ಶ್ರದ್ಧಾ ಕಪೂರ್ ಬರ್ತ್‌ಡೇ ಸ್ಪೇಷಲ್: ನಟಿಯ ನೆಟ್‌ವರ್ತ್, ಮನೆ, ಆಸ್ತಿ ವಿವರ!
ಶಕ್ತಿ ಕಪೂರ್ (Shakti Kapoor) ಪುತ್ರಿ ಶ್ರದ್ಧಾ ಕಪೂರ್ (Shraddha Kapoor) 35 ವರ್ಷಕ್ಕೆ ಕಾಲಿಟ್ಟಿದ್ದಾರೆ. 3 ಮಾರ್ಚ್ 1987 ರಂದು ಮುಂಬೈನಲ್ಲಿ ಜನಿಸಿದ ಶ್ರದ್ಧಾ ಓದಿನಲ್ಲಿ ಸಹ ತುಂಬಾ ಚುರುಕಾಗಿದ್ದರು. ಆದರೆ ನಟನೆಯನ್ನು ಮುಂದುವರಿಸಲು ಅವರು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಜಮ್ನಾಬಾಯಿ ನರ್ಸೀ ಶಾಲೆ ಮತ್ತು ಅಮೇರಿಕನ್ ಸ್ಕೂಲ್ ಆಫ್ ಬಾಂಬೆಯಿಂದ ಮಾಡಿದ್ದಾರೆ. ಶ್ರದ್ಧಾ ಅವರು ಸೂಪರ್ ಫ್ಲಾಪ್ ತೀನ್ ಪತ್ತಿ ಚಿತ್ರದ ಮೂಲಕ ಇಂಡಸ್ಟ್ರಿಗೆ ಪ್ರವೇಶಿಸಿದ್ದರು, ಆದರೆ ಈ ಚಿತ್ರದಿಂದ ಅವರು ಯಾವುದೇ ಗುರುತನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ, ನಂತರ ಅವರು ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿದರು. ತನ್ನ 12 ವರ್ಷಗಳ ಸಿನಿಮಾ ಜೀವನದಲ್ಲಿ ಆಕೆ ಕೋಟಿಗಟ್ಟಲೆ ಆಸ್ತಿಯ ಒಡತಿಯಾಗಿದ್ದಾರೆ. ಶ್ರದ್ಧಾ ಕಪೂರ್ ಅವರ ಬಂಗಲೆ, ಕಾರುಗಳ ಕಲೆಕ್ಷನ್ ಮತ್ತು ಆಸ್ತಿಯ ವಿವರ ಇಲ್ಲಿದೆ.
ಶ್ರದ್ಧಾ ಕಪೂರ್‌ಗೆ ಮೊದಲಿನಿಂದಲೂ ನಟಿಯಾಗಬೇಕೆಂಬ ಆಸೆ ಇತ್ತು.ಅವರು ಪದವಿಗಾಗಿ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದರು. ಆದರೆ ಈ ಮಧ್ಯೆ ಅವರು ನಿರ್ಮಾಪಕ ಅಂಬಿಕಾ ಹಿಂದೂಜಾ ಅವರ ತೀನ್ ಪತ್ತಿ ಸಿನಿಮಾಕ್ಕೆ ಸಹಿ ಹಾಕಿದರು ಮತ್ತು ಈ ಚಿತ್ರಕ್ಕಾಗಿ ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು.
ಚಲನಚಿತ್ರಗಳು ಮಾತ್ರವಲ್ಲ, ಶ್ರದ್ಧಾ ಅವರ ಗಳಿಕೆಗಾಗಿ ಅನೇಕ ಬ್ರಾಂಡ್ ಅನುಮೋದನೆಗಳನ್ನು ಸಹ ಮಾಡುತ್ತಾರೆ. ಆಕೆ ಒಂದು ಚಿತ್ರಕ್ಕೆ ಸುಮಾರು 5 ಕೋಟಿ ರೂ ಚಾರ್ಜ್ ಮಾಡುತ್ತಾರೆ. ಶ್ರದ್ಧಾ ಕಪೂರ್ ನಟಿ ಮಾತ್ರವಲ್ಲದೆ ಗಾಯಕಿಯೂ ಹೌದು.
ಶ್ರದ್ಧಾ ಲೈವ್ ಪ್ರದರ್ಶನಗಳ ಜೊತೆಗೆ ಫ್ಯಾಷನ್ ಶೋಗಳಿಗೆ ಹಾಜರಾಗುತ್ತಾರೆ. ಕೆಲವು ವರ್ಷಗಳ ಹಿಂದೆ, ಶ್ರದ್ಧಾ ತನ್ನ ವಿಶೇಷ ಫ್ಯಾಷನ್ ಲೈನ್ 'ಎಮಾರಾ' ಅನ್ನು ಅಮೆಜಾನ್ ಸಹಯೋಗದೊಂದಿಗೆ ಪ್ರಾರಂಭಿಸಿದ್ದಾರೆ.
