ವಿದೇಶದಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಸಾರಾ ಆಲಿ ಖಾನ್; ನೆಟ್ಟಿಗ್ಗರಿಂದ ಮೆಚ್ಚಗೆ!
ಬಾಲಿವುಡ್‌ನ ಯಂಗ್ ನಟಿ ಸಾರಾ ಅಲಿ ಖಾನ್ (Sara Ali Khan) ಟ್ರಾವೆಲ್ ಫ್ರೀಕ್ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಪ್ರಸ್ತುತ ಸಾರಾ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಸಮಯದ ಕೆಲವು ಫೋಟೋಗಳನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿದೇಶದಲ್ಲಿ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಂಡಿರುವ ಸಾರಾ ಜನರ ಮೆಚ್ಚುಗೆ ಗಳಿಸಿದ್ದಾರೆ.
ಸಾರಾ ಆಲಿ ಖಾನ್ ಅವರು ಸಿಡ್ನಿಯಲ್ಲಿ ತಮ್ಮ ಸಮಯದ ಕೆಲವು ಝಲಕ್ ಅನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಲಿಡೇಯ ಒಟ್ಟು ಆರು ಫೋಟೋಗಳಿರುವ ಫೋಟೋ ಡಂಪ್ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಮೆಲ್ಬೋರ್ನ್‌ನ ಬೀಚ್ ಫೋಟೋಗಳನ್ನು ಹಂಚಿಕೊಂಡ ಸಾರಾ ನಂತರ ಇಂಡಿಯನ್ ಟ್ರೆಡಿಷನಲ್ ಲುಕ್‌ನಲ್ಲಿ ಪೋಸ್ ನೀಡಿ ಗಮನ ಸೆಳೆದಿದ್ದಾರೆ.
ಬಿಳಿ ಬಣ್ಣದ ಮೇಲೆ ಕಪ್ಪು ಸುಂದರ ಥ್ರೆಡ್ ವರ್ಕ್ ಹೊಂದಿರವ ಶರರಾ ಸೆಟ್ ಧರಿಸಿರುವ ಸಾರಾ ಜೊತೆಗೆ ಆರ್ಗನ್ಜಾ ದುಪಟ್ಟಾ ಪೇರ್ ಮಾಡಿಕೊಂಡು ತಮ್ಮ ಲುಕ್ ಪೂರ್ಣಗೊಳಿಸಿದ್ದಾರೆ.
Sara Ali Khan
ಉದ್ದ ಬೆಳ್ಳಿಯ ಕಿವಿಯೋಲೆಗಳು ಜೊತೆ ಮಿನಿಮಮ್ ಮೇಕಪ್ ಧರಿಸಿರುವ ಸಾರಾ ಒಂದು ಕೈಗೆ ಬಳೆಗಳು ಮತ್ತು ಕಾಲಿಗೆ ಆರಾಮದಾಯಕವಾದ ಮ್ಯಾಚಿಂಗ್ ಜುತ್ತಿ ಆಯ್ಕೆ ಮಾಡಿಕೊಂಡಿದ್ದಾರೆ.
ಸಾಂಪ್ರದಾಯಿಕ ಲುಕ್‌ನಲ್ಲಿ ಸಿಡ್ನಿ ಹಾರ್ಬರ್ ಸೇತುವೆಯ ಹಿನ್ನೆಲೆಯಲ್ಲಿ ಪೋಸ್ ನೀಡುರುವ ಸಾರಾರ ಬಗ್ಗೆ ನೆಟ್ಟಿಜನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ವಿದೇಶದಲ್ಲಿ ಭಾರತೀಯ ಉಡುಗೆಯಲ್ಲಿ ಕಾಣಿಸಿಕೊಳ್ಳುವ ವೈಬ್ ಬೇರೆಯದು ಎಂದು ಜನ ಹೊಗಳಿದ್ದಾರೆ.
ಕೆಲಸದ ಮುಂಭಾಗದಲ್ಲಿ, ವಕ್ರಾಂತ್ ಮಾಸ್ಸಿ ಎದುರು 'ಗ್ಯಾಸ್‌ಲೈಟ್', ವಿಕ್ಕಿ ಕೌಶಲ್ ಎದುರು ಮಡಾಕ್ ಸಾರಾ ಆಲಿ ಖಾನ್ ಅವರ ಮುಂದಿನ ಚಿತ್ರ, ಇದಲ್ಲದೆ 'ಏ ವತನ್ ಮೇರೆ ವತನ್' ನಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.