- Home
- Entertainment
- Cine World
- IIFA 2025, ಜೈಪುರಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಭೇಟಿ, ನೋಡಲೇಬೇಕಾದ ಫೋಟೋಗಳು ಇಲ್ಲಿವೆ..!
IIFA 2025, ಜೈಪುರಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಭೇಟಿ, ನೋಡಲೇಬೇಕಾದ ಫೋಟೋಗಳು ಇಲ್ಲಿವೆ..!
IIFA 2025ಕ್ಕೆ ಶಾರುಖ್ ಖಾನ್ ಜೈಪುರಕ್ಕೆ ಬಂದಿದ್ದಾರೆ. ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳು ಅವರನ್ನು ಮುತ್ತಿಕೊಂಡರು. ಶಾರುಖ್ ಕೂಡ ನಗುತ್ತಾ ಅವರನ್ನು ಸ್ವಾಗತಿಸಿದರು!

ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2025)ಗೆ ಬಾಲಿವುಡ್ ಸೆಲೆಬ್ರಿಟಿಗಳು ಜೈಪುರಕ್ಕೆ ಬರೋಕೆ ಶುರು ಮಾಡಿದ್ದಾರೆ. ಮಾರ್ಚ್ 7ರಿಂದ 9ರವರೆಗೆ ಜೈಪುರದಲ್ಲಿ ಈ ಸಮಾರಂಭ ನಡೀತಿದೆ.
ಶಾರುಖ್ ಖಾನ್ ಜೈಪುರ ಏರ್‌ಪೋರ್ಟ್‌ನಿಂದ ಹೊರ ಬರ್ತಿದ್ದ ಹಾಗೆ ಅಭಿಮಾನಿಗಳು ಅವರನ್ನು ಮುತ್ತಿಕೊಂಡರು. ಫ್ಯಾನ್ಸ್ ಖುಷಿಯನ್ನು ನೋಡಿ ನಟ ಶಾರುಖ್ ಖಾನ್ಅವರು ಸ್ವತಃ ತಾವೂ ಕೂಡ ಖುಷಿಯಾದರು.
ಶಾರುಖ್ ಖಾನ್ ಅಲ್ಲಿಂದ ಹೋಗೋಕೆ ಅವಸರ ಮಾಡ್ಲಿಲ್ಲ, ನಗುತ್ತಾ ಅಭಿಮಾನಿಗಳನ್ನ ರಿಸೀವ್ ಮಾಡ್ಕೊಂಡ್ರು. ಫ್ಯಾನ್ಸ್ ಖುಷಿಯಾಗುವಂತೆ ಕೈ ಬೀಸುತ್ತ ನಡೆದರು.
ಶಾರುಖ್ ಖಾನ್ ಕಾರ್ ಡೋರ್ ಹತ್ರ ನಿಂತು ಅಭಿಮಾನಿಗಳನ್ನ ನೋಡಿ ತಲೆ ಬಾಗಿದ್ರು. ಅವರ ನಡೆ ನೋಡಿ ಅಲ್ಲಿದ್ದ ಎಲ್ಲಾ ಅಭಿಮಾನಿಗಳೂ ತುಂಬಾ ಖುಷಿಗೊಂಡರು.
ಜೈಪುರ ಏರ್‌ಪೋರ್ಟ್‌ನಲ್ಲಿ ಶಾರುಖ್ ಖಾನ್ ಸ್ಟೈಲ್ ನೋಡೋಕೆ ಚೆನ್ನಾಗಿತ್ತು. ಅವರ ಸ್ಟೈಲ್‌ಗಿಂತಲೂ ಹೆಚ್ಚಾಗಿ ಅವರ ಮುಖದಲ್ಲಿ ಮೂಡಿದ್ದ ಮುಗುಳ್ನಗು ಅಭಿಮಾನಿಗಳಿಗೆ ತುಂಬಾ ಇಷ್ಟವಾಯ್ತು.
SRK ಕೆಲವೊಮ್ಮೆ ಅಭಿಮಾನಿಗಳಿಗೆ ಥಮ್ಸ್ ಅಪ್ ಮಾಡ್ತಿದ್ರು, ಕೆಲವೊಮ್ಮೆ ಕೈ ಬೀಸಿ ಥ್ಯಾಂಕ್ಸ್ ಹೇಳ್ತಿದ್ರು. ಅವರ ಕೈ ಬೀಸುವಿಕೆಯಲ್ಲಿ ಕೂಡ ಅಭಿಮಾನಿಗಳ ಮೇಲೆ ಪ್ರೀತಿ ಕಾಣಿಸುತ್ತಿತ್ತು.
ಶಾರುಖ್ ಖಾನ್ ಅಭಿಮಾನಿಗಳಿಂದ ಸಿಕ್ಕ ಪ್ರೀತಿಯನ್ನ ಮನಸಲ್ಲಿ ತುಂಬಿಕೊಂಡ್ರು. ಶಾರುಖ್ ಖಾನ್ ತಮ್ಮಡೆಎಗೆ ಕೈ ಬೀಸಿದ್ದನ್ನು ಕಂಡು ಅಲ್ಲಿದ್ದ ಎಲ್ಲಾ ಫ್ಯಾನ್ಸ್ ಪುಳಕ ಅನುಭವಿಸಿದರು.
ಅಷ್ಟೇ ಅಲ್ಲ, ಶಾರುಖ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟು ಅಭಿಮಾನಿಗಳ ಪ್ರೀತಿಗೆ ಉತ್ತರಿಸಿದ್ರು. ಅದರಲ್ಲೂ ಕೆಲವರು ವಾಪಸ ಶಾರುಖ್ ಅವರಿಗೂ ಫ್ಲೈಯಿಂಗ್ ಕಿಸ್ ಕೊಟ್ಟರು.
IIFA ಅವಾರ್ಡ್ಸ್ ಸಮಾರಂಭ ಭಾರತದಲ್ಲಿ ನಡೀತಿರೋದು ಇದೇ ಮೊದಲು. ಮೂರು ದಿನದ ಈ ಇವೆಂಟ್ ಅನ್ನು ಕರಣ್ ಜೋಹರ್ ಮತ್ತು ಕಾರ್ತಿಕ್ ಆರ್ಯನ್ ಹೋಸ್ಟ್ ಮಾಡ್ತಿದ್ದಾರೆ. ಶಾರುಖ್ ಖಾನ್, ಮಾಧುರಿ ದೀಕ್ಷಿತ್, ಶಾಹಿದ್ ಕಪೂರ್, ಕೃತಿ ಸನನ್ ಮತ್ತು ಕರೀನಾ ಕಪೂರ್ ಪರ್ಫಾರ್ಮ್ ಮಾಡ್ತಾರೆ.