ಸಮಂತಾ ಮಾಡೋ ಬೋಲ್ಡ್ ಸೀನ್ ಬಗ್ಗೆ ನಾಗಚೈತನ್ಯಗೆ ಕೋಪ ? ಬಿರುಕಿಗೆ ಇದೇ ಕಾರಣವಾ ?
- ಪತ್ನಿ ಸಮಂತಾ ಮಾಡೋ ಬೋಲ್ಡ್ ಪಾತ್ರಗಳ ಬಗ್ಗೆ ಅಸಮಾಧಾನ
- ಸೌತ್ ಸ್ಟಾರ್ ಕಪಲ್ ಮಧ್ಯೆ ಬಿರುಕಿಗೆ ಕಾರಣವಾಯ್ತಾ ಸಮಂತಾರ ಬೋಲ್ಡ್ ಪಾತ್ರಗಳು ?
ಸಮಂತಾ ರುಥ್ ಪ್ರಭು ಸೌತ್ ಸಿನಿಮಾ ಇಂಡಸ್ಟ್ರಿಯ ಬ್ಯೂಟಿಫುಲ್ & ಟ್ಯಾಲೆಂಟೆಡ್ ನಟಿ. ಸೌತ್ ಸೂಪರ್‌ಸ್ಟಾರ್ ನಟ ನಾಗ ಚೈತನ್ಯ ಅಕ್ಕಿನೇನಿ ಅವರನ್ನು 2017 ಅಕ್ಟೋಬರ್ 6ರಂದು ವಿವಾಹವಾದ ನಂತರ ನಟಿ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿದ್ದರು.
ಈ ಜೋಡಿಯ 10 ವರ್ಷಗಳ ಪ್ರೇಮ ಕಥೆಯಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಏರಿಳಿತಗಳು ಕಂಡುಬಂದಿವೆ. ಈ ಸ್ಟಾರ್ ಜೋಡಿ ವಿಚ್ಛೇದಿತರಾಗೋದು ಪಕ್ಕಾ ಎಂದೂ ಹೇಳಲಾಗುತ್ತಿದೆ. ಇದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ.
ಸ್ಟಾರ್ ಜೋಡಿ ತಮ್ಮ ದಾಂಪತ್ಯ ಕುರಿತು ಗಾಸಿಪ್ ಸುದ್ದಿಗಳ ಬಗ್ಗೆ ಏನೂ ಪ್ರತಿಕ್ರಿಯಿಸದಿದ್ದರೂ ಅವರ ನಡೆಗಳು ಏನು ? ನಿಜಕ್ಕೂ ಬಿರುಕುಂಟಾಗಿರುವುದು ಹೌದಾ ಎಂಬ ವಿಚಾರಗಳು ಇನ್ನೂ ಅಸ್ಪಷ್ಟ.
ವಿವಿಧಧ್ಯಮ ಮೂಲಗಳ ಪ್ರಕಾರ ಸಮಂತಾ ಮತ್ತು ಅವರ ಪತಿ, ನಟ ನಾಗ ಚೈತನ್ಯ ಅವರ ಸಂಬಂಧದಲ್ಲಿ ಭಾರೀ ಬಿರುಕಿದೆ ಎನ್ನಲಾಗಿದೆ. ಒಮ್ಮೆ ಉತ್ಸಾಹದಿಂದ ಪ್ರೀತಿಸಿದ ಜೋಡಿ ಹೊಂದಾಣಿಕೆ ಮಾಡಲಾಗದೆ ಭಿನ್ನಾಭಿಪ್ರಾಯಗಳಿಂದಾಗಿ ಒಟ್ಟಿಗೆ ವಾಸಿಸುತ್ತಿಲ್ಲ ಎನ್ನಲಾಗಿದೆ.
ಆದರೂ ಸಾರ್ವಜನಿಕ ಸಮಾರಂಭಗಳಲ್ಲಿ ಇಬ್ಬರೂ ತಮ್ಮ ನಡುವಿನ ಸಂಭವನೀಯ ವಿಭಜನೆಯ ಬಗ್ಗೆ ಯಾವುದೇ ಸಂಶಯ ಮೂಡದಂತೆ ವರ್ತಿಸಿದ್ದಾರೆ. ನಾಗ ಚೈತನ್ಯ ಹಾಗೂ ಅವರ ತಂದೆ ನಾಗಾರ್ಜುನ ಅಕ್ಕಿನೇನಿ, ಸಮಂತಾರ ಗ್ಲಾಮರಸ್ ವ್ಯಕ್ತಿತ್ವವವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.
