MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮದುವೆಯಾಗಿದ್ರೂ ಕೂಡ ಖ್ಯಾತ ನಟಿ ಜೊತೆ ಲಿವ್ -ಇನ್ ರಿಲೇಶನ್’ಶಿಪಲ್ಲಿದ್ರು ಈ ಸೂಪರ್ ಹಿಟ್ ಡೈರೆಕ್ಟರ್!

ಮದುವೆಯಾಗಿದ್ರೂ ಕೂಡ ಖ್ಯಾತ ನಟಿ ಜೊತೆ ಲಿವ್ -ಇನ್ ರಿಲೇಶನ್’ಶಿಪಲ್ಲಿದ್ರು ಈ ಸೂಪರ್ ಹಿಟ್ ಡೈರೆಕ್ಟರ್!

ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ಜನಪ್ರಿಯ ನಿರ್ದೇಶಕ ತಮಗೆ ಮದುವೆಯಾಗಿದ್ದರೂ ಕೂಡ ಒಂದು ಕಾಲದಲ್ಲಿ ಪ್ರಾಚಿ ದೇಸಾಯಿ ಅವರ ಲವ್ವಲ್ಲಿ ಬಿದ್ದಿದ್ದರು. ಅಷ್ಟೇ ಅಲ್ಲ ಇವರು ಲಿವ್ ಇನ್ ರಿಲೇಶನ್’ಶಿಪ್ ನಲ್ಲೂ ಇದ್ದರು.  

2 Min read
Author : Pavna Das
| Updated : Mar 24 2025, 05:55 PM IST
Share this Photo Gallery
  • FB
  • TW
  • Linkdin
  • Whatsapp
15

ಹಿಂದಿ ಚಲನಚಿತ್ರೋದ್ಯಮದಲ್ಲಿ ಅಂದ್ರೆ ಬಾಲಿವುಡ್  (Bollywood) ನಲ್ಲಿ ಪ್ರೀತಿ ಮತ್ತು ದ್ವೇಷದ ಸಂಬಂಧ ಹೊಂದಿರುವ ಅನೇಕ ಸೆಲೆಬ್ರಿಟಿಗಳಿದ್ದಾರೆ. ಪ್ರತಿದಿನ ಮೀಡಿಯಾದಲ್ಲಿ ಬಾಲಿವುಡ್ ನ ಅನೇಕ ಜನರ ಬ್ರೇಕ್‌ಅಪ್‌ಗಳು ಮತ್ತು ಪ್ಯಾಚ್‌ಅಪ್‌ಗಳ ಸುದ್ದಿಗಳು ಸಾಮಾನ್ಯವಾಗಿ ಕಂಡು ಬರುತ್ತೆ. ನಟ-ನಟಿಯರು ಸಂಬಂಧದಲ್ಲಿರುವುದರ ಜೊತೆಗೆ, ಅನೇಕ ನಿರ್ದೇಶಕರ ಹೆಸರುಗಳು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿವೆ. ಕೆಲವರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ, ಕೆಲವು ನಿರ್ದೇಶಕರು ತಮ್ಮ ಪ್ರೀತಿಯನ್ನು ಸಮಾಧಿ ಮಾಡಿದ್ದಾರೆ. ಅವರಲ್ಲಿ ಈ ಸ್ಟಾರ್ ನಿರ್ದೇಶಕ ಕೂಡ ಒಬ್ಬರು. 
 

25

ಹೌದು,  ಮದುವೆಯಾಗಿದ್ದರೂ ಸಹ, ನಾಯಕಿಯೊಬ್ಬರ ರ್ಪೀತಿಯಲ್ಲಿ ಬಿದ್ದ ಇವರು ಬಾಲಿವುಡ್ ನ ಸ್ಟಾರ್ ನ್ರಿದೇಶಕ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಾಕ್ಸ್ ಆಫಿಸ್ ಹಿಟ್ ಗಳನ್ನು ಸಹ ನೀಡಿದ್ದಾರೆ. ಇವರು ಬೇರಾರು ಅಲ್ಲ ರೋಹಿತ್ ಶೆಟ್ಟಿ (Rohit Shetty). ಹೌದು, ನಿರ್ದೇಶಕ ರೋಹಿತ್ ಶೆಟ್ಟಿ ಒಂದು ಕಾಲದಲ್ಲಿ ಪ್ರಾಚಿ ದೇಸಾಯಿ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಮತ್ತುಅಷ್ಟೇ ಯಾಕೆ ಇವರಿಬ್ಬರು ಲಿವ್ ಇನ್ ರಿಲೇಶನ್’ಶಿಪ್ ನಲ್ಲಿದ್ದರೂ ಎಂದು ಹೇಳಲಾಗುತ್ತದೆ.  
 

