ಶಂಶೇರಾ ಸಿನಿಮಾದ ಪಾತ್ರಕ್ಕೆ Ranbir Kapoor ಚಾರ್ಜ್ ಮಾಡಿದ್ದೇಷ್ಟು ಗೊತ್ತಾ?
ರಣಬೀರ್ ಕಪೂರ್ (Ranbir Kapoor), ಸಂಜಯ್ ದತ್ (Sanjay Dutt) ಮತ್ತು ವಾಣಿ ಕಪೂರ್ (Vaani Kapoor) ಅಭಿನಯದ ಮುಂಬರುವ ಚಿತ್ರ 'ಶಂಶೇರಾ' (Shamshera) ಟೀಸರ್ ಬುಧವಾರ ಬಿಡುಗಡೆಯಾಗಿದೆ. ಅದರ ಅತ್ಯುತ್ತಮ ಆಕ್ಷನ್ ಮತ್ತು ಗ್ರಾಫಿಕ್ಸ್ ಪ್ರಸ್ತುತಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರಶಂಸಿಸಲಾಗುತ್ತಿದೆ. ಜನರು ಚಿತ್ರವನ್ನು ಬ್ಲಾಕ್ ಬಸ್ಟರ್ ಎಂದು ಕರೆಯುತ್ತಿದ್ದಾರೆ ಮತ್ತು ಅದನ್ನು ತೆರೆಯ ಮೇಲೆ ನೋಡಲು ಉತ್ಸುಕರಾಗಿದ್ದಾರೆ. ಅಂದಹಾಗೆ, ಇದರ ನಟರು ಭಾರೀ ಮೊತ್ತವನ್ನು ವಸೂಲಿ ಮಾಡಿದ್ದಾರೆ. ಚಿತ್ರದ ಮೂರು ಪ್ರಮುಖ ಪಾತ್ರಗಳು ಪಡೆದ ಶುಲ್ಕ ಎಷ್ಟು ಗೊತ್ತಾ?
ಚಿತ್ರದಲ್ಲಿ ರಣಬೀರ್ ಕಪೂರ್ ಶಂಶೇರಾ ಎಂಬ ಡಕಾಯಿತ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿ ಅವರ ಸ್ಟ್ರಾಂಗ್ ಸ್ಟೈಲ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ವರದಿಗಳನ್ನು ನಂಬುವುದಾದರೆ, ರಣಬೀರ್ ಕಪೂರ್ ಚಿತ್ರಕ್ಕಾಗಿ ಸುಮಾರು 20 ಕೋಟಿ ರೂ ಸಂಭಾವನೆ ಪಡೆದಿದ್ದಾರಂತೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರವೆಂದರೆ ಸಂಜಯ್ ದತ್ ನಿರ್ವಹಿಸಿದ ದರೋಗಾ ಶುದ್ಧ್ ಸಿಂಗ್. ಟೀಸರ್ ನಲ್ಲಿ ಖಾಕಿ ಡ್ರೆಸ್ ಹಾಕಿಕೊಂಡು ಜನ ಸಾಮಾನ್ಯರ ಮೇಲೆ ಹರಿಹಾಯ್ದಿದ್ದಾರೆ. ಈ ಪಾತ್ರಕ್ಕಾಗಿ ಸಂಜಯ್ ದತ್ ಸುಮಾರು 8 ಕೋಟಿ ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರದಲ್ಲಿ ರೋನಿತ್ ರಾಯ್ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಅವರ ಪಾತ್ರ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಚಿತ್ರಕ್ಕಾಗಿ ಅವರು ಸುಮಾರು 4 ಕೋಟಿ ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆಯುಷ್ಮಾನ್ ಖುರಾನಾ ಅಭಿನಯದ 'ಚಂಡೀಗಢ್ ಕರೇ ಆಶಿಕಿ' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ವಾಣಿ ಕಪೂರ್ 'ಶಂಶೇರಾ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಶುಲ್ಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಸಾಮಾನ್ಯವಾಗಿ ವಾಣಿ ಚಿತ್ರವೊಂದಕ್ಕೆ ಒಂದರಿಂದ ಎರಡು ಕೋಟಿ ರೂಪಾಯಿ ವಸೂಲಿ ಮಾಡುತ್ತಾರೆ ಎನ್ನಲಾಗಿದೆ.
'
ಶಂಶೇರಾದಲ್ಲಿ ಅಶುತೋಷ್ ರಾಣಾ, ಸೌರಭ್ ಶುಕ್ಲಾ, ತ್ರಿಧಾ ಚೌಧರಿ ಅವರಿಗೂ ಪ್ರಮುಖ ಪಾತ್ರಗಳನ್ನು ಹೇಳಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಅವರ ಪಾತ್ರಗಳು ಮತ್ತು ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಶಂಶೇರಾ' ಚಿತ್ರವನ್ನು ಕರಣ್ ಮಲ್ಹೋತ್ರಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ಯಾಗ್‌ಲೈನ್ 'ಕರಮ್ ಸೇ ಡಕಾಯಿತ್, ಧರಮ್ ಸೇ ಆಜಾದ್'. ಚಿತ್ರ ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ಶೂಟಿಂಗ್ 2018 ರಲ್ಲಿ ಪ್ರಾರಂಭವಾಯಿತು ಮತ್ತು 20 ಡಿಸೆಂಬರ್ 2019 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಕೋವಿಡ್ 19
ಕಾರಣದಿಂದ 25 ಜೂನ್ 2021 ಕ್ಕೆ ಪೋಸ್ಟ್‌ಪೋನ್ ಮಾಡಲಾಗಿತ್ತು. ಆದರೆ ಮತ್ತೆ ಎರಡನೇ ಅಲೆಯ ಕಾರಣದಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಮುಂದೂಡಲಾಯಿತು.