ತಂದೆ ಮನೆಗೆ ಬಂದ ನಾಗಚೈತನ್ಯ: ಬಾಲಿವುಡ್ ಕನಸಿನಲ್ಲಿ ಸಮಂತಾ ಮುಂಬೈಗೆ ಶಿಫ್ಟ್ ?
- ಪತ್ನಿಯ ಜೊತೆಗಿದ್ದ ನಾಗ ಚೈತನ್ಯ ತಂದೆ ಮನೆಗೆ ಶಿಫ್ಟ್
- ಬಾಲಿವುಡ್ ಕೆರಿಯರ್ ಕನಸಿನಲ್ಲಿ ಮುಂಬೈಗೆ ಹಾರಲಿದ್ದಾರಾ ಸಮಂತಾ ?
- ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್‌ನಲ್ಲಿ ಸಖತ್ ಹಿಟ್ ಆದ ನಟಿ
ಸಮಂತಾ ನಾಗ ಚೈತನ್ಯ ದಾಂಪತ್ಯ ಜೀವನದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದೀಗ ರೂಮರ್ಸ್ ಮಧ್ಯೆ ನಾಗಚೈತನ್ಯ ತನ್ನ ಮನೆಯನ್ನು ಬದಲಾಯಿಸಿಕೊಂಡಿದ್ದಾರೆ.
ಪತ್ನಿ ಸಮಂತಾ ಜೊತೆಗಿದ್ದ ನಟ ತನ್ನ ತಂದೆ ಮೆಗಾ-ಸ್ಟಾರ್ ನಾಗಾರ್ಜುನ ಮತ್ತು ಅವರ ಪತ್ನಿ ಅಮಲಾಳೊಂದಿಗೆ ವಾಸಿಸಲು ಶಿಫ್ಟ್ ಆಗಿದ್ದಾರೆ.
ದಂಪತಿಗಳ ನಡುವಿನ ಹೊಂದಾಣಿಕೆಗಾಗಿ ಎರಡು ಕುಟುಂಬಗಳ ನಡುವಿನ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ನಾಗಚೈತನ್ಯ ತನ್ನ ಹೆತ್ತವರೊಂದಿಗೆ ಇರಲು ಸಮಂತಾ ಜೊತೆ ವಾಸವಿದ್ದ ಮನೆಬಿಟ್ಟು ಬಂದಿದ್ದಾರೆ.
ಬಾಲಿವುಡ್‌ನಲ್ಲಿ ಕೆರಿಯರ್ ಮುಂದುವರಿಸುವ ನಿಟ್ಟಿನಲ್ಲಿ ಸಮಂತಾ ಹೈದರಾಬಾದ್ ಮನೆಯಿಂದ ಮುಂಬೈಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ.
ಸಮಂತಾ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ಮೂಲಕ ಹಿಂದಿಯಲ್ಲಿ ಮೊದಲ ಬಾರಿ ನಟಿಸಿದ್ದು ಇದು ಬಾಲಿವುಡ್ ಎಂಟ್ರಿಗೆ ದೊಡ್ಡ ಸಾಧ್ಯತೆಯನ್ನು ತೆರೆದುಕೊಟ್ಟಿದೆ.
ಸಮಂತಾ ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು: ಈ ಕ್ಯೂಟ್ ಜೋಡಿ ಬೇರೆಯಾಗಲು ಕಾರಣವೇನು!
ನಟಿ ಬಾಲಿವುಡ್‌ನಲ್ಲಿ ಕೆರಿಯರ್ ಮುಂದವರಿಸುವ ಪ್ಲಾನ್‌ನಲ್ಲಿದ್ದು ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ. ಇತ್ತ ನಾಗಚೈತನ್ಯ ಕೂಡಾ ಬಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾರೆ