Saif Ali Khan: ಮೋಸಕ್ಕೆ ಬಲಿಯಾಗಿ ತಮ್ಮ ಸಂಪತ್ತಿನ ಶೇ.70ರಷ್ಟು ಕಳೆದುಕೊಂಡ ಕರೀನಾ ಪತಿ
ಬಾಲಿವುಡ್ ನಟ ಸೈಫ್ ಅಲಿ ಖಾನ್(Saif ali khan) ಅವರು ಬಾಲಿವುಡ್‌ನಲ್ಲಿ(Bollywood)ಬ್ಯುಸಿ ನಟ. ಅಷ್ಟೇ ಸಂಭಾವನೆಯನ್ನೂ ಪಡೆಯುತ್ತಾರೆ. ಆದರೆ ಇತ್ತೀಚೆಗೆ ಮೋಸಕ್ಕೊಳಗಾಗಿ ಎಲ್ಲವನ್ನೂ ಕಳ್ಕೊಂಡಿದ್ದಾರೆ.
ಸೈಫ್ ಅಲಿ ಖಾನ್(Saif Ali khan) ಅವರು ಇತ್ತೀಚೆಗೆ ಮುಂಬೈನಲ್ಲಿ ಆಸ್ತಿ ವ್ಯವಹಾರದಲ್ಲಿ ವಂಚನೆಗೆ ಒಳಗಾಗಿದ್ದಾರೆ. ಅವರ ಗಳಿಕೆಯ ಬಹುತೇಕ ಭಾಗವನ್ನು ಇದರಲ್ಲಿ ಕಳೆದುಕೊಂಡಿದ್ದಾರೆಂದು ನಟ ರಿವೀಲ್ ಮಾಡಿದ್ದಾರೆ.
ಕಚೇರಿ ಜಾಗದಲ್ಲಿ ಹೂಡಿಕೆ ಮಾಡುವ ಕುರಿತು ಮಾತನಾಡಿದ ಸೈಫ್, ಕೆಲವು ವರ್ಷಗಳ ಹಿಂದೆ ನಾನು ಮೋಸ ಹೋಗಿದ್ದೆ. ಇದೆಲ್ಲವೂ ಆಸ್ತಿಗೆ ಸಂಬಂಧಿಸಿದ್ದು. ಮೂರು ವರ್ಷದಲ್ಲಿ ಸಿಗುತ್ತದೆ ಎಂದು ಹೇಳಿದರೂ ಇನ್ನೂ ಸಿಕ್ಕಿಲ್ಲ ಎಂದಿದ್ದಾರೆ.
ಆ ಸಮಯದವರೆಗೆ ನಾನು ಗಳಿಸಿದ ಎಲ್ಲದರಲ್ಲಿ ಸುಮಾರು 70% ರಷ್ಟು ಕಳೆದುಕೊಂಡಿದ್ದೇನೆ. ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಭರವಸೆಯಲ್ಲಿದ್ದರು. ಆದರೆ ಲಾಕ್‌ಡೌನ್ ಆದ್ದರಿಂದ ಅವರಿಗೆ ಇನ್ನೂ ಕಚೇರಿ ಸ್ಥಳ ಸಿಕ್ಕಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಈ ಸಂಭಾಷಣೆಯ ಸಮಯದಲ್ಲಿ ಸೈಫ್ ಅಲಿ ಖಾನ್ ಅವರು ಅಭಿಮಾನಿಯೊಂದಿಗಿನ ವಿಚಿತ್ರ ಎನ್ಕೌಂಟರ್ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಅಪರಿಚಿತ ಮಹಿಳೆ ಒಮ್ಮೆ ತಮ್ಮ ಹಳೆಯ ಫ್ಲಾಟ್‌ಗೆ ನುಗ್ಗಿದಾಗ ಅವರು ನಿಜವಾಗಿಯೂ ಭಯಪಟ್ಟರು ಎಂದು ನಟ ನೆನಪಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ಮತ್ತಷ್ಟು ವಿವರಿಸಿದ ಸೈಫ್, ಮಹಿಳೆಯೊಬ್ಬರು ಒಳಗೆ ನುಗ್ಗಿದರು. ನಟನನ್ನು ನೋಡಿ 'ಹಾಗಾದರೆ ನೀವು ಇಲ್ಲಿ ವಾಸಿಸುತ್ತೀರಾ'ಎಂದು ಕೇಳಿದ್ದಾರೆ. ಮಹಿಳೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದಳು, ಏನೂ ತೊಂದರೆ ಮಾಡುವಂತೆ ಇರಲಿಲ್ಲ ಎಂದಿದ್ದಾರೆ.
ಆದ್ದರಿಂದ ಯಾರೂ ಅವಳನ್ನು ತಡೆದಿರಲಿಲ್ಲ. ಪರಿಸ್ಥಿತಿಗೆ ಪ್ರತಿಕ್ರಿಯಿಸಿದ ಕರೀನಾ, ಸೈಫ್ ಅವರನ್ನು ಮೆಲುವಾಗಿ ಗದರಿದ್ದಾರೆ. ನೀವು ಏನೂ ಹೇಳುವುದಿಲ್ಲವೇ ಎಂದಾಗ ಸೈಫ್ ಅವರು ಅನಿರೀಕ್ಷಿತ ಘಟನೆಯಿಂದ ನಂತರ ಭಯಗೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ. ಅವರು ಅಪರಿಚಿತ ಮಹಿಳೆಯನ್ನು ಹೊರಡಲು ಹೇಳಿದರು. ಆಕೆ ಮನೆಯಿಂದ ಹೊರ ಹೋಗಿದ್ದಾರೆ.