ಫ್ಯಾಶನ್ ವೀಕ್‌ನಲ್ಲಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ರಾಂಪ್ ವಾಕ್!
ದಕ್ಷಿಣದ ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚರ್ ವೀಕ್‌ನಲ್ಲಿ (Indian Couture Week) ರ‍್ಯಾಂಪ್ ವಾಕ್ ಮಾಡಿದ್ದಾರೆ. ರಶ್ಮಿಕಾ ಈ ಕೊಚ್ಚರ್ ವೀಕ್‌ನ 15 ನೇ ಆವೃತ್ತಿಯ ಭಾಗವಾದರು ಮತ್ತು ಇಲ್ಲಿ ಫ್ಯಾಶನ್ ಡಿಸೈನರ್ ವರುಣ್ ಬಹ್ಲ್ (Varun Bahl) ಅವರ ಶೋಸ್ಟಾಪರ್ ಆಗಿ ಭಾಗವಹಿಸಿದರು. ಇದೇ ಮೊದಲ ಬಾರಿಗೆ ರಶ್ಮಿಕಾ ದೆಹಲಿಯಲ್ಲಿ ಕೊಚ್ಚರ್ ವೀಕ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದರು. ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರಶ್ಮಿಕಾ ಅವರೇ ತಮ್ಮ ಕೆಲವು ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಸುಂದರವಾದ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ಫೋಟೋಗಳಲ್ಲಿ ರಶ್ಮಿಕಾ ಕೆಂಪು ಬಣ್ಣದ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಆಕೆಯ ಕ್ಯೂಟ್ ಲುಕ್‌ಗೆ ಲಕ್ಷಾಂತರ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ.
ರ‍್ಯಾಂಪ್‌ನಲ್ಲಿ, ರಶ್ಮಿಕಾ ಮಂದಣ್ಣ ಕೆಂಪು ಹೂವಿನ ಕಸೂತಿ ಲೆಹೆಂಗಾದಲ್ಲಿ ಮಿಂಚಿದ್ದಾರೆ. ತನ್ನ ಲುಕ್ ಪೂರ್ಣಗೊಳಿಸಲು, ಅವಳು ಬೆಳ್ಳಿಯ ಬಣ್ಣದ ಭಾರೀ ಚೋಕರ್ ಅನ್ನು ಧರಿಸಿದ್ದರು. ನಟಿಯ ಸಿಂಪಲ್ ಸ್ಟೈಲ್ ಅನ್ನು ಜನರು ಇಷ್ಟಪಟ್ಟಿದ್ದಾರೆ
ರಶ್ಮಿಕಾ ರ‍್ಯಾಂಪ್ ಮೇಲೆ ತಮ್ಮದೇ ಆದ ಸ್ಟೈಲ್‌ನಲ್ಲಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಶೋ ನಂತರ, ರಶ್ಮಿಕಾ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ಲುಕ್‌ನದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
'ನಾನು ದೆಹಲಿಯಲ್ಲಿ ಮೊದಲ ಬಾರಿಗೆ ಮತ್ತು ಫ್ಯಾಷನ್ ವೀಕ್‌ನಲ್ಲಿ ಮೊದಲ ಬಾರಿಗೆ ರಾಂಪ್ ನಡೆಯಲು ತುಂಬಾ ಉತ್ಸುಕನಾಗಿದ್ದೆ. ನಾನಂತೂ ಪ್ರೋ ಮಾಡೆಲ್‌ಗಳಂತೆ ನಡೆಯಲು ಪ್ರಯತ್ನಿಸಿದೆ ಆದರೆ ಅದು ಫಲ ನೀಡಲಿಲ್ಲ. ನನ್ನ ನಗುಮುಖದ ವ್ಯಕ್ತಿತ್ವ ತಾನಾಗಿ ಹೊರಹೊಮ್ಮಿತು. ಎಲ್ಲವೂ ಚೆನ್ನಾಗಿ ನಡೆದಿದ್ದಕ್ಕೆ ನನಗೆ ಸಂತೋಷವಾಗಿದೆ. ಎಂದು ಪೋಟೋಗಳ ಜೊತೆ ನಟಿ ಬರೆದಿದ್ದಾರೆ.
ಈ ಪೋಸ್ಟ್‌ನಲ್ಲಿ ರಶ್ಮಿಕಾ ಡಿಸೈನರ್ ವರುಣ್ ಬಹ್ಲ್‌ಗೆ ಧನ್ಯವಾದ ಹೇಳುತ್ತಾ 'ಈ ರ‍್ಯಾಂಪ್ ವಾಕ್ ನನ್ನ ಪಾಲಿಗೆ ಯಾವಾಗಲೂ ವಿಶೇಷವಾಗಿರುತ್ತದೆ. ನಾನು ನಿಮ್ಮ ಕೆಲಸ ಮತ್ತು ನಿಮ್ಮ ವೈಬ್ ಅನ್ನು ಪ್ರೀತಿಸುತ್ತೇನೆ' ಎಂದು ಬರೆದಿದ್ದಾರೆ.
ರಶ್ಮಿಕಾ ಅವರ ಈ ಲುಕ್ ,ಸ್ಟೈಲಿಂಗ್ ಅನ್ನು ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮೋಹಿತ್ ರೈ ಮಾಡಿದ್ದಾರೆ. ಅದೇ ಸಮಯದಲ್ಲಿ, ಅವರ ಆಭರಣ ವಿನ್ಯಾಸವನ್ನು ಆಯೇಷಾ ಅಮೀನ್ ನಿಗಮ್ ಮಾಡಿದರು. ಇಬ್ಬರಿಗೂ ರಶ್ಮಿಕಾ ಧನ್ಯವಾದ ಹೇಳಿದ್ದಾರೆ
ಶೀಘ್ರದಲ್ಲೇ ಕಿರಿಕ್‌ಪಾರ್ಟಿ ನಟಿ 'ಗುಡ್ ಬೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಎದುರು ನಟಿಸಲಿದ್ದಾರೆ. ಇದರ ನಂತರ, ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ 'ಮಿಷನ್ ಮಜ್ನು' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.