ಮಕ್ಕಳ ಡ್ರಗ್ಸ್ ಪ್ರಕರಣದಿಂದ ಹಿಡಿದು ಸ್ಟ್ರಿಂಗ್ ಅಪ್‌ರೇಷನ್ ವರೆಗೆ Shakti Kapoor ಹಗರಣಗಳು
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಶಕ್ತಿ ಕಪೂರ್ (Shakti Kapoor) ಪುತ್ರ ಸಿದ್ಧಾಂತ್ ಕಪೂರ್ (Siddhant Kapoor) ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ. ಅಂದಹಾಗೆ, ಶಕ್ತಿ ಕಪೂರ್ ಅವರ ಕುಟುಂಬದ ಇತಿಹಾಸವನ್ನು ನೋಡಿದರೆ, ಅದು ವಿವಾದಗಳೊಂದಿಗೆ ದೊಡ್ಡ ಸಂಬಂಧವನ್ನು ಹೊಂದಿದೆ. ಶಕ್ತಿ ಕಪೂರ್ ಕುಟುಂಬದ 5 ದೊಡ್ಡ ವಿವಾದಗಳು ಇವು.
ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಈ ಹಿಂದೆ ಕೂಡ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದರು. 2008ರಲ್ಲಿ ಮುಂಬೈನಲ್ಲಿ ನಡೆದ ಈ ರೇವ್ ಪಾರ್ಟಿಯಿಂದ ಸಿದ್ಧಾಂತ್ ಸೇರಿದಂತೆ ಸುಮಾರು 240 ಯುವಕರು ಸಿಕ್ಕಿಬಿದಿದ್ದರು. ಮುಂಬೈ ಪೊಲೀಸರು ನಡೆಸಿದ ದಾಳಿಯ ಸ್ಥಳದಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು, ಇದರಲ್ಲಿ 104 ಎಕ್‌ಸ್ಟಸಿ ಮಾತ್ರೆಗಳು, ಅದರ 540 ಹನಿಗಳು ಚರಸ್ ಮತ್ತು ಕೊಕೇನ್ ಸೇರಿವೆ. ವರದಿಗಳ ಪ್ರಕಾರ, ಪಾರ್ಟಿಯಿಂದ 8 ಡ್ರಗ್ ಪೆಡ್ಲರ್‌ಗಳನ್ನು ಸಹ ಬಂಧಿಸಲಾಗಿದೆ. ಆದರೆ, ಸಿದ್ದಾಂತ್ ಕಪೂರ್ ವೈದ್ಯಕೀಯ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದ್ದು, ಮಧ್ಯಾಹ್ನದ ವೇಳೆಗೆ ಆತನನ್ನು ಪೊಲೀಸರು ಬಿಡುಗಡೆಗೊಳಿಸಿದ್ದರು.
2005 ರಲ್ಲಿ ಶಕ್ತಿ ಕಪೂರ್ ಅವರ ಸ್ಟಿಂಗ್ ಆಪರೇಷನ್ ತುಂಬಾ ಚರ್ಚೆಯಾಗಿತ್ತು. ಈ ಕುಟುಕು ಕಾರ್ಯಾಚರಣೆಯನ್ನು ಇಂಡಿಯಾ ಟಿವಿ ನಡೆಸಿತ್ತು. ಈ ಯೋಜನೆಯ ಭಾಗವಾಗಿ, ಚಾನೆಲ್‌ನ ಮಹಿಳಾ ಪತ್ರಕರ್ತೆ ಶಕ್ತಿ ಕಪೂರ್ ಬಳಿ ಹೋಗಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ಶಕ್ತಿ ಕಪೂರ್ ಮಹಿಳೆಯಿಂದ ಲೈಂಗಿಕ ಸಹಾಯವನ್ನು ಕೇಳಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆದಿದ್ದವು. ಇದನ್ನು ಖಾಸಗಿತನದ ಉಲ್ಲಂಘನೆ ಎಂದೂ ಕರೆಯಲಾಗುತ್ತಿತ್ತು. ಆದರೆ ಈ ಪ್ರಕರಣದಿಂದಾಗಿ ಶಕ್ತಿ ಕಪೂರ್ ಬಹಳ ಕುಖ್ಯಾತಿ ಪಡೆದಿದ್ದರು. ಚಿತ್ರರಂಗದಿಂದಲೂ ಅವರು ನಿಷೇಧವನ್ನು ಎದುರಿಸಬೇಕಾಯಿತು.