2014 ರಲ್ಲಿ ಏಕ್ ವಿಲನ್ ಮತ್ತು ಹೈದರ್ ಚಿತ್ರಗಳ ಯಶಸ್ಸಿನ ನಂತರ, ಶ್ರದ್ಧಾ ಕಪೂರ್ ಕಪ್ಪು ಮರ್ಸಿಡಿಸ್ ಎಂಎಲ್ ಕ್ಲಾಸ್ ಎಸ್ಯುವಿ ಖರೀದಿಸಿದರು. ಈ ಕಾರಿನ ಬೆಲೆ ಸುಮಾರು 1 ಕೋಟಿ ರೂಪಾಯಿ ಮತ್ತು ಇದು ಶ್ರದ್ಧಾ ಅವರ ಮೊದಲ ಕಾರು. ಶ್ರದ್ಧಾ ಅವರು ಮಿನಿ ಕೂಪರ್ ಮತ್ತು ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೊಂದಿದ್ದಾರೆ. ಶ್ರದ್ಧಾ ಕಪೂರ್ ಅವರ ಎಲ್ಲಾ ಮೂರು ಕಾರುಗಳ ಬೆಲೆ ಸುಮಾರು 3 ಕೋಟಿ ರೂ.
ವರದಿಗಳ ಪ್ರಕಾರ ಶ್ರದ್ಧಾ ಕಪೂರ್ ಮುಂಬೈನಲ್ಲಿ ಮೂರು ಮನೆಗಳನ್ನು ಹೊಂದಿದ್ದಾರೆ. ಅವರು ಜುಹುದಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ, ಇನ್ನೊಂದು ಮಡ್-ಐಲ್ಯಾಂಡ್‌ನ ಉಪನಗರ ಪ್ರದೇಶದಲ್ಲಿ ಮತ್ತು ಮೂರನೆಯದು ಮುಂಬೈ ಬಳಿಯ ಲೋನಾವಾಲಾದಲ್ಲಿ. ಈ ಮನೆ ಕೋಟಿಗಟ್ಟಲೆ ಬೆಲೆ ಬಾಳುತ್ತೆ.
ತೀನ್ ಪತ್ತಿ ಸಿನಿಮಾದ ನಂತರ, ಶ್ರದ್ಧಾ ಕಪೂರ್ ನಿರ್ದೇಶಕ ಪುನಿತ್ ಮಲ್ಹೋತ್ರಾ ಅವರ ಚಲನಚಿತ್ರ ಲವ್ ಕಾ ದಿ ಎಂಡ್ ಮಾಡಿದರು. ಆದರೆ ಮೋಹಿತ್ ಸೂರಿ ನಿರ್ದೇಶನದ ಆಶಿಕಿ 2 ಸಿನಿಮಾದಿಂದ ಶ್ರದ್ಧಾ ಬ್ರೇಕ್ ಪಡೆದರು. ಈ ಚಿತ್ರಕ್ಕಾಗಿ ಅವರು ಯಶ್ ರಾಜ್ ಪ್ರೊಡಕ್ಷನ್ಸ್ ಜೊತೆಗಿನ ಮೂರು ಚಿತ್ರಗಳ ಒಪ್ಪಂದವನ್ನು ಮುರಿದರು.
ವಾಸ್ತವವಾಗಿ, ಶ್ರದ್ಧಾ ಕಪೂರ್ ಲವ್ ಕಾ ದಿ ಎಂಡ್ ಮಾಡಿದಾಗ, ಅವರು ಯಶ್ ರಾಜ್ ಅವರೊಂದಿಗೆ ಇನ್ನೂ ಎರಡು ಚಿತ್ರಗಳಿಗೆ ಸಹಿ ಹಾಕಿದ್ದರು, ಅದರಲ್ಲಿ ಒಂದು ಅರ್ಜುನ್ ಕಪೂರ್ ಅಭಿನಯದ ಔರಂಗಜೇಬ್. ಆದರೆ ಆಶಿಕಿ 2 ಗಾಗಿ ವಿಶೇಷ್ ಪ್ರೊಡಕ್ಷನ್ಸ್ ಅವರನ್ನು ಸಂಪರ್ಕಿಸಿದಾಗ, ಅವರು ಯಶ್ ರಾಜ್ ಅವರೊಂದಿಗಿನ ಒಪ್ಪಂದವನ್ನು ಮುರಿದರು.
ಶ್ರದ್ಧಾ ಕಪೂರ್ ಅವರ ತಂದೆ ಮಾತ್ರವಲ್ಲ, ತಾಯಿ ಶಿವಾಂಗಿ ಕಪೂರ್ ಕೂಡ ನಟಿಯಾಗಿದ್ದಾರೆ. ಅವರು ಕೆಲವೇ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ನಟನೆಯನ್ನು ತೊರೆದರು. ಶಕ್ತಿ ಕಪೂರ್ ಅವರನ್ನು ಮದುವೆಯಾದ ನಂತರ, ಶಿವಾಂಗಿ ಕುಟುಂಬದತ್ತ ಗಮನ ಹರಿಸಿದರು.
ಶ್ರದ್ಧಾ ಕಪೂರ್ ಏಕ್ ವಿಲನ್, ಹೈದರ್, ಫಿಂಗರ್, ಎಬಿಸಿಡಿ 2, ಬಾಘಿ, ರಾಕ್ ಆನ್ 2, ಓಕೆ ಜಾನು, ಹಾಫ್ ಗರ್ಲ್ ಫ್ರೆಂಡ್, ಹಸೀನಾ ಪಾರ್ಕರ್, ಸ್ತ್ರೀ, ಸಾಹೋ, ಚಿಚೋರೆ, ಭಾಗಿ 3 ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪ್ರಸ್ತುತ ರಣಬೀರ್ ಕಪೂರ್ ಅವರೊಂದಿಗೆ ನಿರ್ದೇಶಕ ಲವ್ ರಂಜನ್ ಅವರ ಹೆಸರಿಡದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.