ಗಂಡನ ಜೊತೆಯ ಡ್ಯಾನ್ಸ್ ಪೋಟೋ ಶೇರ್ ಮಾಡಿದ ಸಲ್ಮಾನ್ ನಾಯಕಿ!
90ರ ದಶಕದ ಹಿಟ್ ಸಿನಿಮಾ ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ ಭಾಗ್ಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ್ಗೆ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಭಾಗ್ಯಶ್ರೀ ಇತ್ತೀಚೆಗೆ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಪತಿ ಹಿಮಾಲಯ ದಾಸನಿ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಫೋಟೋದಲ್ಲಿ ಭಾಗ್ಯಶ್ರೀ ನೃತ್ಯ ಮಾಡುತ್ತಿದ್ದರೆ, ಪತಿ ಮೊಣಕಾಲುಗಳ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಈ ಫೋಟೋ ವೈರಲ್ ಆಗಿದೆ.
ಈ ಫೋಟೋವನ್ನು ಹಂಚಿಕೊಂಡು ಭಾಗ್ಯಶ್ರೀ ತಮಾಷೆಯಾಗಿ, ನಾನು ಅವರನ್ನು ಮೊಣಕಾಲುಗಳ ಮೇಲೆ ಕೂರುವಂತೆ ಮಾಡಿದೆ, ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇದರಿಂದ ಅವರಿಗೆ ತುಂಬಾ ಹೊಡೆತ ಬಿದ್ದಿದ್ದು ಹೃದಯಕ್ಕೆ ಗಾಯವಾಗಿರಬೇಕು ಎಂದೂ ಹೇಳಿದ್ದಾರೆ ನಟಿ ಭ್ಯಾಗ್ಯಶ್ರೀ.
ಇದರೊಂದಿಗೆ ಭಾಗ್ಯಶ್ರೀ ಕೂಡ ತಮ್ಮ ಜೀವನದ ತಮಾಷೆಯ ಘಟನೆಗಳನ್ನು ಹಂಚಿಕೊಳ್ಳಲು ಅಭಿಮಾನಿಗಳನ್ನು ಕೇಳಿಕೊಂಡರು.
ನಿಮ್ಮ ಗಂಡನನ್ನು ನೃತ್ಯ ಮಾಡುವಂತೆ ನೀವು ಮ್ನಾನೇಜ್ ಮಾಡಿದ ಕೆಲವು ತಮಾಷೆಯ ಕಥೆಗಳನ್ನು ಹಂಚಿಕೊಳ್ಳಿ. ಸ್ವಲ್ಪ ನಗೋಣ ಎಂದು ಹೇಳಿದ್ದಾರೆ.
ಭಾಗ್ಯಶ್ರೀ 1989ರ ಚಲನಚಿತ್ರ ಮೈನೆ ಪ್ಯಾರ್ ಕಿಯಾದೊಂದಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ಬಾಲ್ಯದ ಗೆಳೆಯ ಹಿಮಾಲಯ ದಾಸಾನಿಯನ್ನು ಮದುವೆಯಾಗಲು ನಿರ್ಧರಿಸಿದರು. ಅವರ ಈ ನಿರ್ಧಾರವು ಅವರ ವೃತ್ತಿಜೀವನವನ್ನು ಹಾಳು ಮಾಡಿತು.
ಮೈನೆ ಪ್ಯಾರ್ ಕಿಯಾ' ನಂತರ ಅವರು ಇನ್ನೂ ಕೆಲವು ಚಲನಚಿತ್ರಗಳನ್ನು ಮಾಡಿದರು. ಆದರೆ ಮತ್ತೆ ಆ ಯಶಸ್ಸು ಸಿಗಲಿಲ್ಲ. ಭಾಗ್ಯಶ್ರೀ ಸತತ ಫ್ಲಾಪ್‌ಗಳ ನಂತರ ಪರ್ಸನಲ್ ಲೈಫ್‌ನಲ್ಲಿ ಬ್ಯುಸಿಯಾದರು. ಅಭಿಮನ್ಯು ಮತ್ತು ಅವಂತಿಕಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ನಟಿ.
