Angry Girlfriend: ಜಗಳವಾದಾಗ ಆವಾರ್ಡ್‌ಗಳನ್ನು ಮುರಿಯುತ್ತಿದ್ದ ರಣಬೀರ್ ಗರ್ಲ್‌ಫ್ರೆಂಡ್
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಪ್ರಸ್ತುತ ಆಲಿಯಾ ಭಟ್ (Alia Bhatt) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಅವರು ದೀಪಿಕಾ ಪಡುಕೋಣೆ (Deepika Padukone), ಕತ್ರಿನಾ ಕೈಫ್ (Katrina Kaif) ಮತ್ತು ಇನ್ನೂ ಕೆಲವು ಸುಂದರಿಯರ ಜೊತೆ ಸಂಬಂಧವನ್ನು ಹೊಂದಿದ್ದರು. ಹಿಂದೊಮ್ಮೆ ಸಂದರ್ಶನದಲ್ಲಿ ರಣಬೀರ್ ತಮ್ಮ ತನ್ನ ಮಾಜಿ ಗೆಳತಿಯ ವಿನಾಶಕಾರಿ ಸ್ವಭಾವದ ಬಗ್ಗೆ ಬಹಿರಂಗ ಪಡಿಸಿದ್ದರು. ಅವರ ನಡುವೆ ಜಗಳವಾದಾಗ ನಟನ ಆವಾರ್ಡ್‌ಗಳನ್ನು ನಾಶ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಅದರೆ ಅದು ಯಾರಿರಬಹುದು ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್ ಆಥವಾ ಬೇರೆ ಯಾರಾದರು?
ಸ್ವತಃ ಆಲಿಯಾ ಭಟ್ ತಂದೆ ಮಹೇಶ್ ಭಟ್ ರಣಬೀರ್ ಕಪೂರ್‌ಗೆ ಬಾಲಿವುಡ್‌ನ 'ಲೇಡೀಸ್ ಮ್ಯಾನ್' ಎಂದು ಹೆಸರಿಸಿದ್ದಾರೆ. ವಾಸ್ತವವಾಗಿ, ಕಾಫಿ ವಿತ್ ಕರಣ್ ಅವರ ಪ್ರಶ್ನೋತ್ತರ ಅವಧಿಯಲ್ಲಿ, ಮಹೇಶ್ ಅವರು ರಣಬೀರ್ ಅವರ ಜೀವನಚರಿತ್ರೆಗೆ ಸಂಭವನೀಯ ಶೀರ್ಷಿಕೆಯಾಗಿ 'ಲೇಡೀಸ್ ಮ್ಯಾನ್' ಅನ್ನು ಸೂಚಿಸಿದ್ದರು.
ಆಲಿಯಾ ಭಟ್ ಅವರ ಕಸಿನ್ ಆಗಿರುವ ಇಮ್ರಾನ್ ಹಶ್ಮಿ ಅವರು ಕಾಫಿ ವಿತ್ ಕರಣ್ ಸಮಯದಲ್ಲಿ 'ಲೇಡೀಸ್ ಮ್ಯಾನ್ ಸ್ಟೀರಿಯೊಟೈಪ್ ಆಡುವುದನ್ನು ನಿಲ್ಲಿಸಿ ಎಂದು ರಣಬೀರ್‌ಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಹೇಶ್ ಅವರು ತಮ್ಮ ಮಗಳು ಅಲಿಯಾಳೊಂದಿಗೆ ಡೇಟಿಂಗ್ ಮಾಡಲು ಯಾರೂ ಯೋಚಿಸಬಾರದು ನಾನು ಅವಳನ್ನು ಲಾಕ್ ಮಾಡುತ್ತೇನೆ ಎಂದು ಎಂದು ಎಚ್ಚರಿಸಿದರು.
ರಣಬೀರ್ ಅವರ ಪ್ರೇಮ ಜೀವನವು ಯಾವಾಗಲೂ ಸುದ್ದಿಯಾಗಿದೆ. ನಟ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ತಮ್ಮ ಹಿಂದಿನ ಆಫೇರ್‌ಗಳು, ರೋಮ್ಯಾನ್ಸ್ ಮತ್ತು ಹಾರ್ಟ್ ಬ್ರೇಕ್ ಬಗ್ಗೆ ಯಾವಾಗಲೂ ಓಪನ್ ಆಗಿದ್ದಾರೆ.
2017 ರಲ್ಲಿ ಸಂದರ್ಶನವೊಂದರಲ್ಲಿ, ರಣಬೀರ್ ತನ್ನ ಮಾಜಿ ಗೆಳತಿಯರಲ್ಲಿ ಒಬ್ಬರು ಪ್ರತಿ ಬಾರಿ ಜಗಳವಾದಾಗ ಅವರ ಆವಾರ್ಡ್‌ಗಳನ್ನು ಮುರಿಯುತ್ತಿದ್ದರು ಎಂದು ಬಹಿರಂಗಪಡಿಸಿದ್ದರು. ನಟ ರಣಬೀರ್ ಕಪೂರ್ ಹೆಸರುಗಳನ್ನು ತೆಗೆದುಕೊಳ್ಳದೆ ತನ್ನ ಎಕ್ಸ್ ಗರ್ಲ್ ಫ್ರೆಂಡ್ ಅವರು ತಮ್ಮ ಪ್ರಶಸ್ತಿಗಳನ್ನು ನಾಶಪಡಿಸುತ್ತಿದ್ದರು ಎಂದು ಹೇಳಿದ್ದರು.
'ನನ್ನ ಒಬ್ಬಳು ಗರ್ಲ್‌ಫ್ರೆಂಡ್‌ಇದ್ದಳು. ನಾವು ಜಗಳವಾಡಿದಾಗಲೆಲ್ಲಾ ಅವಳು ನನ್ನ ಪ್ರಶಸ್ತಿ ಮುರಿಯುತ್ತಿದ್ದಳು. ಅರೆ, ಅದು ಫಿಲ್ಮ್‌ಫೇರ್ ಆವಾರ್ಡ್ ಮುಟ್ಟಬೇಡ ಎಂದು ನಾನು ಹೋಗುತ್ತಿದ್ದೆ' ಎಂದು ರಣಬೀರ್ ಕಪೂರ್ ತನ್ನ ಎಕ್ಸ್ ಲವರ್‌ನ ವಿನಾಶಕಾರಿ ಸ್ವಭಾವದ ಬಗ್ಗೆ ಮಾತನಾಡಿದ್ದರು.
ರಣಬೀರ್ ಮತ್ತು ಆಲಿಯಾ ಇತ್ತೀಚೆಗೆ ವನ್ಯಜೀವಿ ಸಫಾರಿಯನ್ನು ಎಂಜಾಯ್ ಮಾಡಿದ್ದರು. ಅವರು ಹೊಸ ವರ್ಷದ ಸಮಯದಲ್ಲಿ ಕೀನ್ಯಾಗೆ ತೆರಳಿದ್ದರು. ಆಲಿಯಾ ತಮ್ಮ ಪ್ರವಾಸದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.