಷಿ ಕಪೂರ್ ಅವರೊಂದಿಗೆ ದುಬೈನಲ್ಲಿ ಮೋಹಿತ್ ಮಾರ್ವಾ ಮತ್ತು ಅಂತಾರಾ ಮೋತಿವಾಲಾ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಹೋಗಿದ್ದರು.

ವಿವಾಹದ ನಂತರ, ಶ್ರೀದೇವಿ ಮತ್ತು ಬೋನಿ ಹಿರಿಯ ಮಗಳು ಜಾನ್ವಿ ಕಪೂರ್‌ಗೆ ಗಿಫ್ಟ್ ಖರೀದಿಸಲು ದುಬೈನಲ್ಲೇ ಉಳಿಯಲು ನಿರ್ಧರಿಸಿದ್ದರು.ಆದರೆ ನಟಿ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ನಿಧನರಾದರು.

ಅವರ ನಿಧನದ ನಂತರ, ಶ್ರೀದೇವಿಯ ಚಿಕ್ಕಪ್ಪ ವೇಣುಗೋಪಾಲ್ ರೆಡ್ಡಿ ಶ್ರೀದೇವಿ ಅವರ ಜೀವನದ ಸುತ್ತಲಿನ ಕೆಲವು ಅಪರಿಚಿತ ಸಂಗತಿಗಳು, ಪತಿ ಬೋನಿ ಕಪೂರ್ ಜೊತೆ ಸಂಬಂಧ, ಅವರ ಕಾಸ್ಮೇಟಿಕ್ ಸರ್ಜರಿ ಮತ್ತು ಆಸ್ತಿಯ ಬಗ್ಗೆ ಮಾತನಾಡಿದರು .

ನಟಿ ಹೃದಯದಲ್ಲಿ ದುಃಖವನ್ನು ತುಂಬಿಕೊಂಡು ನಿಧನರಾದರು ಎಂದು ಸಂದರ್ಶನವೊಂದರಲ್ಲಿ ವೇಣುಗೋಪಾಲ್ ರೆಡ್ಡಿ ಹೇಳಿದ್ದಾರೆ.

'ನಮಗೆ ತಿಳಿದಿರುವುದಂತೆ ಬೋನಿ ಕೆಲವು ಚಲನಚಿತ್ರಗಳಲ್ಲಿ ಬಹಳಷ್ಟು ಹಣವನ್ನು ಕಳೆದುಕೊಂಡರು. ನಷ್ಟವನ್ನು ಸರಿದೂಗಿಸಲು ಮತ್ತು ಅವರ ಸಾಲ ತೀರಿಸಲು ಅವರು ಶ್ರೀದೇವಿಯ ಆಸ್ತಿಗಳನ್ನು ಮಾರಿದರು. ಶ್ರೀದೇವಿ ಯಾವಾಗಲೂ ತನ್ನ ಹೃದಯದಲ್ಲಿ ಆ ನೋವನ್ನು ಹೊಂದಿದ್ದಳು ಮತ್ತು ನೆಮ್ಮದಿಯಾಗಿರಲಿಲ್ಲ. ಅವಳು ಪ್ರಪಂಚಕ್ಕಾಗಿ ಮುಖದ ಮೇಲೆ ಕೃತಕ ಸ್ಮೈಲ್ ಧರಿಸಿದ್ದಳು, ಆದರೆ ಅವಳು ಒಳಗೆ ಸಾಕಷ್ಟು ಕೊರಗುತ್ತಿದ್ದಳು' ಎಂದು ಹೇಳಿದ್ದರು ರೆಡ್ಡಿ

'ಬೋನಿ ಒಂದು ಚಿತ್ರವನ್ನು ನಿರ್ಮಿಸಿದರು. ಅದು ಎಂದಿಗೂ ತೆರೆ ಕಾಣಲಿಲ್ಲ, ಆದ್ದರಿಂದ ಶ್ರೀದೇವಿ ಮತ್ತೆ ಚಿತ್ರಗಳಲ್ಲಿ ನಟಿಸಲು ಫ್ರಾರಂಭಿಸಿದಳು' ಎಂದು ಅವರು ಹೇಳಿದರು.

ಅವಳು ಯುಎಸ್‌ಗೆ ಪ್ರಯಾಣಿಸಿ ಮೂಗಿನ ಒಂದೆರಡು ಸರ್ಜರಿ ಮಾಡಿಸಿಕೊಂಡಿದ್ದಳು. ಚೆನ್ನಾಗಿ ಕಾಣಬೇಕೆಂದು ಅವಳು ಬಯಸಿದ್ದಳು. ನಾವು ಅವಳ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಕೇಳಿದಾಗ ಶಸ್ತ್ರಚಿಕಿತ್ಸೆಗಳ ಬಗ್ಗೆ ತಿಳಿಯಿತು' ಎಂದು ರೆಡ್ಡಿ ಶ್ರೀದೇವಿಯ ಕಾಸ್ಮೇಟಿಕ್ ಸರ್ಜರಿಗಳ ಬಗ್ಗೆಯೂ ಮಾತನಾಡಿದರು.

ಶ್ರೀದೇವಿಯ ತಾಯಿ ಜೊತೆ ಬೋನಿಯ ಸಂಬಂಧ ಒಳ್ಳೆಯ ಸ್ಥಿತಿಯಲ್ಲಿ ಇರಲಿಲ್ಲ ಎಂದೂ ಅವರು ಬಹಿರಂಗ ಪಡಿಸಿದರು.

'ಶ್ರೀದೇವಿಯು ಬೋನಿಯನ್ನು ಮದುವೆಯಾಗುವುದನ್ನು ಅವರ ತಾಯಿ ಇಷ್ಟಪಡಲಿಲ್ಲ. ಅವನು ಮನೆಗೆ ಬಂದ ಒಂದೆರಡು ಸಂದರ್ಭಗಳಲ್ಲಿ ಅವರ ತಾಯಿ ಅವನಿಗೆ ಸರಿಯಾಗಿ ಟ್ರೀಟ್ ಮಾಡಲಿಲ್ಲ ಆದರೆ ಬೋನಿ ಮತ್ತು ಶ್ರೀದೇವಿ ಮದುವೆಯಾಗಲು ಬಯಸಿದ್ದರು. ಶ್ರೀದೇವಿಯ ತಾಯಿ ನಮ್ಮೆಲ್ಲರೊಂದಿಗೆ ಚರ್ಚಿಸಿದ್ದರು. ಆದರೆ ಅಂತಿಮವಾಗಿ, ಅವರಿಬ್ಬರು ಮದುವೆಯಾದರು' ಎಂದು ಹೇಳಿದ್ದಾರೆ ರೆಡ್ಡಿ