ತುಂಡುಡುಗೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ; ಉರ್ಫಿಯೇ ಸ್ಫೂರ್ತಿ ಎಂದು ಕಾಲೆಳೆದ ನೆಟ್ಟಿಗರು
ರಶ್ಮಿಕಾ ಧರಿಸಿದ್ದ ಡ್ರೆಸ್ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಉರ್ಫಿ ಜಾವೇದ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು. ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ರಶ್ಮಿಕಾ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಟ್ರೋಲ್‌ಗಳಿಗೆ ಅಹಾರವಾಗಿದ್ದಾರೆ.
ಅತೀ ಹೆಚ್ಚು ಟ್ರೋಲ್‌ಗಳಿಗೆ ಆಹರವಾಗಿದ್ದರವಲ್ಲಿ ರಶ್ಮಿಕಾ ಕೂಡ ಒಬ್ಬರು. ಇದೀಗ ಮತ್ತೆ ತುಂಡುಡುಗೆ ಧರಿಸಿ ಟ್ರೋಲ್ ಆಗಿದ್ದಾರೆ. ಬಾಲಿವುಡ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು.
ಚಿಕ್ಕ ಬಟ್ಟೆ ಧರಿಸಿದ್ದ ರಶ್ಮಿಕಾ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಕೆಲವರು ರಶ್ಮಿಕಾ ಲುಕ್ ಹೊಗಳಿದ್ರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ರಶ್ಮಿಕಾ ಬಟ್ಟೆ ನೋಡಿ ನೆಟ್ಟಿಗರು ಉರ್ಫಿ ಜಾವೇದ್ ಸ್ಫೂರ್ತಿನಾ ಎಂದು ಕೇಳುತ್ತಿದ್ದಾರೆ. ಉರ್ಫಿ ಬಳಿ ಕ್ಲಾಸ್ ತೆಗೆದುಕೊಂಡಿಲ್ಲ, ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಸ್ವಲ್ಪ ಸ್ವಲ್ಪವಾಗಿ ಉರ್ಫಿನಾ ಫಾಲೋ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಎಷ್ಟೇ ಟ್ರೋಲ್ ಆದರೂ ರಶ್ಮಿಕಾ ಹೆಚ್ಚು ತಲೆಕೆಡಿಸಿಕೊಂಡಿಲ್ಲ, ಸಿನಿಮಾ ಅವಕಾಶಗಳು ಕಡಿಮೆ ಆಗಿಲ್ಲ. ಸ್ಯಾಂಡಲ್ ವುಡ್ ನಿಂದ ಟಾಲಿವುಡ್, ಕಾಲಿವುಡ್ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಲೇ ಇದ್ದಾರೆ. ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
ರಶ್ಮಿಕಾ ಸದ್ಯ ಬಾಲಿವುಡ್ ನಲ್ಲಿ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಶ್ಮಿಕಾ ಕೊನೆಯದಾಗಿ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತೆಲುಗಿನಲ್ಲಿ ಪುಷ್ಪ-2 ನಲ್ಲಿ ಬ್ಯುಸಿಯಾಗಿದ್ದಾರೆ.