35

ರೋಹಿತ್ ಮತ್ತು ಪ್ರಾಚಿಯ ರೊಮ್ಯಾಂಟಿಕ್ ರಿಲೇಶನ್ ಶಿಪ್
ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶೆಟ್ಟಿ ಅವರು ಪ್ರಾಚಿ ದೇಸಾಯಿ ಜೊತೆ ಬೋಲ್ ಬಚ್ಚನ್ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅಜಯ್ ದೇವಗನ್ ಮತ್ತು ಆಸಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಹಿತ್ ಮತ್ತು ಪ್ರಾಚಿ ಪರಸ್ಪರ ಹತ್ತಿರವಾಗಿದ್ದರು ಮತ್ತು ಶೆಟ್ಟಿ ಜೈಪುರದಲ್ಲಿ ನಟಿಗಾಗಿ ರೊಮ್ಯಾಂಟಿಕ್ ಡಿನ್ನರ್ (Romantic Dinner) ಸಹ ಆಯೋಜಿಸಿದ್ದರು ಎಂದು ವರದಿ ಹೇಳಿದೆ.

45

ಪತ್ನಿಗೆ ಡಿವೋರ್ಸ್ ಕೊಡಲು ಸಿದ್ಧತೆ
ರೋಹಿತ್ ಮತ್ತು ಪ್ರಾಚಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಸಹ  ವರದಿ ಹೇಳುತ್ತದೆ. ವರದಿಯ ಪ್ರಕಾರ, ರೋಹಿತ್ ಶೆಟ್ಟಿ ಬ್ಯಾಂಕರ್ ಮಾಯಾ ಅವರನ್ನು 2005 ರಲ್ಲಿ ವಿವಾಹವಾದರು. ಮದುವೆಯಾಗಿದ್ದರೂ ರೋಹಿತ್ ಪ್ರಾಚಿ ಜೊತೆ ಸಂಬಂಧ ಹೊಂದಿದ್ದರು, ಮತ್ತು ಪ್ರಾಚಿ ಮತ್ತು ರೋಹಿತ್ ಪರಸ್ಪರ ಭೇಟಿಯಾಗಲು ಪ್ರಾರಂಭಿಸಿದಾಗ, ರೋಹಿತ್ ಪತ್ನಿ ಮಾಯಾ ಶೆಟ್ಟಿಗೆ ಅದರ ಬಗ್ಗೆ ತಿಳಿಯಿತು. ರೋಹಿತ್ ಮಾಯಾಗೆ ಡಿವೋರ್ಸ್ (ready to divorce wife) ಕೊಡಲು ಸಹ ನಿರ್ಧರಿಸಿದ್ದರು, ಕೊನೆಗೆ ರೋಹಿತ್ ತನ್ನ ಮಗನ ಕಾರಣದಿಂದಾಗಿ ಪ್ರಾಚಿಯಿಂದ ದೂರವಾದರು ಎನ್ನುತ್ತೆ ವರದಿ.

55

ಸೀರಿಯಲ್ ನಿಂದ ಸಿನಿಮಾದಲ್ಲಿ ಮಿಂಚಿದ ಪ್ರಾಚಿ
ಪ್ರಾಚಿ (Prachi Desai) ‘ಕಸಮ್ ಸೆ' ಸೀರಿಯಲ್ ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು, ಈ ಸೀರಿಯಲ್ ನಲ್ಲಿ ಅವರು 'ಬಾನಿ' ಎಂಬ ಪಾತ್ರವನ್ನು ನಿರ್ವಹಿಸಿದರು. ಈ ಸೀರಿಯಲ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಸ್ವಲ್ಪ ಸಮಯದ ನಂತರ, ಅವರು ಬಾಲಿವುಡ್ ಜಗತ್ತಿಗೆ ಪ್ರವೇಶಿಸಿದರು. ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಐ, ಮಿ ಔರ್ ಮೈ ಮತ್ತು ಅಜರ್ ನಂತಹ ಹಲವು ಸಿನಿಮಾಗಳಲ್ಲಿ ಪ್ರಾಚಿ ದೇಸಾಯಿ ನಟಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಬಾಲಿವುಡ್
ಸಂಬಂಧಗಳು

Latest Videos
Recommended Stories
Recommended image1
ವಿಜಯ್​ಗೆ 2018ರಲ್ಲಿ ಮೊದಲ ಬಾರಿ ಕಿಸ್​: ಆ ಶಾಕಿಂಗ್ ಅನುಭವ ನೆನಪಿಸಿಕೊಂಡ Rashmika Mandanna
Recommended image2
ಲವ್​ ಜಿಹಾದ್​ಗೆ ಸಿಲುಕಿ ಕ್ರಿಕೆಟಿಗನ ಮದುವೆಯಾದ ಬಾಲಿವುಡ್​ ಬ್ಯೂಟಿ ರೀನಾ? ದುರಂತದ ಕಥೆ ರಿವೀಲ್​!
Recommended image3
ಇನ್ನೂರು ಜನರ ಮುಂದೆ ಮೊದಲ ಕಿಸ್ ಮಾಡಿದ್ದ ರಶ್ಮಿಕಾ.. ಆ 'Kiss' ವೈರಲ್ ಆಗಿತ್ತು; ಈಗ ವಿಜಯ್ ಜೊತೆ ಮದುವೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved