ಮಲ ತಮ್ಮನ ಮದುವೆಯಲ್ಲಿ ಫ್ಯಾಮಿಲಿ ಜೊತೆ ಶಾಹಿದ್ ಕಪೂರ್; ನಟನ ಮಗನ ನೋಡಿ ನೆಟಿಜನ್ ಹೇಳಿದ್ಹೀಗೆ!
ಶಾಹಿದ್ ಕಪೂರ್ ಮತ್ತು ಅವರ ಕುಟುಂಬ ಈ ವಾರಾಂತ್ಯದಲ್ಲಿ ಅವರ ಮಲ ಸಹೋದರ ರುಹಾನ್ ಅವರ ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿತ್ತು. ಈ ಸಮಯದಲ್ಲಿ ಕಪೂರ್ ಮತ್ತು ಪಹ್ವಾಗಳನ್ನು ಒಳಗೊಂಡಿರುವ ಕುಟುಂಬದ ಫೋಟೋ ಸಖತ್ ವೈರಲ್ ಆಗಿದೆ. ಶಾಹಿದ್ ಅವರು ಫ್ಯಾಮಿಲಿ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಫೋಟೋ ನೋಡಿದ ನೆಟಿಜನ್ ನಟನ ಮಗನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಶಾಹಿದ್ ಮಗ ಜೈನ್ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಏನು ಹೇಳಿದ್ದಾರೆ ನೋಡಿ .
ಪಂಕಜ್ ಕಪೂರ್ ಮತ್ತು ಸುಪ್ರಿಯಾ ಪಾಠಕ್ ಅವರ ಮಗ ರುಹಾನ್ ಕಪೂರ್ ಇತ್ತೀಚೆಗೆ ಸೀಮಾ ಭಾರ್ಗವ ಪಹ್ವಾ ಮತ್ತು ಮನೋಜ್ ಪಹ್ವಾ ಅವರ ಪುತ್ರಿ ಮನುಕೃತಿ ಪಹ್ವಾ ಅವರನ್ನು ವಿವಾಹವಾದರು.
ಮದುವೆಯ ಪೂರ್ವದ ಹಬ್ಬಗಳ ಸರಣಿಯನ್ನು ಕುಟುಂಬಗಳು ಆಯೋಜಿಸಿದ್ದು, ಶನಿವಾರ ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದೊಂದಿಗೆ ಎಲ್ಲವೂ ಕೊನೆಗೊಂಡಿತು. ಮಹಿಳೆಯರು ನೀಲಿ ಶೆಡ್ ಧರಿಸಿದ್ದರೆ, ಪುರುಷರು ಈವೆಂಟ್‌ಗಾಗಿ ಕಪ್ಪು ಉಡುಪುಗಳನ್ನು ಧರಿಸಿದ್ದರು.
ಶಾಹಿದ್ ಕಪೂರ್ ಅವರ ಮಲ ಸಹೋದರನ ಮದುವೆಯ ಫೋಟೋದಲ್ಲಿ ಮನೋಜ್ ಪಹ್ವಾ, ಸೀಮಾ ಭಾರ್ಗವ ಪಹ್ವಾ, ನವವಿವಾಹಿತರಾದ ರುಹಾನ್ ಕಪೂರ್ ಮತ್ತು ಮನುಕೃತಿ ಪಹ್ವಾ, ರುಹಾನ್ ಸಹೋದರಿ ಸನಾ, ಮನುಕೃತಿಯ ಸಹೋದರ ಮಯಾಂಕ್ ಪಹ್ವಾ, ಸುಪ್ರಿಯಾ ಪಾಠಕ್, ಪಂಕಜ್ ಕಪೂರ್, ಶಾಹಿದ್ ಕಪೂರ್ ಹಾಗೂ ಶಾಹಿದ್ ಕಪೂರ್ ಅವರ ಮಕ್ಕಳು ಮಿಶಾ ಕಪೂರ್ ಮತ್ತು ಜೈನ್ ಕಪೂರ್ ಇದ್ದಾರೆ.
ಶಾಹಿದ್ ಮತ್ತು ಮಗ ಜೈನ್ ನಡುವಿನ ಹೋಲಿಕೆಯ ಬಗ್ಗೆ ಅನೇಕ ಜನರು ಕಾಮೆಂಟ್ ಮಾಡಿದ್ದಾರೆ, ಒಬ್ಬ ವ್ಯಕ್ತಿ ನಟನ ಮಗನನ್ನು ಶಾಹಿದ್ ಅವರ 'ಮಿರರ್ ಇಮೇಜ್' ಎಂದು ಟ್ಯಾಗ್ ಮಾಡಿದ್ದಾರೆ.
ಸ್ವತಃ ಶಾಹಿದ್ ಪತ್ನಿ ಮೀರಾ ಈ ಫೋಟೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ತಾರಾ ದಂಪತಿ ಮದುಮಗ ರುಹಾನ್ ಕಪೂರ್ ಜೊತೆ ಪೋಸ್ ನೀಡಿದ್ದಾರೆ.