ತಂದೆ ತಾಯಿನೇ ತಲೆ ಕೆಡಿಸಿಕೊಂಡಿಲ್ಲ ಜನರಿಗೇನು?: ಮದುವೆ ವದಂತಿಗೆ ಸೋನಾಕ್ಷಿ ಬ್ರೇಕ್
ಮದುವೆ ಯಾವಾಗ ಎಂದು ಪದೇ ಪದೇ ಪ್ರಶ್ನೆ ಮಾಡುವ ನೆಟ್ಟಿಗರಿಗೆ ತಿರುಗೇಟು ಕೊಟ್ಟ ನಟಿ ಸೋನಾಕ್ಷಿ

ಬಾಲಿವುಡ್ ನಟಿ ಸೋನಾಕ್ಷಿ ಮತ್ತು ಉದ್ಯಮಿ ಜಹೀರ್ ಇಕ್ಬಾಲ್ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ಎಲ್ಲೆಡೆ ಹರಿದಾಡುತ್ತಿದೆ.
ಸೋನಾಕ್ಷಿ ಎಲ್ಲೇ ಹೋದರು ಜನರು ಮದುವೆ ಬಗ್ಗೆ ಕೇಳುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮೊದಲು ಸಲ್ಮಾನ್ ಖಾನ್ ಜೊತೆ ಹೆಸರು ಕೇಳಿ ಬಂದಿತ್ತು ಈಗ ಜಹೀರ್ ಇಕ್ಬಾಲ್ ಹೆಸರು.
ವದಂತಿಗೆ ಬ್ರೇಕ್ ಹಾಕಬೇಕೆಂದು ಸೋನಾಕ್ಷಿ ಖಾಸಗಿ ವೆಬ್‌ವೊಂದರಲ್ಲಿ ಮಾತನಾಡಿದ್ದಾರೆ. ನನ್ನ ಮದುವೆ ಬಗ್ಗೆ ನನ್ನ ತಂದೆ ತಾಯಿ ತಲೆ ಕೆಡಿಸಿಕೊಂಡಿಲ್ಲ.
ಮದುವೆಗಿಂತ ಹೆಚ್ಚಾಗಿ ನಾನು ಕೆಲಸದ ಲೈಫ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವೆ. ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಬೇಕು ಹಾಗೆ ಗಾಸಿಪ್ ಕೂಡ ಮಾಡಬೇಕು.
ನನ್ನ ಪರ್ಸನಲ್ ಲೈಫ್ ಬಗ್ಗೆ ಜನರ ಜೊತೆ ಚರ್ಚೆ ಮಾಡುವುದಕ್ಕೆ ಇಷ್ಟವಿಲ್ಲ. ಪೋಷಕರೇ ಪ್ರಶ್ನೆ ಮಾಡುತ್ತಿಲ್ಲ ಅಂದ ಮೇಲೆ ಜನರಿಗೆ ಯಾಕೆ ಕ್ಯೂರಿಯಾಸಿಟಿ? ಎಂದಿದ್ದಾರೆ.
ಡಬಲ್ XL ಸಿನಿಮಾದಲ್ಲಿ ಸೋನಾಕ್ಷಿ ಮತ್ತು ಹುಮಾ ಅಭಿನಯಿಸುತ್ತಿದ್ದಾರೆ. ಸತ್ರಾಮ್ ರಮಣಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ಜನರಲ್ಲಿ ನಿರೀಕ್ಷೆ ಹೆಚ್ಚಿದೆ.