ಸ್ಟೈಲ್‌ನಲ್ಲಿ ಅಮ್ಮನನ್ನು ಮೀರಿಸುವ ರವೀನಾ ಟಂಡನ್ ಪುತ್ರಿ ರಾಶಾ ಥಡಾನಿ
ಬಾಲಿವುಡ್‌ನಲ್ಲಿ ನಾಯಕಿ ಮಿಂಚಿದ್ದ ರವೀನಾ ಟಂಡನ್ ಅವರ ಮಗಳು ರಶಾ ಥಡಾನಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಮುಂಬೈನ ವಿವಿಧ ಸ್ಥಳಗಳಲ್ಲಿ ರಾಶಾ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ರಾಶಾ ಅವರ ಇತ್ತೀಚಿನ ಫೋಟೋಗಳು ಸಖತ್ ವೈರಲ್ ಆಗಿವೆ.

90ರ ಬಾಲಿವುಡ್‌ನ ಫೇಮಸ್ ನಾಯಕಿ ರವೀನಾ ಟಂಡನ್ ಅವರ ಮಗಳು ರಶಾ ಥಡಾನಿ ಇತ್ತೀಚಿನ ದಿನಗಳಲ್ಲಿ ಜನಮನದಲ್ಲಿದ್ದಾರೆ. ಅವರು ಆಗಾಗ್ಗೆ ಸ್ನೇಹಿತರೊಂದಿಗೆ ಸಮಯ ಕಳೆಯುವುದನ್ನು ಕಾಣಬಹುದು.
ರಾಶಾ ಥಡಾನಿ ಕೆಲವು ದಿನಗಳ ಹಿಂದೆ ರಾತ್ರಿ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು . ಈ ವೇಳೆ ಛಾಯಾಗ್ರಾಹಕರಿಗೆ ಪೋಸ್ ನೀಡಿರುವ ಅವರ ಫೋಟೋಗಳು ವೈರಲ್ ಆಗುತ್ತಿವೆ.
ಈ ಸಮಯದಲ್ಲಿ ರವೀನಾರ ಪುತ್ರಿ ರಾಶಾ ಆಫ್ ಶೋಲ್ಡರ್ ಟಾಪ್ ಮತ್ತು ಜೀನ್ಸ್ ಧರಿಸಿದ್ದರು. ಕೂದಲು ಕಟ್ಟದೆ ಹಾಗೇ ಫ್ರಿಯಾಗಿ ಬಿಟ್ಟು ತನ್ನ ಜೀನ್ಸ್ ಪಾಕೆಟ್‌ನಲ್ಲಿ ತನ್ನ ಕೈಗಳನ್ನು ಹಾಕಿ ರಾಶಾ ಪೋಸ್ ನೀಡಿರುವ ಫೋಟೋಗಳು ಮೆಚ್ಚುಗೆ ಗಳಿಸಿವೆ.
ಪ್ರಸ್ತುತ 19 ವರ್ಷ ವಯಸ್ಸಿನ ಮನಮೋಹಕವಾಗಿ ಲುಕ್ ಹೊಂದಿರುವ ರಾಶಾ ಥಡಾನಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ ಮತ್ತು ವಾಣಿಜ್ಯ ಜಾಹೀರಾತುಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.
ರಶಾ ಥಡಾನಿ ಕೂಡ ತನ್ನ ತಾಯಿ ರವೀನಾ ಟಂಡನ್ ಅವರಂತೆ ಬಾಲಿವುಡ್ ನಟಿಯಾಗಲು ಹಾತೊರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಮತ್ತು ಈಗಾಗಲೇ ನಾಯಕಿಯಾಗುವ ತಯಾರಿಯನ್ನೂ ಶುರು ಮಾಡಿದ್ದಾರೆ.
ವರದಿಗಳ ಪ್ರಕಾರ, ರಾಶಾ ಥಡಾನಿ ಬಾಲಿವುಡ್ ಸೂಪರ್‌ಸ್ಟಾರ್ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ಜೊತೆಯ ಚಿತ್ರದೊಂದಿಗೆ ಬಾಲಿವುಡ್‌ಗೆ ಕಾಲಿಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.