- Home
- Entertainment
- Cine World
- ಸಿಕಂದರ್ ಬಳಿಕ ಸಲ್ಮಾನ್ ಖಾನ್ ಮುಂಬರುವ ಚಿತ್ರಗಳ ಲಿಸ್ಟ್ ಇಲ್ಲಿದೆ, ಈ ಸಿನಿಮಾ ಮೊದಲು..!
ಸಿಕಂದರ್ ಬಳಿಕ ಸಲ್ಮಾನ್ ಖಾನ್ ಮುಂಬರುವ ಚಿತ್ರಗಳ ಲಿಸ್ಟ್ ಇಲ್ಲಿದೆ, ಈ ಸಿನಿಮಾ ಮೊದಲು..!
ಸಲ್ಮಾನ್ ಖಾನ್ ಮುಂಬರುವ ಚಿತ್ರಗಳು: ಸಲ್ಮಾನ್ ಖಾನ್ ಸಿಕಂದರ್ ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ. ಈ ಸಿನಿಮಾ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಅವರ ಮುಂಬರುವ ಚಿತ್ರಗಳ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.

ಸಲ್ಮಾನ್ ಖಾನ್ ತಮ್ಮ ಸಿಕಂದರ್ ಚಿತ್ರದ ಬಗ್ಗೆ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಸಿಕಂದರ್ ಈದ್ ಸಂದರ್ಭದಲ್ಲಿ ಮಾರ್ಚ್ 30 ರಂದು ಬಿಡುಗಡೆಯಾಗುತ್ತಿದೆ.
ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಮುಂದಿನ ವರ್ಷಗಳಲ್ಲಿ ಸುಮಾರು 9 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಲಿಸ್ಟ್ ಇಲ್ಲಿದೆ ನೋಡಿ..
ಸಲ್ಮಾನ್ ಖಾನ್ ಸಿಕಂದರ್ ಬಿಡುಗಡೆಯ ನಂತರ ಕಿಕ್ 2 ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಆ ಚಿತ್ರದ ಹೀರೋಯಿನ್ ಯಾರಿರಬಹುದು? ಗೆಸ್ ಮಾಡಿ..
ಸಲ್ಮಾನ್ ಖಾನ್ ಬಜರಂಗಿ ಭಾಯಿಜಾನ್ 2 ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಕಬೀರ್ ಖಾನ್ ಕಥೆ ಸಿದ್ಧಪಡಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಟೈಗರ್ ವರ್ಸಸ್ ಪಠಾಣ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಚಿತ್ರವನ್ನು ತಡೆಹಿಡಿಯಲಾಗಿದೆ. ಸದ್ಯಕ್ಕೆ ಈ ಚಿತ್ರವು ಮುಂದುವರಿಯುವ ಲಕ್ಷಣ ಕಾಣಿಸುತ್ತಿಲ್ಲ.
ಸಲ್ಮಾನ್ ಖಾನ್ ಸೂರಜ್ ಬಡ್ಜಾತ್ಯ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಕೆಲಸ ಶುರು ಮಾಡ್ತಾರೆ. ಆದರೆ, ಡೇಟ್ಸ್ ಫಿಕ್ಸ್ ಆಗಿಲ್ಲ.
ಸಲ್ಮಾನ್ ಖಾನ್, ಸಂಜಯ್ ದತ್ ಜೊತೆಗೂ ಒಂದು ಸಿನಿಮಾ ಮಾಡ್ತಿದ್ದಾರೆ. ಸದ್ಯಕ್ಕೆ ಜಾಸ್ತಿ ಮಾಹಿತಿ ಇಲ್ಲ. ಸ್ವಲ್ಪ ಸಮಯದ ಬಳಿಕ ಮಾಹಿತಿ ಹೊರಬೀಳಲಿದೆ.
ಅಂದಾಜ್ ಅಪ್ನಾ ಅಪ್ನಾ 2 ರಲ್ಲಿ ಸಲ್ಮಾನ್ ಖಾನ್ ಮತ್ತೆ ಅಮೀರ್ ಖಾನ್ ಜೊತೆ ಕಾಣ್ಬೋದು. ನಿರ್ದೇಶಕರು ತುಂಬಾ ಖುಷಿಯಾಗಿದ್ದಾರೆ.
ಸಲ್ಮಾನ್ ಖಾನ್ ದಬಾಂಗ್ 4 ಚಿತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಈ ಸಿನಿಮಾ 2026ಕ್ಕೆ ಬಿಡುಗಡೆಯಾಗಬಹುದು. ಸದ್ಯಕ್ಕೆ ಸಿಕಂದರ್ ಸಿನಿಮಾ ತೆರೆಗೆ ಇದೇ 30ರಂದು ಬರಲಿದೆ (30 March 2025).
ಸಲ್ಮಾನ್ ಖಾನ್ ಬಬ್ಬರ್ ಶೇರ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಕಬೀರ್ ಸದ್ಯಕ್ಕೆ ಬ್ಯುಸಿ ಇದ್ದಾರೆ, ಅದಕ್ಕೆ ಸಿನಿಮಾ ತಡೆಹಿಡಿದಿದ್ದಾರೆ.
ಸಲ್ಮಾನ್ ಖಾನ್ ರಾಜ್‌ಕುಮಾರ್ ಪೆರಿಯಾಸಾಮಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅವರ ಮುಂದಿನ ಚಿತ್ರದಲ್ಲಿ ಕಾಣಿಸಬಹುದು. ಆದರೆ ಸ್ವಲ್ಪ ಕಾಯಬೇಕು!