- Home
- Entertainment
- Cine World
- ಕಡಿಮೆ ಬಟ್ಟೆ ತೊಟ್ಟು ಹೊರಟ ಮಗಳಿಗೆ ಶಾರುಖ್ ಹೀಗೆ ಕೇಳಿದ್ರು.. ಕೋಪದಿಂದ ಸುಹಾನಾ ಹೀಗೆ ಹೇಳಿದ್ರು; ಇದು ನಿಜವೇ?
ಕಡಿಮೆ ಬಟ್ಟೆ ತೊಟ್ಟು ಹೊರಟ ಮಗಳಿಗೆ ಶಾರುಖ್ ಹೀಗೆ ಕೇಳಿದ್ರು.. ಕೋಪದಿಂದ ಸುಹಾನಾ ಹೀಗೆ ಹೇಳಿದ್ರು; ಇದು ನಿಜವೇ?
‘ನೀವು ಅವನ ಬಗ್ಗೆ ಏನೂ ಹೇಳೋದೂ ಇಲ್ಲ, ಕೇಳೋದೂ ಇಲ್ಲ.. ನನಗೆ ಮಾತ್ರ ರಿಸ್ಟ್ರಿಕ್ಷನ್ ಯಾಕೆ? ನನಗೆ ಮಾತ್ರ ಅದೂ ಇದೂ ಮಾತು ಯಾಕೆ? ನನ್ನ ಮೇಲೆ ಮಾತ್ರ ನಿನ್ನ ಗಮನ, ಎಚ್ಚರಿಕೆ ಯಾಕೆ’ ಎಂದು ಕೇಳಿದ್ದಾರೆ. ಅದಕ್ಕೆ ಶಾರುಖ್ ಖಾನ್ ಉತ್ತರ ಇದಾಗಿತ್ತು, ಓಕೆ ನಾ..?

ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ (Shah Rukh Khan) ಅವರದೊಂದು ನ್ಯೂಸ್ ಇದೀಗ ಸಖತ್ ವೈರಲ್ ಆಗ್ತಿದೆ. ಆದರೆ ಇದು ಯಾವುದೇ ಸಿನಿಮಾ ಸುದ್ದಿ ಅಲ್ಲ. ಬದಲಿಗೆ ಇದು ಪರ್ಸ್‌ನಲ್..
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಅದ್ರಲ್ಲೂ ತೀರಾ ಪರ್ಸ್‌ನಲ್, ಅಂದ್ರೆ ಇದು ಅವರ ಫ್ಯಾಮಿಲಿಗೇ ಸಂಬಂಧಿಸಿದ್ದು. ಇದನ್ನು ಯಾರೆಲ್ಲಾ ಹೇಗೆಲ್ಲಾ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಸ್ಟೋರಿ ಸಖತ್ ವೈರಲ್ ಅಗ್ತಿರೋದಂತೂ ಸತ್ಯ. ಇದು ನಿಜವಾಗಿ ನಡೆದಿದ್ದೋ ಅಥವಾ ಕಾಲ್ಪನಿಕವಾಗಿ ಮಾಡಿದ್ದೋ ಗೊತ್ತಿಲ್ಲ! ಆದರೆ ಭಾರೀ ಇಂಟರೆಸ್ಟಿಂಗ್ ಆಗಿದೆ..
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಹೌದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗ್ತಿರೋ ನ್ಯೂಸ್ ಪ್ರಕಾರ, ಅದೊಂದು ದಿನ ಶಾರುಖ್ ಖಾನ್ ಮಗಳು ಸುಹಾನಾ ಖಾನ್ (Suhana Khan) ಅವರು ತೀರಾ ಕಡಿಮೆ ಬಟ್ಟ ಧರಿಸಿ ಮನೆಯಿಂದ ಹೊರಗಡೆ ಹೊರಟಿದ್ದರು.
