Ranbir Kapoor Stardom: ರಣಬೀರ್‌ಗೆ ಸ್ಟಾರ್ ವರ್ತನೆಯೇ ಇಲ್ಲ ಎಂದ ವಾಣಿ ಕಪೂರ್
- Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್‌ಗೆ ಸ್ಟಾರ್ ವರ್ತನೆಯೇ ಇಲ್ವಂತೆ
- ಹೇಳಿದ್ದು ಬಾಲಿವುಡ್ ಯುವನಟಿ ವಾಣಿ ಕಪೂರ್
ರಣಬೀರ್ ಕಪೂರ್(Ranbir Kapooor) ಬಾಲಿವುಡ್‌ನ(Bollywood) ಟ್ಯಾಲೆಂಟೆಡ್ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಹಳಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟ ರಣಬೀರ್ ಕಪೂರ್ ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ಪಟ್ಟಕ್ಕೇರಿದವರು. ಬಾಲಿವುಡ್‌ನ ಕ್ಯೂಟ್ ಗರ್ಲ್ ಆಲಿಯಾ ಭಟ್(Alia Bhatt) ಅವರನ್ನು ವಿವಾಹವಾಗಲಿರೋ ರಣಬೀರ್ ಕಪೂರ್ ತಮ್ಮ ಬಹುನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರದ(Brahmastra) ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಶಂಶೇರಾದಲ್ಲಿ ಅವರ ಸಹ ನಟಿ ವಾಣಿ ಕಪೂರ್(Vaani Kapoor) ರಣಬೀರ್ ಬಗ್ಗೆ ಮಾತನಾಡಿದ್ದಾರೆ. ರಣಬೀರ್ ಜೊತೆ ಕೆಲಸ ಮಾಡಿದ ಅನುಭವವನ್ನು ನಟಿ ಹಂಚಿಕೊಂಡಿದ್ದಾರೆ.
ಶಂಶೇರಾದಲ್ಲಿ ರಣಬೀರ್ ಜೊತೆ ನಟಿಸಲಿರುವ ವಾಣಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರಾಮಾಣಿಕವಾಗಿ ನನಗೆ ರಣಬೀರ್ ಕುರಿತು ಅಪಾರ ಗೌರವವಿದೆ. ಅವರ ಪರ್ಫಾರ್ಮೆನ್ಸ್ ಹಾಗೂ ಅವರ ಸಿನಿಮಾಗಳನ್ನು ನೋಡುವುದೆಂದರೆ ನನಗೆ ತುಂಬಾ ಇಷ್ಟ. ಅವರಿಗೆ ಈಗೋ ಇಲ್ಲ. ಸ್ಟಾರ್ ತರ ವರ್ತಿಸುವುದಿಲ್ಲ. ತುಂಬಾ ತುಂಬಾ ನಾರ್ಮಲ್ ಆಗಿ ಡೌನ್‌ಟು ಅರ್ತ್ ವ್ಯಕ್ತಿಯಾಗಿರುತ್ತಾರೆ ಎಂದಿದ್ದಾರೆ ವಾಣಿ ಕಪೂರ್.
ಫ್ರೆಂಡ್ ಮದುವೆ ಸಂಭ್ರಮದಲ್ಲಿ ಮಿಂಚಿದ ನಟಿ
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಶಂಶೇರಾ ಸಿನಿಮಾ ನಿರ್ಮಿಸಲಾಗಿದೆ. ಕರಣ್ ಮಲ್ಹೋತ್ರಾ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರವು ಮಾರ್ಚ್ 18, 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಶಂಶೇರಾ 19 ನೇ ಶತಮಾನದಲ್ಲಿ ನಡೆದ ಡಕಾಯಿಟ್ ಕುರಿತ ಸಿನಿಮಾ ಎಂದು ಹೇಳಲಾಗುತ್ತದೆ. ಬ್ರಿಟಿಷರಿಂದ ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಡಕಾಯಿಟ್ ಬುಡಕಟ್ಟು ಜನಾಂಗದ ಕಥೆಯನ್ನು ಇದು ವಿವರಿಸುತ್ತದೆ. ಈ ಚಿತ್ರದಲ್ಲಿ ವಾಣಿ ಮತ್ತು ರಣಬೀರ್ ಜೊತೆಗೆ ನಟ ಸಂಜಯ್ ದತ್ ಕೂಡ ನಟಿಸಲಿದ್ದಾರೆ.
ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಮಾತನಾಡಿದ ವಾಣಿ, ಸಿನಿಮಾವು ವಿಭಿನ್ನ ರೀತಿಯ ಅವಧಿಯಲ್ಲಿದೆ. ಇದು ಬೆಲ್ ಬಾಟಮ್ ಅವಧಿಯಂತಲ್ಲ, ಆದರೆ ಇದು ಸಂಪೂರ್ಣವಾಗಿ ವಿಭಿನ್ನ ಪ್ರಪಂಚವಾಗಿದೆ. ನಾನು ಈ ಹಿಂದೆ ಅಂತಹ ಸಿನಿಮಾ ಮಾಡಿಲ್ಲ. ರಣಬೀರ್ ಕೂಡ ಮಾಡಿಲ್ಲ. ಈ ಹಿಂದೆ ಈ ರೀತಿಯದ್ದನ್ನು ಮಾಡಿದ್ದೇನೆ ಎಂದು ಯೋಚಿಸಬೇಡಿ. ಅಂತಹ ಯೋಜನೆಯಲ್ಲಿ ಕೆಲಸ ಮಾಡಿರುವುದು ಖುಷಿಯಾಗುತ್ತಿದೆ ಎಂದಿದ್ದಾರೆ ನಟಿ.
ಚಂಡೀಗಢ ಕರೇ ಆಶಿಕಿಯಲ್ಲಿ ಟ್ರಾನ್ಸ್ ಮಹಿಳೆಯಾಗಿ ನಟಿಸಿದ ವಾಣಿ ತಮ್ಮ ಬೋಲ್ಡ್ ನಿರ್ಧಾರಕ್ಕಾಗಿ ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ನಾನು ಸ್ಕ್ರಿಪ್ಟ್ ಓದುವಾಗ, ನಾನು ಪ್ರೇಕ್ಷಕರಾಗಿ ಈ ರೀತಿಯ ಚಲನಚಿತ್ರವನ್ನು ನೋಡಬೇಕೆಂದು ಬಯಸಿದ್ದೆ. ಬಹಳ ಮುಖ್ಯವಾದ ವಿಷಯದ ಬಗ್ಗೆ ಮಾತನಾಡುವ ಈ ರೀತಿಯ ಸಿನಿಮಾದ ಭಾಗವಾಗುವುದೇ ಒಂದು ಅವಕಾಶ ಎಂದಿದ್ದಾರೆ.
ರಣಬೀರ್ ಆಲಿಯಾ ಅಭಿನಯದ ಬ್ರಹ್ಮಾಸ್ತ್ರ:
ಇತ್ತೀಚೆಗೆ ಬಾಲಿವುಡ್‌ನ ಹಾಟ್ & ಕ್ಯೂಟ್ ಜೋಡಿ ತಮ್ಮ ಮುಂಬರು ಸಿನಿಮಾ ಬ್ರಹ್ಮಾಸ್ತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಆಲಿಯಾ ಹಾಗೂ ರಣಬೀರ್ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಎಂಬುದು ವಿಶೇಷ. ಬಹುನಿರೀಕ್ಷಿತ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದ್ದು ಇದರ ಜೊತೆ ಜೊತೆಗೇ ಆಲಿಯಾ ಹಾಗೂ ರಣಬೀರ್ ಬೇರೆ ಬಹಳಷ್ಟು ಪ್ರಾಜೆಕ್ಟ್‌ಗಳನ್ನು ಮಾಡಿದ್ದಾರೆ.
ಈ ಜೋಡಿ ಮದುವೆ ಬಗ್ಗೆಯೂ ಈಗಾಗಲೇ ಸುದ್ದಿ ಹಬ್ಬಿದ್ದು ಬಾಲಿವುಡ್ ಸೆಲೆಬ್ರಿಟಿ ಮದುವೆ 2022ರಲ್ಲಿ ನಡೆಯಲಿದೆ ಎನ್ನಲಾಗಿದೆ. ರಣಬೀರ್ ಕಪೂರ್ ಮನೆಯ ರಿನೋವೇಷನ್ ಕೆಲಸ ನಡೆಯುತ್ತಿದ್ದು ಈ ಮನೆಯ ಕೆಲಸ ಮುಗಿದಾಗ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.