ತೂಕ ಇಳಿಸಿಕೊಂಡು ಹಾಟ್ ಫೋಟೋ ಶೇರ್ ಮಾಡಿಕೊಂಡ ಕಿರುತೆರೆ ನಟಿ!
ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ ತೂಕ ಇಳಿಸಿಕೊಂಡು ತಮ್ಮ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚಿನ ಅವರ ಫೋಟೋಶೂಟ್‌ನ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಟೋನ್ಡ್ ಆಬ್ಸ್ ಜೊತೆ ಪೋಸ್ ನೀಡಿರುವ ಶ್ವೇತಾರ ಪೋಟೋಗಳು ಸಖತ್ ಕಾಮೆಂಟ್ ಹಾಗೂ ಲೈಕ್ ಗಳಿಸಿವೆ.
ಸುಮಾರು 10 ಕೆಜಿಯಷ್ಟು ವೇಯಿಟ್ ಲಾಸ್ ಮಾಡಿಕೊಂಡ ನಟಿ ಶ್ವೇತಾ ತಿವಾರಿ ಫೋಟೋಶೂಟ್‌ಗೆ ಪೋಸ್ ನೀಡಿದ್ದಾರೆ.
40ರ ವಯಸ್ಸಿನ ಶ್ವೇತಾ ತಿವಾರಿ ತೂಕ ಇಳಿಸಿಕೊಂಡು 20 ವರ್ಷದ ಹುಡುಗಿ ಹಾಗೆ ಕಾಣುತ್ತಿದ್ದಾರೆ.
ನಟಿ ಪೋಟೋಶೂಟ್‌ನ 4 ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ಆರೆಂಜ್ ಕಲರ್ ಹೂವಿನ ಪ್ಯಾಂಟ್ ಸೂಟ್ ಧರಿಸಿ ಅದನ್ನು ನೀಲಿ ಟ್ಯೂಬ್ ಟಾಪ್ ಜೊತೆ ಪೇರ್ ಮಾಡಿದ್ದಾರೆ ಶ್ವೇತಾ.
ಲೇಯರ್ಡ್ ಚೈನ್ ಹಾಗೂ ಮ್ಯಾಂಚಿಗ್ ಹೀಲ್ಡ್ ಶೂ ಧರಿಸಿ ತಮ್ಮ ಲುಕ್ ಕಂಪ್ಲೀಟ್ ಮಾಡಿರುವ ಅವರು ನ್ಯೂಡ್ ಮೇಕಪ್ ಮತ್ತು ಓಪನ್ ಹೇರ್‌ನಲ್ಲಿ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ.
ಶ್ವೇತಾರ ಫ್ರೆಂಡ್ಸ್ ಮತ್ತು ನೆಟಿಜನ್‌ಗಳು ಈ ಫೊಟೋಗಳನ್ನು ಲೈಕ್ ಮಾಡಿ ಅವರ ಹಾರ್ಡ್‌ವರ್ಕ್ ಅನ್ನು ಹೊಗಳಿದ್ದಾರೆ.
ತೂಕ ಇಳಿಸುವುದು ಸುಲಭವಲ್ಲ. ತುಂಬಾ ಕಷ್ಟ. ಸಾಕಷ್ಟು ಡೇಡಿಕೇಷನ್, ಸೆಲ್ಫ್ ಕಂಟ್ರೋಲ್ ಹಾಗೂ ವಿಲ್ ಪವರ್ ಅಗತ್ಯ. ಆದರೆ ಅದು ಅಸಾಧ್ಯವೂ ಅಲ್ಲ ಎಂದು ಪೋಟೋ ಹಂಚಿಕೊಂಡು ಬರೆದು ಕೊಂಡಿದ್ದಾರೆ ಶ್ವೇತಾ ತಿವಾರಿ.