ವಿಜಯ್ ದೇವರಕೊಂಡ ಲಕ್ಷ್ಯುರಿಯಸ್ ಲೈಫ್‌ಸ್ಟೈಲ್‌ಗೇ ರಶ್ಮಿಕಾ ಫಿದಾ ಆದ್ರಾ?
ಟಾಲಿವುಡ್‌ನ ಹ್ಯಾಂಡ್‌ಸಮ್ ನಟ ವಿಜಯ್ ದೇವರಕೊಂಡ (Vijay Deverakonda) ತಮ್ಮ ನಟನೆ ಮತ್ತು ಲುಕ್ ಮೂಲಕ ದೊಡ್ಡ ಫ್ಯಾನ್ ಬಳಗ ಗಳಿಸಿದ್ದಾರೆ. ಇದರ ಜೊತೆ ವಿಜಯ್ ಐಷರಾಮಿ ಜೀವನಶೈಲಿಗೂ ಹೆಸರಾಗಿದ್ದಾರೆ. ಸುಮಾರು 55 ಕೋಟಿ ರೂ. ನೆಟ್‌ವರ್ತ್‌ನ ವಿಜಯ್ ಅವರು ಹಲವು ಐಷರಾಮಿ ಕಾರುಗಳ ಮಾಲೀಕರು. ದೇವರಕೊಂಡ ಅವರ ಅದ್ದೂರಿ ಬಂಗಲೆ ಹೇಗಿದೆ ನೋಡಿ.
ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಖ್ಯಾತಿ ಗಳಿಸಿದ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಇತ್ತೀಚೆಗೆ ಲೈಗರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಲೈಗರ್ ಸಿನಿಮಾಕ್ಕೆ 35 ಕೋಟಿ ರೂಪಾಯಿಗಳ ಸಂಬಳ ಪಡೆದ ವಿಜಯ್ ಅವರ ಒಟ್ಟು ನಿವ್ವಳ ಮೌಲ್ಯವು ರೂ 55 ಕೋಟಿಯ ಗಡಿ ದಾಟಿತು,
ದೇವರಕೊಂಡ ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅದ್ದೂರಿ ಬಂಗಲೆಯಂತಹ ಐಷಾರಾಮಿ ವಸ್ತುಗಳ ಮೇಲೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ.
ವಿಜಯ್ ದೇವರಕೊಂಡ ಅವರು 2019 ರಲ್ಲಿ ಹೈದರಾಬಾದ್ - ಜುಬಿಲಿ ಹಿಲ್ಸ್‌ನ ಅತ್ಯಂತ ಸುಂದರವಾದ ನೆರೆಹೊರೆಯಲ್ಲಿ ಅದ್ದೂರಿ ಬಂಗಲೆಯನ್ನು ಖರೀದಿಸಿ ಚಿರಂಜೀವಿ, ಮಹೇಶ್ ಬಾಬು ಮತ್ತು ಇತರರಂತಹ ಎ-ಲಿಸ್ಟರ್‌ಗಳ ದೀರ್ಘ ಪಟ್ಟಿಗೆ ಸೇರಿಕೊಂಡರು.
ಟಾಲಿವುಡ್ ನಟನ ಸುಮಾರು 15 ಕೋಟಿ ರೂಪಾಯಿ ವೆಚ್ಚದ ಬಹುಮಹಡಿ ಬಂಗಲೆಯು ಫ್ರೆಂಚ್ ಕಿಟಕಿಗಳು, ಪರ್ಲ್ ವೈಟ್ ಮಾರ್ಬಲ್ ನೆಲಹಾಸು ಮತ್ತು ಆಧುನಿಕ ಪೀಠೋಪಕರಣಗಳನ್ನು ಹೊಂದಿದ್ದು ಬಿಳಿ ವರ್ಣಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ವಿಶಾಲವಾದ ವಿಲ್ಲಾವು ಬೃಹತ್ ತಾರಸಿ, ಸುಂದರ ಉದ್ಯಾನ ಮತ್ತು ಆಧುನಿಕ ಸೌಕರ್ಯಗಳನ್ನು ಹೊಂದಿದೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ದೇವರಕೊಂಡದ ಹಂಚಿಕೊಳ್ಳುವ ಫೋಟೋಗಳಲ್ಲಿ ಅವರ ಐಷಾರಾಮಿ ಬಂಗಲೆಯ ನೋಟ ಕಂಡುಬರುತ್ತದೆ
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅದ್ದೂರಿ ಬಂಗಲೆಯಲ್ಲಿ ತನ್ನ ಕುಟುಂಬ ಮತ್ತು ಮುದ್ದಿನ ನಾಯಿ ಹಸ್ಕಿ ಸ್ಟಾರ್ಮ್‌ನೊಂದಿಗೆ ವಾಸಿಸುತ್ತಿರುವ ವಿಜಯ್ ದೇವರಕೊಂಡ ಅವರ ಗ್ಯಾರೇಜ್ ಹಲವು ಐಷರಾಮಿ ಕಾರುಗಳನ್ನು ಹೊಂದಿದೆ.
