ಮಮ್ಮುಟ್ಟಿ ಮಗ ದುಲ್ಖರ್‌ಗೆ ರಶ್ಮಿಕಾ ಜೋಡಿ
- ಮಾಲಿವುಡ್ ನಟ ದುಲ್ಖರ್ ಜೊತೆ ನಟಿಸಲಿದ್ದಾರೆ ರಶ್ಮಿಕಾ
- ಮಮ್ಮುಟ್ಟಿ ಮಗನಿಗೆ ಮಡಿಕೇರಿ ಹುಡುಗಿ ಜೋಡಿ
ಮೃಣಾಲ್ ಠಾಕೂರ್ ಮತ್ತು ಮಾಲಿವುಡ್ ನಟ ಮಮ್ಮುಟ್ಟಿ ಅವರ ಪುತ್ರ ದುಲ್ಕರ್ ಸಲ್ಮಾನ್(Dulquer Salmaan) ಕೆಲವು ತಿಂಗಳ ಹಿಂದೆ ಹನು ರಾಘವಪುಡಿಯವರ ಹೊಸ ರೊಮ್ಯಾಂಟಿಕ್ ಸಿನಿಮಾ ಚಿತ್ರೀಕರಣವನ್ನು ಆರಂಭಿಸಿದ್ದಾರೆ.
ಮೊದಲ ಕೆಲವು ಶೆಡ್ಯೂಲ್‌ಗಳನ್ನು ಹೈದರಾಬಾದ್(Hyderabad) ಮತ್ತು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ಭಾಗಗಳ ಚಿತ್ರೀಕರಣಕ್ಕಾಗಿ ತಂಡವು ಶೀಘ್ರದಲ್ಲೇ ಕೆಲಸ ಮಾಡಲಿದೆ.
ಇದೆಲ್ಲದರ ಮಧ್ಯೆ ಈ ಬಹುನಿರೀಕ್ಷಿತ ತೆಲುಗು ಚಿತ್ರದ ಬಗ್ಗೆ ಒಂದು ರೋಮಾಂಚಕಾರಿ ಅಪ್ಡೇಟ್ ಒಂದು ಹೊರಬಿದ್ದಿದೆ. ನಟಿ ರಶ್ಮಿಕಾ ಮಂದಣ್ಣ(Rashmika Mandanna) ಕೂಡ ಸ್ವಪ್ನಾ ಸಿನಿಮಾ ಮತ್ತು ವೈಜಯಂತಿ ಮೂವೀಸ್‌ನ ಈ ಸಿನಿಮಾದ ತಾರಾಗಣಕ್ಕೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಚಿತ್ರದಲ್ಲಿ ರಶ್ಮಿಕಾ ಅವರ ಪಾತ್ರ ಬಹಳ ನಿರ್ಣಾಯಕವಾಗಿದೆ. ಅವರು ಪ್ರಾಜೆಕ್ಟ್ ಭಾಗವಾಗಲು ಒಪ್ಪಿಕೊಂಡಾಗ ನಿರ್ಮಾಪಕರು ತುಂಬಾ ಸಂತೋಷಪಟ್ಟರು ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ ಕ್ಯಾಮೆರಾಗೆ ಪೋಸ್ ಕೊಡಲು ಹೇಳಿಕೊಟ್ಟ ಸಿದ್ದಾರ್ಥ್ ಮಲ್ಹೋತ್ರಾ?
ಇದು ವಿಸ್ತೃತ ಅತಿಥಿ ಪಾತ್ರ. ಈ ನಡುವೆ ನಿರ್ಮಾಪಕರು ಅಂತರರಾಷ್ಟ್ರೀಯ ಶೆಡ್ಯೂಲ್‌ಗಳನ್ನೂ ಯೋಜಿಸಿದ್ದಾರೆ. ರಷ್ಯಾವನ್ನು ಶೂಟಿಂಗ್ ಸ್ಥಳವಾಗಿ ನೋಡುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು 365 ದಿನ ಸಾಕಾಗಲ್ಲ ಎಂದ ರಶ್ಮಿಕಾ ಮಂದಣ್ಣ!
ಆದರೆ ದಿನಾಂಕಗಳು ಮತ್ತು ಲಾಜಿಸ್ಟಿಕ್ಸ್ ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ. ವರದಿಯ ಪ್ರಕಾರ ಈ ಸಿನಿಮಾಗಾಗಿ ರಶ್ಮಿಕಾ ಅವರನ್ನು ಮೊದಲೇ ಸಂಪರ್ಕಿಸಲಾಗಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಅದು ಆಗಿರಲಿಲ್ಲ.
ಚಿತ್ರದಲ್ಲಿ ದುಲ್ಕರ್ ಲೆಫ್ಟಿನೆಂಟ್ ಆಗಿ ನಟಿಸುತ್ತಿದ್ದರೆ, ಮೃಣಾಲ್ ಪಾತ್ರವನ್ನು ಸೀತಾ ಎಂದು ಕರೆಯಲಾಗುತ್ತದೆ. ಅವರ ಫಸ್ಟ್ ಲುಕ್ ಅವರ ಜನ್ಮದಿನದಂದು ಅನಾವರಣಗೊಳಿಸಲಾಯಿತು.
ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ದುಲ್ಕರ್ ಸುಂದರ ಸರ್ಪೈಸ್‌ಗೆ ಧನ್ಯವಾದಗಳು. ಹನು ರಾಘವಪುಡಿಯೊಂದಿಗೆ ನನ್ನ ಮುಂದಿನ ತೆಲುಗು(Telugu) ಪ್ರಾಜೆಕ್ಟ್ ಪೋಸ್ಟರ್ ಇಲ್ಲಿದೆ. ಭಾರತದಾದ್ಯಂತ ಇದನ್ನು ಚಿತ್ರೀಕರಿಸುವುದು ಉತ್ತಮ ಕಲಿಕೆಯ ಅನುಭವವಾಗಿದೆ ಎಂದಿದ್ದರು. ಹನು ಆಗಸ್ಟ್ ನಲ್ಲಿ ಮೃಣಾಲ್ ಲುಕ್ ಅನ್ನು ಚಿತ್ರದಿಂದ ಹಂಚಿಕೊಂಡಿದ್ದರು.