- Home
- Entertainment
- Cine World
- ಮಾಜಿ ಸಚಿವೆ ರೋಜಾಗೆ ಶಾಕ್ ಕೊಟ್ಟ ನಟ ಸೂರ್ಯ: 51 ಜನರನ್ನು ಡಾಕ್ಟರ್ ಮಾಡಿದ ರೋಲೆಕ್ಸ್!
ಮಾಜಿ ಸಚಿವೆ ರೋಜಾಗೆ ಶಾಕ್ ಕೊಟ್ಟ ನಟ ಸೂರ್ಯ: 51 ಜನರನ್ನು ಡಾಕ್ಟರ್ ಮಾಡಿದ ರೋಲೆಕ್ಸ್!
ನಟಿ ರೋಜಾ ಸೆಲ್ವಮಣಿ ಹೀರೋ ಸೂರ್ಯ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಸೂರ್ಯ ತನಗೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ. ಸೂರ್ಯ ಮಾಡಿದ ಒಂದು ದೊಡ್ಡ ಕೆಲಸದ ಬಗ್ಗೆ ತಿಳಿದು ಆಶ್ಚರ್ಯವಾಯಿತು ಎಂದು ರೋಜಾ ಹೇಳಿದ್ದಾರೆ.

ಮಾಜಿ ಸಚಿವೆ ರೋಜಾ ಸೆಲ್ವಮಣಿ
ನಟಿ, ಮಾಜಿ ಸಚಿವೆ ರೋಜಾ ಸೆಲ್ವಮಣಿ ಏನೇ ಮಾತಾಡಿದ್ರೂ ವೈರಲ್ ಆಗುತ್ತೆ. ರಾಜಕೀಯವಾಗಿ ಬೋಲ್ಡ್ ಆಗಿ ಮಾತನಾಡಿ ಫೈರ್ ಬ್ರಾಂಡ್ ಆಗಿದ್ದಾರೆ. ಇತ್ತೀಚೆಗೆ ತಮಿಳು ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ.
ಸೂರ್ಯ ಅಗರಂ ಫೌಂಡೇಶನ್
ಸಂದರ್ಶನವೊಂದರಲ್ಲಿ ರೋಜಾ, ತಮಿಳು ನಟ ಸೂರ್ಯ ಬಗ್ಗೆ ಮಾಡಿದ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಸೂರ್ಯ ತನಗೆ ಸ್ಫೂರ್ತಿ ಎಂದಿದ್ದಾರೆ. ಸೂರ್ಯ 'ಅಗರಂ ಫೌಂಡೇಶನ್' ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ.
51 ಮಂದಿ ವಿದ್ಯಾರ್ಥಿಗಳನ್ನು ಡಾಕ್ಟರ್ ಮಾಡಿದ ಸೂರ್ಯ
ಸೂರ್ಯರ 'ಅಗರಂ ಫೌಂಡೇಶನ್' ಸಹಾಯದಿಂದ ಬರೋಬ್ಬರಿ 51 ವಿದ್ಯಾರ್ಥಿಗಳು ಡಾಕ್ಟರ್ ಆಗಿದ್ದಾರೆ. ಇತ್ತೀಚೆಗೆ ನಡೆದ ಫೌಂಡೇಶನ್‌ನ 15ನೇ ವಾರ್ಷಿಕೋತ್ಸವದಲ್ಲಿ 51 ವೈದ್ಯರು ವೇದಿಕೆ ಏರಿದ್ದರು. ಅವರನ್ನು ನೋಡಿ ಸೂರ್ಯ ಭಾವುಕರಾಗಿದ್ದರು.
ಅವರನ್ನು ನೋಡಿ ನನ್ನ ಮೈಂಡ್ ಬ್ಲಾಕ್ ಆಯ್ತು
''ಆ ಕಾರ್ಯಕ್ರಮದಲ್ಲಿ ಸೂರ್ಯ ಓದಿಸಿದ ಡಾಕ್ಟರ್‌ಗಳು ವೇದಿಕೆಗೆ ಬಂದರು. ಇಷ್ಟು ಮಂದಿಯನ್ನು ಸೂರ್ಯ ಡಾಕ್ಟರ್ ಮಾಡಿಸಿದ್ದಾರಾ ಎಂದು ತಿಳಿದು ನನ್ನ ಮೈಂಡ್ ಬ್ಲಾಕ್ ಆಯ್ತು. ಆ ವಿಷಯದಲ್ಲಿ ಸೂರ್ಯ ನನಗೆ ಸ್ಪೂರ್ತಿ'' ಎಂದಿದ್ದಾರೆ ರೋಜಾ.
ಸಿನಿಮಾಗಳಿಗೆ ರೀ ಎಂಟ್ರಿ
ತಮಿಳಿನಲ್ಲಿ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಡುತ್ತಿರುವ ರೋಜಾ, ತೆಲುಗಿನಲ್ಲೂ ನಟನೆಯನ್ನು ಶುರು ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ರೋಜಾ ಒಂದು ಕಾಲದಲ್ಲಿ ತೆಲುಗಿನ ಟಾಪ್ ನಟಿಯಾಗಿ ಮಿಂಚಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

