ಜವಾನ್ ಯಶಸ್ಸಿನ ಬೆನ್ನಲ್ಲೇ ಪ್ರಧಾನಿ ಮೋದಿ ಹಾಡಿ ಹೊಗಳಿದ ಶಾರುಖ್ ಖಾನ್
ಪ್ರಧಾನಿ ಮೋದಿ ಪೋಸ್ಟ್ ಅನ್ನು ರೀಟ್ವೀಟ್ ಮಾಡಿರುವ ಶಾರುಖ್ ಖಾನ್ ಮೋದಿಯನ್ನು ಶ್ಲಾಘಿಸಿದ್ದು ಹಲವರ ಹುಬ್ಬೇರಿಸಿದೆ. ಜಿ20 ಯಶಸ್ಸಿಗೆ ಮೋದಿಯನ್ನು ಸೂಪರ್‌ಸ್ಟಾರ್ ಅಭಿನಂದಿಸಿದ್ದಾರೆ.
'ಜವಾನ್' ಚಿತ್ರದ ಯಶಸ್ಸಲ್ಲಿ ಮುಳುಗಿರುವ ಕಿಂಗ್ ಖಾನ್ ಹಾಗೂ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿ ಪೋಸ್ಟ್ ಅನ್ನು ರೀಟ್ವೀಟ್ ಮಾಡಿರುವ ಶಾರುಖ್ ಖಾನ್ ಮೋದಿಯನ್ನು ಶ್ಲಾಘಿಸಿದ್ದು ಹಲವರ ಹುಬ್ಬೇರಿಸಿದೆ.
ಜಿ 20 ಶೃಂಗಸಭೆಯ ಯಶಸ್ಸಿಗೆ ಶಾರುಖ್ ಖಾನ್ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವ ಅವಕಾಶವನ್ನು ಅವರು ಮಿಸ್ ಮಾಡಿಕೊಳ್ಳಲಿಲ್ಲ. ಭಾರತದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಮಧ್ಯೆ, ಶಾರುಖ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ ಮತ್ತು ಅವರನ್ನು ಅಭಿನಂದಿಸಿದ್ದಾರೆ.
ಜಿ20 ಶೃಂಗಸಭೆಯು ಭಾರತದಲ್ಲಿ ಮೆಗಾ-ಯಶಸ್ವಿ ಕಾರ್ಯಕ್ರಮ ಎನಿಸಿಕೊಂಡಿದ್ದು, ಈ ಹಿನ್ನೆಲೆ ಶಾರುಖ್ ಖಾನ್ ಪ್ರಧಾನಿ ಮೋದಿಯನ್ನು ಅಭಿನಂದಿಸಿದರು. ಎಕ್ಸ್ ಅಂದರೆ ಈ ಹಿಂದಿನ ಟ್ವಿಟ್ಟರ್‌ನಲ್ಲಿ "ಭಾರತದ ಜಿ 20 ಅಧ್ಯಕ್ಷ ಸ್ಥಾನದ ಯಶಸ್ಸಿಗಾಗಿ ಮತ್ತು ವಿಶ್ವದ ಜನರಿಗೆ ಉತ್ತಮ ಭವಿಷ್ಯಕ್ಕಾಗಿ ರಾಷ್ಟ್ರಗಳ ನಡುವೆ ಏಕತೆಯನ್ನು ಬೆಳೆಸುವುದಕ್ಕಾಗಿ ಗೌರವಾನ್ವಿತ ಪ್ರಧಾನಿ ಮೋದಿ ಜೀ ಅವರಿಗೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಗೌರವ ಮತ್ತು ಹೆಮ್ಮೆಯ ಭಾವನೆ. ಸರ್, ನಿಮ್ಮ ನಾಯಕತ್ವದಲ್ಲಿ, ನಾವು ಪ್ರತ್ಯೇಕವಾಗಿರದೆ ಏಕತೆಯಲ್ಲಿ ಏಳಿಗೆ ಹೊಂದುತ್ತೇವೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂದು ಕಿಂಗ್ ಖಾನ್ ಶಾರುಖ್ ಖಾನ್ ಟ್ವೀಟ್ ಮೂಲಕ ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಮತದಾನ ವಿಚಾರವಾಗಿ ಜವಾನ್' ಚಿತ್ರದ ಹೇಳಿಕೆ ವೈರಲ್
ಶಾರುಖ್ ಖಾನ್ ಅವರ 'ಜವಾನ್' ಚಿತ್ರ ಬಿಡುಗಡೆಯಾಗಿ 3ನೇ ದಿನವೂ ಯಶಸ್ಸಿನತ್ತ ಸಾಗುತ್ತಿದೆ. ಈ ಚಿತ್ರದಲ್ಲಿ ರೈತರ ಆತ್ಮಹತ್ಯೆ, ಆರೋಗ್ಯ ವ್ಯವಸ್ಥೆ ಮತ್ತು ಇತರ ಹಲವಾರು ಪ್ರಮುಖ ಸಮಸ್ಯೆಗಳ ಬಗ್ಗೆಯೂ ಅವಲೋಕಿಸಲಾಗಿದೆ. ಮತ್ತು ಒಂದು ಮತ ಚಲಾಯಿಸುವ ಮೊದಲು ಪ್ರಶ್ನೆಗಳನ್ನು ಕೇಳುವ ಪ್ರಾಮುಖ್ಯತೆಯ ಕುರಿತು ಶಾರುಖ್ ಖಾನ್ ಅವರ ಡೈಲಾಗ್ ವೈರಲ್ ಆಗ್ತಿದೆ.
ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುವ ಮೊದಲು ಪ್ರಶ್ನೆಗಳನ್ನು ಕೇಳುವಂತೆ ಸೂಪರ್‌ಸ್ಟಾರ್ ಶಾರುಖ್ ಖಾನ್ ನಾಗರಿಕರಿಗೆ ಕೇಳಿಕೊಂಡಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ದೇಶಕ್ಕಾಗಿ ಏನು ಮಾಡುತ್ತೀರಿ, ನಿರುದ್ಯೋಗ, ಶಿಕ್ಷಣ, ಆರೋಗ್ಯದ ಬಗ್ಗೆ ಅಭ್ಯರ್ಥಿಯನ್ನು ಕೇಳಲು ಅವರು ದೇಶದ ಜನರಿಗೆ ಮನವಿ ಮಾಡಿದ್ದಾರೆ. ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಸಹ ವೈರಲ್ ಆಗುತ್ತಿದೆ.