ಸಿದ್ದಾಂತ್ ಕಪೂರ್ ಅವರಂತೆ, ಅವರ ಸಹೋದರಿ ಶ್ರದ್ಧಾ ಕಪೂರ್ ಕೂಡ ಡ್ರಗ್ಸ್ ಸೇವಿಸಿದ್ದಾರೆ ಎಂಬ ಆರೋಪವಿದೆ. 2020 ರಲ್ಲಿ, ಅವರು ಈ ಕಾರಣಕ್ಕಾಗಿ ಸಾಕಷ್ಟು ಚರ್ಚೆಯಲ್ಲಿದ್ದರು. ಸುಶಾಂತ್ ಸಿಂಗ್ ರಜಪೂತ್‌ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಶ್ರದ್ಧಾ ಕಪೂರ್ ಜೊತೆಗೆ ಅನೇಕ ಬಾಲಿವುಡ್ ನಟಿಯರ ಹೆಸರಿತ್ತು. ವಾಸ್ತವವಾಗಿ, ಸುಶಾಂತ್ ಅವರ ಟ್ಯಾಲೆಂಟ್ ಮ್ಯಾನೇಜರ್ ಜಯ ಸಹಾ ಮತ್ತು ಶ್ರದ್ಧಾ ಕಪೂರ್ ಅವರ ವಾಟ್ಸಾಪ್ ಚಾಟ್ ಬೆಳಕಿಗೆ ಬಂದಿತ್ತು, ಇದರಲ್ಲಿ ಶ್ರದ್ಧಾ ಜಯಾ ಅವರಿಂದ ಸಿಬಿಡಿ ಆಯಿಲ್‌ನ ಬೇಡಿಕೆಯಿಡುತ್ತಿದ್ದರು. ಇದು ಒಂದು ರೀತಿಯ ಡ್ರಗ್ಸ್ ಆಗಿದೆ. ನಂತರ, ಸುಶಾಂತ್ ಅವರ ಫಾರ್ಮ್‌ಹೌಸ್‌ನಲ್ಲಿ ನಡೆದ 'ಚಿಚೋರೆ' ಯಶಸ್ಸಿನ ಪಾರ್ಟಿಯಲ್ಲಿ ಅವರು ಡ್ರಗ್ಸ್ ಸೇವಿಸಿದ ಆರೋಪವನ್ನೂ ಎದುರಿಸಿದ್ದರು. ಆದರೆ, NCBಮುಂದೆ ನೀಡಿದ ಹೇಳಿಕೆಯಲ್ಲಿ, ಶ್ರದ್ಧಾ ತಾನು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನಿರಾಕರಿಸಿದ್ದರು
ಶ್ರದ್ಧಾ ಕಪೂರ್, ಚಿತ್ರವೊಂದರಿಂದ ವಿವಾದಗಳಿಗೆ ಸಿಲುಕಿದ್ದರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿಯ ಜೀವನಾಧಾರಿತ ಚಿತ್ರವಾಗಿರುವ 'ಹಸೀನಾ ಪರ್ಕರ್' ಚಿತ್ರವಾಗಿದಲ್ಲಿ ಶ್ರದ್ಧಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಡುಪು ತಯಾರಿಕಾ ಕಂಪನಿಯು ಶ್ರದ್ಧಾ ಕಪೂರ್ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು. ಚಿತ್ರದೊಂದಿಗೆ ಆ ಕಂಪೆನಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಚಿತ್ರದಲ್ಲಿ ಅಥವಾ ಅದರ ಪ್ರಚಾರದ ಸಮಯದಲ್ಲಿ, ಅವರ ಬ್ರ್ಯಾಂಡ್ ಅನ್ನು ಪ್ರಚಾರ ತಂಡ ಮಾಡಲಿಲ್ಲ ಎಂದು ಆರೋಪಿಸಿದರು. . ಈ ಪ್ರಕರಣದಲ್ಲಿ, ವಂಚನೆ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಗೆ ಸಂಬಂಧಿಸಿದ ಆರೋಪಗಳನ್ನು ತನಿಖೆ ಮಾಡಲು ಅಂಬೋಲಿ ಪೊಲೀಸ್ ಠಾಣೆಗೆ ಅಂಧೇರಿ ಮೆಟ್ರೋಪಾಲಿಟನ್ ಕೋರ್ಟ್ ಆದೇಶಿಸಿತ್ತು.
ಶ್ರದ್ಧಾ ಕಪೂರ್ ಕೂಡ 2014 ರಲ್ಲಿ ಪಾಪರಾಜಿಗಳಿಂದ ನಿಷೇಧವನ್ನು ಎದುರಿಸಿದ್ದರು. ಏರ್‌ಪೋರ್ಟ್‌ನಲ್ಲಿ ಹಾಗೂ ಕಾರ್ಯಕ್ರಮದ ವೇಳೆ ನಟಿ ಮಾಧ್ಯಮಗಳಿಗೆ ಪೋಸ್ ನೀಡಿರಲಿಲ್ಲ ಎನ್ನಲಾಗಿದೆ. ಪಾಪರಾಜಿಗಳು ಗಂಟೆಗಟ್ಟಲೆ ಅವರಿಗಾಗಿ ಕಾಯುತ್ತಿದ್ದರು. ಆದರೆ ಶ್ರದ್ಧಾ ಅವನನ್ನು ನಿರ್ಲಕ್ಷಿಸಿ ತಲೆ ತಗ್ಗಿಸಿ ನಡೆಯುತ್ತಿದ್ದರು. ಈ ಕೃತ್ಯದಿಂದಾಗಿ ಮಾಧ್ಯಮಗಳು ಅವರ ಬಗ್ಗೆ ಸುದ್ದಿ ಮಾಡುವುದನ್ನು ನಿಲ್ಲಿಸಿದ್ದವು.