'ವಾಟರ್ ಬೇಬಿ'ಯಾದ ರಶ್ಮಿಕಾ; ಮಾಲ್ಡೀವ್ಸ್‌ನಲ್ಲಿ 'ಪುಷ್ಪ' ನಟಿ ಮಸ್ತ್ ಎಂಜಾಯ್
ಮಾಲ್ಡೀವ್ಸ್‌ನಿಂದ ರಶ್ಮಿಕಾ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪೂಲ್ ಒಳಗಿಂದ ಬೀಚ್‌ನ ಸೌಂದರ್ಯ ಎಂಜಾಯ್ ಮಾಡುತ್ತಿರುವ ರಶ್ಮಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ರಶ್ಮಿಕಾ ಮಂದಣ್ಣ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಹಿಂದಿಯಲ್ಲಿ ಗುಡ್‌ಬೈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರಶ್ಮಿಕಾ ಮಾಲ್ಡೀವ್ಸ್ ಫ್ಲೈಟ್ ಹತ್ತಿದ್ದರು. ರಶ್ಮಿಕಾ ಮೊದಲ ಹಿಂದಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಸಲ್ಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಶ್ಮಿಕಾ ಸದ್ಯ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.
ಮಾಲ್ಡೀವ್ಸ್‌ನಿಂದ ರಶ್ಮಿಕಾ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪೂಲ್ ಒಳಗಿಂದ ಬೀಚ್‌ನ ಸೌಂದರ್ಯ ಎಂಜಾಯ್ ಮಾಡುತ್ತಿರುವ ರಶ್ಮಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಈ ಫೋಟೋವನ್ನು ಶೇರ್ ಮಾಡಿ ರಶ್ಮಿಕಾ 'ವಾಟರ್ ಬೇಬಿ' ಎಂದು ಕ್ಯಪ್ಷನ್ ನೀಡಿದ್ದಾರೆ. ರಶ್ಮಿಕಾ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದು ಫೋಟೋದಲ್ಲಿ ರಶ್ಮಿಕಾ ಡೀಪ್ ನೆಟ್ ಗೌನ್ ಧರಿಸಿದ್ದಾರೆ. ಪೂಲ್ ಪಕ್ಕದಲ್ಲಿ ಕುಳಿತು ಕ್ಯಾರಮಾಗೆ ಪೋಸ್ ನೀಡಿದ್ದಾರೆ. ಇನ್ನು ಒಂದಿಷ್ಟು ಬೀಚ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್‌ಗೆ ವಿಜಯ್ ದೇವರಕೊಂಡ ಹೋಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ದೇವರಕೊಂಡ ಯಾವುದೇ ಫೋಟೋ ಶೇರ್ ಮಾಡಿಲ್ಲ. ಇತ್ತೀಚಿಗಷ್ಟೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಏರ್ಪೋರ್ಟ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಲ್ಡೀವ್ಸ್ ಹೋಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.
ವಿಜಯ್ ದೇವರಕೊಂಡ ಏರ್ಪೋರ್ಟ್‌ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಕೆಲವೇ ಕ್ಷಣಗಳ ಅಂತರದಲ್ಲಿ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ರೂಮರ್ ಜೋಡಿ ಮಾಲ್ಡೀವ್ಸ್‌ನಲ್ಲಿರುವುದು ಖಚಿತ ಎನ್ನುತ್ತಿವೆ ಮೂಲಗಳು.
ರಶ್ಮಿಕಾ ಬಳಿ ಕೈ ತುಂಬಾ ಸಿನಿಮಾಗಳಿವೆ. ಹಿಂದಿಯಲ್ಲಿ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಮುದಿಸಿದ್ದು ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಪುಷ್ಪ-2 ಹಾಗೂ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.
ಇತ್ತ ವಿಜಯ್ ದೇವರಕೊಂಡ ಇತ್ತೀಚಿಗಷ್ಟೆ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗುವ ಮೊದಲೇ ರಶ್ಮಿಕಾ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದಾರೆ ಎನ್ನಲಾಗಿದೆ.