ಸುಮಾರು 74.61 ಲಕ್ಷ ರೂಪಾಯಿಗಳ ಬೆಲೆಯೊಂದಿಗೆ ಬರುವ ಫೋರ್ಡ್ ಮಸ್ಟಾಂಗ್ ಅನ್ನು ಹೊಂದಿರುವ ದಕ್ಷಿಣ ಉದ್ಯಮದ ಕೆಲವೇ ನಟರಲ್ಲಿ ದೇವರಕೊಂಡ ಕೂಡ ಒಬ್ಬರು.
ದೇವರಕೊಂಡರ ಗ್ಯಾರೇಜ್‌ನಲ್ಲಿರುವ ಮತ್ತೊಂದು ಸೊಗಸಾದ ಕಾರು ಮರ್ಸಿಡಿಸ್ ಬೆಂಜ್ ಜಿಎಲ್‌ಸಿ. ಜರ್ಮನ್ ಐಷಾರಾಮಿ ವಾಹನದ ಬೆಲೆ 62.00 ಲಕ್ಷದಿಂದ ಪ್ರಾರಂಭವಾಗುತ್ತವ ಇದರ ಬೆಲೆ 68.00 ಲಕ್ಷದವರೆಗೆ ಹೋಗಬಹುದು.
ವಿಜಯ್ ದೇವರಕೊಂಡ ಅವರು 7 ಸೀಟರ್ ವಾಹನ ವೋಲ್ವೋ XC 90 ಕ್ಕೆ 96.50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದು ವಿಶ್ವದ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದೆಂದು ಹೇಳಲಾಗುತ್ತದೆ.
ಇದಲ್ಲದೆ ವಿಜಯ್ BMW 5 ಸರಣಿ ಯ ಕಾರಿನ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ 64.49 ಲಕ್ಷದಿಂದ ಪ್ರಾರಂಭವಾಗಿ ಮಾಡೆಲ್‌ಗಳ ಬೆಲೆ ರೂ 74.49 ಲಕ್ಷಕ್ಕೆ ಏರಬಹುದು
33 ವರ್ಷದ ಟಾಲಿವುಡ್ ನಟ ದೇವರ್‌ಕೊಂಡ ಅವರು ವೃತ್ತಿನಿರತ ಮತ್ತು ವೈಯಕ್ತಿಕ ಕೆಲಸಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಚಾರ್ಟರ್ಡ್ ಫ್ಲೈಟ್ ತೆಗೆದುಕೊಳ್ಳುತ್ತಾರೆ.
ನಟನೆ ದೇವರಕೊಂಡ ಅವರಿಗೆ ಆದಾಯದ ಏಕೈಕ ಮೂಲವಲ್ಲ, ಇವರು ಉದ್ಯಮಿ ಕೂಡ ಆಗಿದ್ದಾರೆ. 2018 ರಲ್ಲಿ ಮಿಂತ್ರಾ ಜೊತೆ ಸಹಯೋಗ ಮಾಡಿಕೊಂಡ ವಿಜಯ್ ರೌಡಿ ಕ್ಲಬ್ ಎಂಬ ತಮ್ಮದೇ ಆದ ಉಡುಪುಗಳನ್ನು ಪ್ರಾರಂಭಿಸಿದ ಮೊದಲ ಟಾಲಿವುಡ್ ನಟ.
2019 ರಲ್ಲಿ ಕಿಂಗ್ ಆಫ್ ದಿ ಹಿಲ್ ಎಂಟರ್‌ಟೈನ್‌ಮೆಂಟ್ ಎಂಬ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇದರ ಮೂಲಕ ಮೀಕು ಮಾತ್ರೆ ಚೆಪ್ತಾ ಮತ್ತು ಪುಷ್ಪಕ ವಿಮಾನದಂತಹ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.