ಸ್ಯಾಮ್ ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಚಾಲೆಂಜಿಂಗ್ ಮತ್ತು ಸಿಕ್ಕಾಪಟ್ಟೆ ಬೋಲ್ಡ್ ಪಾತ್ರಗಳನ್ನು ಮಾಡುತ್ತಾರೆ ಎನ್ನುವುದನ್ನು ಎಲ್ಲರಿಗೂ ಗೊತ್ತು.
ತಂದೆ ಮನೆಗೆ ಬಂದ ನಾಗಚೈತನ್ಯ: ಬಾಲಿವುಡ್ ಕನಸಿನಲ್ಲಿ ಸಮಂತಾ ಮುಂಬೈಗೆ ಶಿಫ್ಟ್ ?
ಇದು ಅಕ್ಕಿನೇನಿ ಕುಟುಂಬಕ್ಕೆ ತೊಂದರೆಯಾತ್ತಿದೆ. ವರದಿಗಳ ಪ್ರಕಾರ ನಾಗ ಚೈತನ್ಯ ಮತ್ತು ನಾಗಾರ್ಜುನ ಪತ್ನಿ ಮತ್ತು ಸಮಂತಾರ ಅತ್ತೆ ಅಮಲಾ ಅಕ್ಕಿನೇನಿ ಅವರಂತೆಯೇ ಬದುಕಲು ಬಯಸುತ್ತಾರೆ.
ನಟಿ ಕೊನೆಯದಾಗಿ 'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ತುಂಬಾ ಬೋಲ್ಡ್ & ಚಾಲೆಂಜಿಂಗ್ ಪಾತ್ರದಲ್ಲಿ ಕಾಣಿಸಿಕೊಂಡರು. ವಿಮರ್ಶಕರು ಮತ್ತು ಅಭಿಮಾನಿಗಳು ಅವರ ಅಭಿನಯವನ್ನು ಶ್ಲಾಘಿಸಿದರೂ, ಅದು ಅಕ್ಕಿನೇನಿ ಕುಟುಂಬಕ್ಕೆ ಅಂತಹ ಖುಷಿ ಕೊಟ್ಟಿಲ್ಲ
ಸಮಂತಾ ಮತ್ತು ಅಕ್ಕಿನೇನಿ ಕುಟುಂಬದ ಸದಸ್ಯರ ನಡುವೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ದೃಢ ಸಂಕಲ್ಪದ ಬಗ್ಗೆ ಮತ್ತು ಆಕೆಯ ನಟನಾ ವೃತ್ತಿಯನ್ನು ಯಾವುದೇ ಬೆಲೆಯಲ್ಲೂ ಬಿಟ್ಟುಕೊಡದಿರುವ ಬಗ್ಗೆ ಹಲವಾರು ಚರ್ಚೆಗಳಾಗಿವೆ ಎನ್ನಲಾಗಿದೆ
ಈ ಬಗ್ಗೆ ಕುಟುಂಬಗಳ ನಡುವೆ ಬಹಳಷ್ಟು ಚರ್ಚೆಗಳಾದ ನಂತರ ಸ್ಯಾಮ್ ಮತ್ತು ನಾಗಚೈತನ್ಯ ವಿಚ್ಛೇದನ ಪಡೆಯುವ ನಿರ್ಧಾರ ಉದ್ಭವಿಸಿತು ಎಂದು ಹೇಳಲಾಗಿದೆ. ವಿಚ್ಛೇದನವು ಖಂಡಿತವಾಗಿಯೂ ದಂಪತಿಯ ಮನಸ್ಸಿನಲ್ಲಿರುತ್ತದೆ. ಎರಡು ಮೂರು ತಿಂಗಳಲ್ಲಿ ಕೋರ್ಟ್, ಕಚೇರಿ ಡಾಕ್ಯುಮೆಂಟ್‌ಗಳು ಫೈನಲ್ ಆಗುತ್ತವೆ ಎನ್ನಲಾಗಿದೆ.