ನಟಿ ಶ್ವೇತಾ ಆಸ್ಪತ್ರೆಗೆ ದಾಖಲು: ಜಾಸ್ತಿ ಸುಂದರವಾಗಿ ಕಾಣಿಸ್ಕೊಳೋಕೋದ್ರೆ ಇದೇ ಆಗೋದು ಎಂದ ಪತಿ
- ಖತರೋಂಕ ಖಿಲಾಡಿ ಖ್ಯಾತಿಯ ಸಂತೂರ್ ಮಮ್ಮಿ ಶ್ವೇತಾ ತಿವಾರಿ ಆಸ್ಪತ್ರೆಗೆ ದಾಖಲು
- ಸಖತ್ ಫಿಟ್ ಆಗಿ ಅಚ್ಚರಿ ಮೂಡಿಸಿದ ನಟಿ
- ಜಾಸ್ತಿ ಚಂದ ಕಾಣ್ಬೇಕಂತ ಏನೇನೋ ಮಾಡಿದ್ರೆ ಇದೇ ಆಗೋದು ಎಂದ ಪತಿ
ಖತ್ರೋನ್ ಕೆ ಖಿಲಾಡಿ 11 ಸ್ಪರ್ಧಿ ಶ್ವೇತಾ ತಿವಾರಿ(Shweta Tiwari) ಇತ್ತೀಚೆಗೆ ದೌರ್ಬಲ್ಯ ಮತ್ತು ಕಡಿಮೆ ರಕ್ತದೊತ್ತಡದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವೇತಾ ತಂಡವು ಹೇಳಿಕೆಯಲ್ಲಿ ನಟಿ ಹೆಚ್ಚು ಪ್ರಯಾಣ ಮಾಡಿದ್ದಲ್ಲದೆ ಹವಾಮಾನ ಬದಲಾವಣೆಯೂ ಸೇರಿಕೊಂಡು ವಿಶ್ರಾಂತಿ ಕೊರತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ
ಆಕೆಯ ತಂಡದ ಪ್ರಕಾರ ಆಕೆ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ನಟಿ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗುತ್ತಾರೆ ಎನ್ನಲಾಗಿದೆ.
ಹಾಟ್ ಲುಕ್‌ನಲ್ಲಿ ಶ್ವೇತಾ: ನಿಮ್ಮ ಯವ್ವನ ಹೋಗ್ತಾನೆ ಇಲ್ಲ ಎಂದ ಫ್ಯಾನ್ಸ್
ಅರ್ಜುನ್ ಬಿಜ್ಲಾನಿ, ದಿವ್ಯಾಂಕ ತ್ರಿಪಾಠಿ, ವಿಶಾಲ್ ಆದಿತ್ಯ ಸಿಂಗ್ ಮತ್ತು ವರುಣ್ ಸೂದ್ ಜೊತೆಗೆ ಖತ್ರೋನ್ ಕೆ ಖಿಲಾಡಿಯ ಅಂತಿಮ ಸ್ಪರ್ಧಿಗಳಲ್ಲಿ ಶ್ವೇತಾ ಕೂಡ ಒಬ್ಬರು. ಅವರು ಇತ್ತೀಚೆಗೆ ಫೈನಲ್‌ಗಾಗಿ ಚಿತ್ರೀಕರಣಕ್ಕೆ ಹಾಜರಾಗಿದ್ದರು.
ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಪ್ರತಿಕ್ರಿಯಿಸಿದ ಶ್ವೇತಾ ಅವರ ಮಾಜಿ ಪತಿ ಅಭಿನವ್ ಕೊಹ್ಲಿ(Abhinav Kohli) ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ನೋಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ನಟ, ನಟಿಯರು ಮಿತಿ ಮೀರಿ ಹೋಗುತ್ತಾರೆ. ಕಡಿಮೆ ತಿನ್ನುತ್ತಾರೆ. ಅವರ ದೇಹವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಆಮೇಲೆ ಅವರ ಹೃದಯಕ್ಕೂ ಒಂದು ದಿನ ಸುಸ್ತಾಗುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ ಅವರ ಮಾಜಿ ಪತಿ.
ನನ್ನ ಮಗನನ್ನು ಭೇಟಿಯಾಗಲು ನನ್ನೊಂದಿಗೆ ಕಾನೂನಾತ್ಮಕವಾಗಿ ಹೋರಾಡುವುದು ಒಂದು ಬೇರೆ ವಿಷಯವಾಗಿದೆ. ಆ ವಿಚಾರ ಇದೀಗ ನ್ಯಾಯಾಲಯದಲ್ಲಿದೆ. ಆದರೆ ಶ್ವೇತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಗರಿಷ್ಠ ಪ್ರೇಕ್ಷಕರ ಪ್ರೀತಿಯನ್ನು ಪಡೆಯಲು ಅವರ ಅತ್ಯುತ್ತಮ ಮೈಕಟ್ಟು ಮತ್ತು ಸೌಂದರ್ಯವನ್ನು ಪ್ರಸ್ತುತಪಡಿಸಲು ನಟಿಯರು ಮಿತಿಗಳನ್ನು ಮೀಡರುತ್ತಾರೆ. ಕಡಿಮೆ ತಿನ್ನಿರಿ ಮತ್ತು ದೇಹವನ್ನು ಅತಿಯಾಗಿ ದಂಡಿಸುತ್ತಾರೆ. ಅಂತಿಮವಾಗಿ ಅವರ ಹೃದಯವು ಒಂದು ದಿನ ದಣಿದು ಸುಸ್ತಾಗಿಬಿಡುತ್ತದೆ ಎಂದಿದ್ದಾರೆ.