ಶಾರುಖ್-ಪಿಗ್ಗಿ: 10 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿದ್ದ ಸೆಲಬ್ರೆಟೀಸ್!
ಬಾಲಿವುಡ್‌ನ ಟಾಪ್ ನಟರು ಪ್ರತಿ ಚಿತ್ರಕ್ಕೆ 10 ಕೋಟಿ ರೂ ಪ್ರಾಡೆಕ್ಟ್ ಎಂಡೋರ್ಸ್ಮೆಂಟ್‌ಗೆ 2 ರಿಂದ 3 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಆದರೆ ಅವರು ಕೆಲಸ ಮಾಡಲು ಪ್ರಾರಂಭಿಸಿದಾಗ ಹೀಗೆ ಇರಲಿಲ್ಲ. ಅವರಲ್ಲಿ ಹೆಚ್ಚಿನವರ ಆರಂಭಿಕ ಸಂಬಳ 10 ಸಾವಿರಕ್ಕಿಂತ ಕಡಿಮೆಯಾಗಿತ್ತು.
ಶಾರುಖ್ ಖಾನ್:
ವರದಿಗಳ ಪ್ರಕಾರ, ಕಿಂಗ್ ಖಾನ್ ತಮ್ಮ ಮುಂದಿನ ಸಿನಿಮಾ ಪಠಾಣ್‌ಗೆ 100 ಕೋಟಿ ರೂ. ಫೀಸ್ ಪಡೆಯಲ್ಲಿದ್ದಾರೆ ಮತ್ತು ಇವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗುತ್ತಾರೆ. ಆದರೆ ಅವರ ಮೊದಲ ಗಳಿಕೆ 50 ರೂ. ಪಂಕಜ್ ಉಧಾಸ್ ಸಂಗೀತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಖಾನ್ 50 ರೂ. ಸಂಬಳ ಪಡೆಯುತ್ತಿದ್ದರಂತೆ.
ಸೋನಮ್ ಕಪೂರ್:
ನಟಿಯಾಗುವ ಮೊದಲು ಸೋನಂ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು. ಆಗ 3,000 ರೂ ಸಂಬಳ ಪಡೆಯುತ್ತಿದ್ದರು ಸೋನಮ್.
ಅಮೀರ್ ಖಾನ್:
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್, ಪ್ರತಿ ಚಿತ್ರಕ್ಕೆ 50 ಕೋಟಿ ರೂ. ಗಳಿಸುತ್ತಾರೆ. ಆದರೆ ಅವರ ಮೊದಲ ಚಿತ್ರ ಕಯಾಮತ್ ಸೆ ಖಯಾಮತ್ ತಕ್ ತಿಂಗಳಿಗೆ 10000 ರೂ. ಗಳಿಸುತ್ತಿದ್ದರು.
ಅಮಿತಾಬ್ ಬಚ್ಚನ್:
ಬಾಲಿವುಡ್‌ಗೆ ಪ್ರವೇಶಿಸುವ ಮೊದಲು, ಬಿಗ್ ಬಿ ಅವರು ಶಾ ಮತ್ತು ವ್ಯಾಲೇಸ್ ಎಂಬ ಹಡಗು ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಬರ್ಡ್ ಅಂಡ್ ಕಂ.ಗೆ ಸರಕು ಸಾಗಣೆ ಬ್ರೋಕರ್ ಆಗಿ ಕೆಲಸ ಮಾಡಿದ ಅವರ ಸಂಬಳ 500 ರೂ. ಆಗಿತ್ತಂತೆ.
ಹೃತಿಕ್ ರೋಷನ್:
ಆಶಾ ಚಿತ್ರದಲ್ಲಿ ಜೀತೇಂದ್ರ ಜೊತೆ ಡ್ಯಾನ್ಸ್ ಮಾಡಲು ಹೃತಿಕ್ ರೋಷನ್ ಗಳಿಸಿದ್ದು ಕೇವಲ 100 ರೂ.
ಪ್ರಿಯಾಂಕಾ ಚೋಪ್ರಾ:
2000ರ ವಿಶ್ವ ಸುಂದರಿ ಪ್ರಶಸ್ತಿ ಗೆದ್ದ ನಂತರ ಪ್ರಿಯಾಂಕಾ ಚೋಪ್ರಾ ಅವರ ಮೊದಲ ಸಂಬಳ 5000 ರೂ. ಆಗಿತ್ತು. ಆದರೆ ಈಗ ಅವರು ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲೂ ಕೆಲಸ ಮಾಡುತ್ತಿದ್ದು ಡಾಲರ್‌ಗಳಲ್ಲಿ ಗಳಿಸುತ್ತಿದ್ದಾರೆ.
ಅಕ್ಷಯ್ ಕುಮಾರ್:
ಅಕ್ಷಯ್ ಕುಮಾರ್ ಬಾಲಿವುಡ್‌ಗೆ ಪ್ರವೇಶಿಸುವ ಮೊದಲು ಬ್ಯಾಂಕಾಕ್‌ನಲ್ಲಿ ಶೆಫ್ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ವೇಯಿಟರ್ ಆಗಿ ಕೆಲಸ ಮಾಡುತ್ತಿದ್ದ ಅವರ ಮೊದಲ ಸಂಬಳ ಕೇವಲ 1500 ರೂ.