Ranbir Alia Wedding- ಚಪ್ಪಲಿ ಕದ್ದ ನಾದಿನಿಯರ ಬೇಡಿಕೆಗೆ ನಟ ಶಾಕ್ !
ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಏಪ್ರಿಲ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪಾಲಿ ಹಿಲ್‌ನಲ್ಲಿರುವ ವಾಸ್ತು ಅಪಾರ್ಟ್‌ಮೆಂಟ್‌ನಲ್ಲಿ ಪಂಜಾಬಿ ಪದ್ಧತಿಯಂತೆ ಈ ಜೋಡಿ ವಿವಾಹವಾದರು. ಮದುವೆಯ ನಂತರ ಆಲಿಯಾ-ರಣಬೀರ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.ಮದುವೆಯಲ್ಲಿ ರಣಬೀರ್ ಕಪೂರ್ ಉಡುಗೊರೆಯಾಗಿ ಪಡೆದದ್ದು ಜನರಿಗೆ ತಿಳಿದಿಲ್ಲ. ಅದೇ ಸಮಯದಲ್ಲಿ, ಮದುವೆ ಸಮಾರಂಭದಲ್ಲಿ ಚಪ್ಪಲಿ ಕದ್ದ ರಣಬೀರ್ ಅವರ ನಾದಿನಿಯರು ಇಟ್ಟ ಬೇಡಿಕೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ರಣಬೀರ್-ಆಲಿಯಾ ಮದುವೆಗೆ ಮುಂಚೆಯೇ ಏಪ್ರಿಲ್ 14ರಂದು ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೂ ಮುನ್ನವೇ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡ ಆಲಿಯಾ ರಣಬೀರ್ ಮದುವೆಯ ನಂತರ ಮಾಧ್ಯಮಗಳ ಮುಂದೆ ಬಂದು ಪೋಸ್ ಕೊಟ್ಟರು.
ನಿಶ್ಚಿತಾರ್ಥದಲ್ಲಿ, ಸೋನಿ ರಜ್ದನ್ ತಮ್ಮ ಅಳಿಯನಿಗೆ ಬೆಲೆಬಾಳುವ ವಾಚ್ ಅನ್ನು ಉಡುಗೊರೆಯಾಗಿ ನೀಡಿದರು. ರಣಬೀರ್ ಕಪೂರ್ ಅತ್ತೆ ಕಡೆಯಿಂದ ಪಡೆದಿರುವ ವಾಚ್ ಸುಮಾರು 2.50 ಕೋಟಿ ರೂ ಎಂದು ವರದಿಯಾಗಿದೆ.
ಮದುವೆಯ ಸಂದರ್ಭದಲ್ಲಿ ವರನ ಬೂಟುಗಳನ್ನು ಕದಿಯುವ ಶಾಸ್ತದಲ್ಲಿ, ರಣಬೀರ್ ಕಪೂರ್ ಅವರಿಗೆ ನಾದಿನಿಯರ ಇಟ್ಟ ಡಿಮ್ಯಾಂಡ್ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.ಭಟ್ ಕುಟುಂಬದ ಹುಡುಗಿಯರು ಶೂ ಕೊಡಲು ರಣಬೀರ್ ಕಪೂರ್ ಬಳಿ 11.5 ಕೋಟಿ ರೂಗಳ ಬೇಡಿಕೆ ಇಟ್ಟಿದ್ದಾರೆ.
ಇಷ್ಟು ದೊಡ್ಡ ಮೊತ್ತವನ್ನು ಕೇಳಿ ಅಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದರು. ಆದರೆ, ನಂತರ ರಣಬೀರ್ ಕಪೂರ್ ನಾದಿನಿಯರಿಗೆ 1 ಲಕ್ಷ ರೂಪಾಯಿಯ ಲಕೋಟೆಯನ್ನು ಉಡುಗೊರೆಯಾಗಿ ನೀಡಿ ಶೂಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ.
ರಣಬೀರ್-ಆಲಿಯಾ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಉಡುಗೊರೆಗಳನ್ನು ವಿತರಿಸಲಾಯಿತು. ಈ ಸಮಯದಲ್ಲಿ, ಎಲ್ಲಾ ಅತಿಥಿಗಳಿಗೆ ಆಲಿಯಾ ಭಟ್ ಆಯ್ಕೆ ಮಾಡಿದ ಕಾಶ್ಮೀರಿ ಶಾಲುಗಳನ್ನು ನೀಡಲಾಯಿತು.
ರಣಬೀರ್-ಆಲಿಯಾ ಅವರ ಮದುವೆಯನ್ನು 4 ಪಂಡಿತರು ಮಾಡಿದ್ದಾರೆ. ಈ ಸಮಯದಲ್ಲಿ, ದಂಪತಿಗಳು 4 ಸುತ್ತುಗಳನ್ನು ತೆಗೆದುಕೊಂಡರು ಮತ್ತು ಅದಕ್ಕೂ ಮೊದಲು ಪುರೋಹಿತರು ಗಾಯತ್ರಿ ಮಂತ್ರವನ್ನು ಪಠಿಸಿದರು.