- Home
- Entertainment
- Cine World
- ಉಪ ಮುಖ್ಯಮಂತ್ರಿ, ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದ ಇಂಟ್ರೆಸ್ಟಿಂಗ್ ಸ್ಟೋರಿ!
ಉಪ ಮುಖ್ಯಮಂತ್ರಿ, ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದ ಇಂಟ್ರೆಸ್ಟಿಂಗ್ ಸ್ಟೋರಿ!
ತೆಲುಗು ಸ್ಟಾರ್ ಪವನ್ ಕಲ್ಯಾಣ್ ಇದೀಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಪವನ್ ಕಲ್ಯಾಣ್ ಬದುಕೇ ರೋಚಕ. ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಪವನ್ ಕಲ್ಯಾಣ್ ಮಾತುಗಳು, ನಡೆ ಸಿನಿಮಾಗಿಂತ ಇಂಟ್ರೆಸ್ಟಿಂಗ್. ಇದರ ಜೊತೆಗೆ ಪವನ್ ಕಲ್ಯಾಣ್ ವೈವಾಹಿಕ ಜೀವನವೂ ಇದೀಗ ಭಾರಿ ಸರ್ಚ್ ಆಗುತ್ತಿದೆ.
ನಟ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಸ್ಟಾರ್. ಚಿತ್ರಗಳ ಖದರ್, ಪವನ್ ಪವರ್, ಅಭಿಮಾನಿಗಳ ಅಭಿಮಾನ ಎಲ್ಲವೂ ಸೂಪರ್. ಕಾರಣ ತೆರೆಯ ಹಿಂದೆಯೂ ಪವನ್ ಕಲ್ಯಾಣ್ ಮಾತುಗಳು ಖಡಕ್, ಭಾಷಣ ಕೇಳಿದರೆ ಮೈ ಜುಮ್ಮೆನಿಸುವುದು ಖಚಿತ.
ಜನಸೇನಾ ಪಕ್ಷ ಕಟ್ಟಿ ರಾಜಕೀಯ ಹೋರಾಟ ಆರಂಭಿಸಿದ ಪವನ್ ಇದೀಗ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಚಂದ್ರಬಾಬು ನಾಯ್ದು ಸಿಎಂ ಆದರೆ, ಪವನ್ ಕಲ್ಯಾಣ್ ಡಿಸಿಎಂ.
ಪವನ್ ಕಲ್ಯಾಣ್ ಡಿಸಿಎಂ ಆಗುತ್ತಿದ್ದಂತೆ ನಟ ಹಾಗೂ ರಾಜಕಾರಣಿ ಕುರಿತು ಹಲವು ಸರ್ಚ್ ಮಾಡುತ್ತಿದ್ದಾರೆ. ಈ ಪೈಕಿ ಪವನ್ ಕಲ್ಯಾಣ್ ವೈವಾಹಿಕ ಜೀವನ ಕೂಡ ಒಂದು.
ಪವನ್ ಸದ್ಯ ಮೂರನೇ ಪತ್ನಿ ಅನ್ನಾ ಲೆಝ್‌ನೆವಾ ಜೊತೆಗಿದ್ದಾರೆ.2011ರಲ್ಲಿ ಮೊದಲ ಭಾರಿಗೆ ಭೇಟಿಯಾದ ರಷ್ಯಾದ ಮಾಡೆಲ್‌ನ್ನು 2013ರಲ್ಲಿ ಮದುವೆಯಾಗಿದ್ದಾರೆ.
ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ. 1997ರಲ್ಲಿ ಪವನ್ ಕಲ್ಯಾಣ್ ಹಾಗೂ ನಂದಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 2008ರಲ್ಲಿ ಮೊದಲ ಪತ್ನಿಯಿಂದ ವಿಚ್ಚೇದ ಪಡೆದುಕೊಂಡಿದ್ದಾರೆ.
ನಂದಿನಿ ವಿಚ್ಚೇದನ ಬಳಿಕ ನಟಿ ರೇಣು ದೇಸಾಯಿ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಪವನ್ ಕಲ್ಯಾಣ್ 2009ರಲ್ಲಿ 2ನೇ ಮದುವೆಯಾದರು.
2ನೇ ಮದುವೆ ಹಾಗೂ ವೈವಾಹಿಕ ಜೀವನ 2012ಕ್ಕೆ ಅಂತ್ಯಗೊಂಡಿತು. 2012ರಲ್ಲಿ ರೇಣು ದೇಸಾಯಿಂದ ಪವನ್ ಕಲ್ಯಾಣ್ ವಿಚ್ಚೇದನ ಪಡೆದಿದ್ದಾರೆ.
2013ರಲ್ಲಿ ರಷ್ಯಾ ಮಾಡೆಲ್ ಅನ್ನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಪವನ್ ಕಲ್ಯಾಣ್ ತೆಲುಗು ಸ್ಟಾರ್ ನಟನಾಗಿ, ರಾಜಕಾರಣಿಯಾಗಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದಾರೆ.