ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ರಶ್ಮಿಕಾ, ವಿಜಯ್ ದೇವರಕೊಂಡ?
ಮನರಂಜನಾ ಉದ್ಯಮದಿಂದ ಮದುವೆಯಾಗಲಿರುವ ಮುಂದಿನ ಜೋಡಿಗಳು ನಟರಾದ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಎಂದು ತೋರುತ್ತಿದೆ. ವದಂತಿಗಳ ಪ್ರಕಾರ, ಅವರು ಈ ವರ್ಷವೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನಲಾಗಿದೆ. ಈ ಜೋಡಿಯ ಮದುವೆಯ ಬಗ್ಗೆ ಊಹಾಪೋಹಗಳು ಸುತ್ತುತ್ತಿರುವಾಗ, ಈ ವದಂತಿಗಳಲ್ಲಿ ಏನು ಸತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಮಯ ಮಾತ್ರ ಹೇಳುತ್ತದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ಆನ್-ಸ್ಕ್ರೀನ್ (Onscreen) ಮಾತ್ರವಲ್ಲದೆ ಆಫ್-ಸ್ಕ್ರೀನ್‌ನಲ್ಲಿ ಸಹ ಸಿಜ್ಲಿಂಗ್ ಕೆಮಿಸ್ಟ್ರಿ ಹಂಚಿಕೊಳ್ಳುತ್ತಾರೆ. ಇಬ್ಬರು ಆಗಾಗ್ಗೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಡೇಟ್‌ಗಳಿಗೆ ಹೋಗುತ್ತಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಶೀಘ್ರದಲ್ಲೇ ತಮ್ಮ ರಿಲೆಷನ್‌ಶಿಪ್ (Relationship) ಸ್ಟೇಟಸ್ ಅನ್ನು 'ಡೇಟಿಂಗ್' (Dating) ನಿಂದ 'ಮ್ಯಾರೀಡ್'ಗೆ (Married) ಎಂದು ಬದಲಾಯಿಸುತ್ತಾರೆ ಎಂದು ಗಾಸಿಪ್ (Gossip) ಹರಿದಾಡುತ್ತಿವೆ.
ವದಂತಿಗಳನ್ನು ನಂಬುವುದಾದರೆ, ಈ ಜೋಡಿ ವರ್ಷದ ಕೊನೆಯಲ್ಲಿ ಮದುವೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಯಾವುದೇ ನಟರು ತಮ್ಮ ಸಂಬಂಧ ಅಥವಾ ಮದುವೆಯ ಊಹಾಪೋಹಗಳ ಬಗ್ಗೆ ಯಾವುದೇ ಅಧಿಕೃತ ಮಾತುಗಳನ್ನು ನೀಡಿಲ್ಲ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎರಡು ಸೂಪರ್‌ಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಡಿಯರ್ ಕಾಮ್ರೇಡ್ (Dear Comrade) ಮತ್ತು ಗೀತ ಗೋವಿಂದಂ (Geetha Govindam) . ಅಂದಿನಿಂದ ಈ ಜೋಡಿಯ ಅಭಿಮಾನಿಗಳು ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ಫಿದಾ ಆಗಿದ್ದಾರೆ.
ಅಂದಿನಿಂದ ಅವರು ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂಬ ವರದಿಗಳ ನಡುವೆ, ಅವರ ಮದುವೆಯ ಬಗ್ಗೆ ಊಹಾಪೋಹಗಳು ಸಹ ಸುತ್ತು ಹಾಕಲು ಪ್ರಾರಂಭಿಸಿವೆ, ಈ ವರ್ಷದ ಅಂತ್ಯದ ವೇಳೆಗೆ ಅವರು ಮದುವೆಯಾಗಬಹುದು ಎಂದು ಸೂಚಿಸುತ್ತದೆ.
ಸದ್ಯ ವಿಜಯ್ ದೇವರಕೊಂಡ ಮುಂಬೈನಲ್ಲಿ (Mumba) ಲಿಗರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಟಿ ಅನನ್ಯಾ ಪಾಂಡೆ (Ananya Pandey) ಕೂಡ ನಟಿಸಿರುವ ಪುರಿ ಜಗನ್ನಾಥ್ (Puri Jagannath) ಅವರ ಈ ಚಿತ್ರವು ತ್ವರಿತ ಗತಿಯಲ್ಲಿ ಸಾಗುತ್ತಿದೆ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೂಡ ತಮ್ಮ ಹೊಸ ವರ್ಷವನ್ನು (New Year) ಗೋವಾದಲ್ಲಿ (Goa) ಒಟ್ಟಿಗೆ ಕಳೆದಿದ್ದರು. ಅವರೊಂದಿಗೆ ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಸೇರಿಕೊಂಡರು. ರಶ್ಮಿಕಾ ವಿಜಯ್ ಅವರ ತಾಯಿ ಮಾಧವಿಯೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದಾರೆ
ಇತ್ತೀಚೆಗಷ್ಟೇ ಇಂಡಿಯಾ ಟುಡೇಗೆ (India Today) ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಬಗ್ಗೆ ಹೇಳಿದದ್ರು. ನಟಿ ತಾನು ಮದುವೆಗೆ ತುಂಬಾ ಚಿಕ್ಕವಳು. ಆದರೆ 'ಮದುವೆಯಾಗುವವರು ನಿಮಗೆ ಕಂಫರ್ಟಬಲ್ ಆಗುವಂತೆ ಮಾಡುವವರಾಗಿರಬೇಕು,' ಎಂದೂ ಹೇಳಿದರು.