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಅದನ್ನು ನೋಡಿ ಸುಹಾನಾ ಅಪ್ಪ, ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರು 'ಮಗಳೇ, ಇದೇನು ನೀನು ಹೀಗೆ ಇಷ್ಟೊಂದು ಕಡಿಮೆ ಬಟ್ಟೆ ತೊಟ್ಟು ಹೊರಗಡೆ ಸುತ್ತಾಡೋಕೆ ಹೋಗ್ತಿದೀಯ? ಎಲ್ಲರ ದೃಷ್ಟಿ-ಗಮನ ನಿನ್ನ ಮೇಲೆಯೇ ಬೀಳೋ ಥರ ಇದೆ..' ಎಂದಿದ್ದಾರೆ. ಈ ಮಾತು ಕೇಳಿ ಶಾರುಖ್ ಮಗಳು ಸುಹಾನಾಗೆ ಸಖತ್ ಕೋಪ ಬಂದಿದೆ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಸುಹಾನಾ ಖಾನ್ ಭಾರೀ ಕೋಪದಿಂದ ಅಪ್ಪ ಶಾರುಖ್‌ಗೆ ಹೀಗೆ ಹೇಳಿದ್ದಾರೆ- 'ಪಾಪಾ.. ಆರ್ಯನ್ ಖಾನ್ (Aryan Khan) ಕೂಡ ಚಿತ್ರವಿಚಿತ್ರವಾಗಿ ಕಡಿಮೆ ಬಟ್ಟೆ ತೊಟ್ಟುಕೊಂಡು ಎಲ್ಲಾ ಕಡೆ ಸುತ್ತಾಡ್ತಾನೆ.. ಅವನೂ ಕೂಡ ಪಾರ್ಟಿಗೆ ಹೋಗ್ತಾನೆ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಆದ್ರೆ ನೀವು ಅವನ ಬಗ್ಗೆ ಏನೂ ಹೇಳೋದೂ ಇಲ್ಲ, ಕೇಳೋದೂ ಇಲ್ಲ.. ನನಗೆ ಮಾತ್ರ ರಿಸ್ಟ್ರಿಕ್ಷನ್ ಯಾಕೆ? ನನಗೆ ಮಾತ್ರ ಅದೂ ಇದೂ ಮಾತು ಯಾಕೆ? ನನ್ನ ಮೇಲೆ ಮಾತ್ರ ನಿನ್ನ ಗಮನ, ಎಚ್ಚರಿಕೆ ಯಾಕೆ ಎಂದು ಕೇಳಿದ್ದಾರೆ. ಅದಕ್ಕೆ ನಟ, ಸುಹಾನಾ-ಆರ್ಯನ್ ಅಪ್ಪ ಶಾರುಖ್ ಖಾನ್ ತನ್ನ ಮಗಳ ಮೇಲೆ ಸ್ವಲ್ಪವೂ ಕೋಪಗೊಳ್ಳದೇ ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಹಾಗಿದ್ದರೆ ಶಾರುಖ್ ಖಾನ್ ಅದೇನು ಹೇಳಿದ್ದಾರೆ ನೋಡಿ.. 'ಮಗಳೇ, ಯಾವುದೋ ಲೋಹವನ್ನು ಎಲ್ಲಿ ಬೇಕಾದರೂ ಇಡಬಹುದು, ಇಡುತ್ತಾರೆ ಕೂಡ.. ಏಕೆಂದರೆ, ಅದಕ್ಕೆ ಏನೂ ಸಮಸ್ಯೆ ಆಗೋದಿಲ್ಲ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಆದರೆ, ಚಿನ್ನವನ್ನು ಜೋಪಾನವಾಗಿ ನೋಡಿಕೊಳ್ಳುತ್ತಾರೆ, ತಿಜೋರಿಯಲ್ಲಿ ಇಡುತ್ತಾರೆ.. ಏಕೆಂದರೆ ಅದು ತುಂಬಾ ಬೆಲೆಬಾಳುತ್ತದೆ, ಅದಕ್ಕೆ ಹೆಚ್ಚಿನ ಮೌಲ್ಯ ಇರುತ್ತದೆ ಎಂದಿದ್ದಾರೆ..' ಎನ್ನುವ ವಿಡಿಯೋ ವೈರಲ್ ಆಗ್ತಿದೆ. ಆದರೆ, ಶಾರುಖ್-ಸುಹಾನಾ ಮಧ್ಯೆ ಅಂಥದ್ದೊಂದು ಸಂಭಾಷಣೆ ನಡೆದಿದ್ಯೋ ಇಲ್ಲವೋ ಅನ್ನೋದು ನಿಜವಾಗಿಯೂ ಗೊತ್ತಿಲ್ಲದ ಸಮಾಚಾರ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ ಮಾತು ಶಾರುಖ್ ಖಾನ್ ಹೇಳಿಕೆ ಮೆಚ್ಚಿ ಬಹಳಷ್ಟು ಕಾಮೆಂಟ್ ಬಂದಿವೆ. 'ಶಾರುಖ್ ಖಾನ್ ಅಂದ್ರೆ ಸುಮ್ನೆ ಅಲ್ಲ' ಅಂತಿದಾರೆ! ಶಾರುಖ್ ಖಾನ್ ಅವರಿಗೆ ಪ್ರಪಂಚದ ಜ್ಞಾನವಿದೆ, ಮೆಚ್ಯೂರಿಟಿ ಇದೆ ಎಂದು ಕೊಂಡಾಡುತ್ತಿದ್ದಾರೆ. ಆದರೆ, ಈ ವೈರಲ್ ನ್ಯೂಸ್ ಸತ್ಯವೇ? ಸದ್ಯಕ್ಕಂತೂ ಆ ಬಗ್ಗೆ ಕ್ಲಾರಿಟಿ ಇಲ್ಲ..