- Home
- Entertainment
- Cine World
- ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿ ಪ್ರಭಾಕರ್; ಇಲ್ಲಿವೆ ಸುಂದರ ಫೋಟೋಗಳು
ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿ ಪ್ರಭಾಕರ್; ಇಲ್ಲಿವೆ ಸುಂದರ ಫೋಟೋಗಳು
ಕಿರುತೆರೆಯ ಖ್ಯಾತ ನಟಿ ರಶ್ಮಿ ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿಖಿಲ್ ಭಾರ್ಗವ್ ಜೊತೆ ರಶ್ಮಿ ಹಸೆಮಣೆ ಏರಿದರು. ಏಪ್ರಿಲ್ 25ರಂದು ನಡೆದ ಮದುವೆ ಸಮಾರಂಭದಲ್ಲಿ ರಶ್ಮಿಕಾ ಮತ್ತು ನಿಖಿಲ್ ಪತಿ-ಪತ್ನಿಯರಾರು.

ಕಿರುತೆರೆಯ ಖ್ಯಾತ ನಟಿ ರಶ್ಮಿ ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿಖಿಲ್ ಭಾರ್ಗವ್ ಜೊತೆ ರಶ್ಮಿ ಹಸೆಮಣೆ ಏರಿದರು. ಏಪ್ರಿಲ್ 25ರಂದು ನಡೆದ ಮದುವೆ ಸಮಾರಂಭದಲ್ಲಿ ರಶ್ಮಿಕಾ ಮತ್ತು ನಿಖಿಲ್ ಪತಿ-ಪತ್ನಿಯರಾರು.
ರಶ್ಮಿ ಮತ್ತು ನಿಖಿಲ್ ಮದುವೆ ಬಸವನಗುಡಿಯ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಸೋಮವಾರ ಬೆಳಗ್ಗೆ 9.21ರಿಂದ 10.19ರ ವರೆಗೆ ನಡೆದ ಶುಭ ಮುಹೂರ್ತದಲ್ಲಿ ರಶ್ಮಿ, ನಿಖಿಲ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟರು.
Rashmi Prabhakar
ರಶ್ಮಿ ಮತ್ತು ನಿಖಿಲ್ ಮದುವೆಗೆ ಕಿರುತೆರೆಯ ಅನೇಕ ಗಣ್ಯರು ಹಾಜರಿದ್ದರು. ನವ ಜೋಡಿಗೆ ಶುಭಹಾರೈಸಿದರು. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ತುಂಬಾ ಪ್ರಸಿದ್ಧಿ ಪಡೆದ ರಶ್ಮಿಗೆ ಲಕ್ಷ್ಮೀ ಬಾರಮ್ಮ ತಂಡ ಶುಭಹಾರೈಸಿದರು. ಕವಿತಾ ಮತ್ತು ಚಂದನ್, ಗೊಂಬೆ ಖ್ಯಾತಿಯ ನೇಹಾ ಗೌಡ ಸೇರಿದಂತೆ ಅನೇಕರು ಇಡೀ ಲಕ್ಷ್ಮೀ ಬಾರಮ್ಮ ಟೀಮ್ ಮದುವೆಗೆ ಹಾಜರಾಗಿ ನವ ಜೋಡಿಗೆ ಶುಭಹಾರೈಸಿದರು.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಖ್ಯಾತಿಗಳಿಸಿದ್ದ ರಶ್ಮಿ ಕನ್ನಡದಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಶುಭ ವಿವಾಹ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿ ಬಳಿಕ ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.
ಶುಭ ವಿವಾಹ, ಮಹಾಭಾರತ, ಜೀವನ ಚೈತ್ರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲೂ ಮಿಂಚಿದ್ದಾರೆ. ಮನಸೆಲ್ಲ ನೀನೆ, ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ರಶ್ಮಿ ನಟಿಸಿದ್ದಾರೆ.
ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ರಶ್ಮಿ ನಟಿಸಿದ್ದಾರೆ. ಬಿಬಿ5 ಮತ್ತು ಮಹಾಕಾವ್ಯ ಸಿನಿಮಾಗಳಲ್ಲಿ ರಶ್ಮಿ ನಟಿಸಿದ್ದಾರೆ. ಸದ್ಯ ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರುವ ರಶ್ಮಿ ಮತ್ತೆ ಬಣ್ಣ ಹಚ್ಚುತ್ತಾರಾ, ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.
ಹೊಸಕೋಟೆ ತಾಲೂಕಿನ ಪುಟ್ಟ ಹಳ್ಳಿಯಿಂದ ಬಂದಿರುವ ರಶ್ಮಿ ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆ ಕಿರುತೆರೆಗೆ ಎಂಟ್ರಿ ಕೊಟ್ಟರು. ಶುಭವಿವಾಹ ಧಾರಾವಾಹಿಯಲ್ಲಿ ಹೀರೋ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡ ರಶ್ಮಿ ರಚನ ಪಾತ್ರದ ಮೂಲಕ ಗುರುಿಸಿಕೊಂಡರು. ಬಳಿಕ ಮಹಾಭಾರತ ಧಾರಾವಾಹಿಯಲ್ಲಿ ಮಿಂಚಿದರು. ಲಕ್ಷ್ಮೀ ಬಾರಮ್ಮ ಧಾರಾವಾಹಿ ರಶ್ಮಿ ಧಾರಾವಾಹಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಧಾರಾವಾಹಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.