ಅವರು ಮತ್ತು ಹಿಮಾಲಯ ಮೊದಲು ಶಾಲೆಯಲ್ಲಿ ಭೇಟಿಯಾದರು. ಇಡೀ ತರಗತಿಯಲ್ಲಿ ಹಿಮಾಲಯ ಅತ್ಯಂತ ಜೋರು ಮತ್ತು ನಾನು ಆ ಕ್ಲಾಸ್ ಮಾನಿಟರ್ ಆಗಿದ್ದೆ. ನಾವು ತರಗತಿಯ ಹೊರಗೆ ಮತ್ತು ಒಳಗೆ ಆಗಾಗ್ಗೆ ಜಗಳವಾಡುತ್ತಿದ್ದೆವು. ಹೇಗಾದರೂ, ಅಲ್ಲಿಯವರೆಗೆ ನಾವು ಪರಸ್ಪರ ಡೇಟಿಂಗ್ ಮಾಡಿರಲಿಲ್ಲ. ಶಾಲೆಯ ಕೊನೆಯ ದಿನದಂದೂ ಅವರು ನನ್ನೊಂದಿಗೆ ಏನನ್ನೂ ಹೇಳಲಿಲ್ಲ.
ನಂತರ ಒಂದು ದಿನ ಹಿಮಾಲಯ ಅವರು ನನ್ನೊಂದಿಗೆ ಮಾತನಾಡಲು ಬಯಸಿದ್ದಾರೆಂದರು ಮತ್ತು ಅದರ ನಂತರ ಅವರು ಸುಮಾರು ಒಂದು ವಾರ ನನಗೆ ಹೇಳಲು ಪ್ರಯತ್ನಿಸುತ್ತಲೇ ಇದ್ದರು, ಆದರೆ ಪ್ರತಿ ಬಾರಿಯೂ ಹಿಂದೆ ಸರಿಯುತ್ತಿದ್ದರು.
ಅಂತಿಮವಾಗಿ, ನಾನು ಅವರಿಗೆ ಹೇಳಿದೆ, ನೋಡಿ, ನೀವು ಏನು ಹೇಳಬೇಕು ಎಂದ್ದಿದಿರೋ ಉತ್ತರವು ಸಕಾರಾತ್ಮಕವಾಗಿರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಹೇಳಿದ ನಂತರ ಅವರು ನನ್ನನ್ನು ಇಷ್ಟಪಡುತ್ತಾರೆಂದು ಪ್ರೇಮ ನಿವೇದನೆ ಮಾಡಿಕೊಂಡರು.
ನಮ್ಮ ಕುಟುಂಬವು ಮದುವೆಗೆ ವಿರುದ್ಧವಾಗಿರುವುದರಿಂದ, ನಾವು ಒಂದು ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದ್ದೇವೆ. ನಾವು ಜೀವನ ಸಂಗಾತಿಯಾಗುತ್ತೇವೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸುವ ದಿನವಾಗಿತ್ತು. ಇದರ ನಂತರ ನಾವು ಮನೆಯಿಂದ ಓಡಿ ದೇವಸ್ಥಾನದಲ್ಲಿ ಮದುವೆಯಾದೆವು. ಹಿಮಾಲಯ್ ಪೋಷಕರಲ್ಲದೆ, ಸಲ್ಮಾನ್ ಖಾನ್ ಮತ್ತು ಸೂರಜ್ ಬರ್ಜಾತ್ಯಾ ಕೂಡ ಈ ಮದುವೆಗೆ ಹಾಜರಾಗಿದ್ದರಂತೆ.
ಅಮೋಲ್ ಪಾಲೇಕರ್ ನಿರ್ಮಿಸಿದ 'ಕಚ್ಚಿ ಧೂಪ್' ಎಂಬ ಟಿವಿ ಧಾರಾವಾಹಿ ಮೂಲಕ ಕೆರಿಯರ್ ಶುರು ಮಾಡಿದ ಭಾಗ್ಯಶ್ರೀ ನಂತರ, ಹೊನಿ-ಅನೋಹ್ನಿ, ಕಿಸ್ಸೆ ಮಿಯಾನ್ ಬಿವಿ ಕೆ, ಸಂಜೌತಾ, ಪೇಪರ್ ಕಯಾಕ್, ತನ್ಹಾ ದಿಲ್ ತನ್ಹಾ ಸಫರ್, ಲೌಟ್ ಆವೊ ತ್ರಿಶಾ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗ್ಯಶ್ರೀ ಕೆಲವು ಭೋಜ್‌ಪುರಿ ಚಿತ್ರಗಳನ್ನೂ ನಿರ್ಮಿಸಿದ್ದಾರೆ.
ಭಾಗ್ಯಶ್ರೀ ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರದ ಮೂಲಕ ಮತ್ತೆ ಸಿನಿಮಾಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಮಗ ಅಭಿಮನ್ಯು ನಟನಾ ಜಗತ್ತಿಗೆ ಮತ್ತೆ ಕಾಲಿಡಲು ಪ್ರೇರಣೆ ನೀಡಿದ್ದಾಗಿ ಹೇಳಿದ್ದರು.