ರಣಬೀರ್ ಕಪೂರ್ ತೋಳಲ್ಲಿ ಬೇಬಿ ಶಿವ; 'ವಾವ್.. ಕ್ಯೂಟ್' ಎಂದ ಫ್ಯಾನ್ಸ್
ಬ್ರಹ್ಮಾಸ್ತ್ರ ಸಿನಿಮಾದ ಬೇಬಿ ಶಿವ, ರಣಬೀರ್ ಕಪೂರ್ ಅವ ತೋಳಲ್ಲಿ ಆಟವಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಕ್ಯೂಟ್ ಫೋಟೋ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ಬ್ರಹ್ಮಾಸ್ತ್ರ ಬಾಯ್ಕಟ್ ಸಮಸ್ಯೆಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದೆ. ಅಲಿಯಾ ಭಟ್, ರಣಬೀರ್ ಕಪೂರ್ ಮತ್ತು ಇಡೀ ತಂಡ ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿತ್ತು. ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡಿದ್ದರು. ಅಂದಹಾಗೆ ಅಲಿಯಾ ಭಟ್ ಗರ್ಭಿಣಿ ಆದರೂ ಸಿನಿಮಾ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದರು. ಚಿತ್ರತಂಡ ಶ್ರಮಕ್ಕೆ ಅಭಿಮಾನಿಗಳಿಂದ ತಕ್ಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ 300 ಕೋಟಿ ಬಾಚಿಕೊಂಡಿದೆ. ಇದು ಬಾಲಿವುಡ‌್ ಗೆ ಹೊಸ ಚೈತನ್ಯ ತುಂಬಿದೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಸಿನಿಮಾದ ಸಕ್ಸಸ್ ಹೋದ ಜೀವ ಬಂದಂತೆ ಆಗಿದೆ. ಅಂದಹಾಗೆ ಬ್ರಹ್ಮಸ್ತ್ರ ಸಿನಿಮಾದಲ್ಲಿ ಅನೇಕರು ನಟಿಸಿದ್ದಾರೆ. ಸದ್ಯ ಅಭಿಮಾನಿಗಳ ಹೃದಯ ಗೆದ್ದಿರುವುದು ಬೇಬಿ ಶಿವ.
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬೇಬಿ ಶಿವ ಆಗಿ ನಿವಾನ್ ಕಾಣಿಸಿಕೊಂಡಿದ್ದಾರೆ. ಪುಟ್ಟ ಪೋರ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಸದ್ಯ ಬೇಬಿ ಶಿವ, ರಣಬೀರ್ ಕಪೂರ್ ಅವರ ತೋಳಲ್ಲಿ ಆಟವಾಡುತ್ತಿದೆ. ರಣಬೀರ್ ಮತ್ತು ಬೇಬಿ ಶಿವ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುದ್ದು ಮುದ್ದಾಗಿರುವ ಬೇಬಿ ಶಿವ ರಣಬೀರ್ ತೋಳಲ್ಲಿ ತುಂಬಾ ಕ್ಯೂಟ್ ಆಗಿ ಆಟವಾಡುತ್ತಿದೆ. ಅಭಿಮಾನಿಗಳು ಈ ಮುದ್ದಾದ ಫೋಟೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಸೋ ಕ್ಯೂಟ್ ಎಂದು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.
ರಣಬೀರ್ ಕಪೂರ್ ಫ್ಯಾನ್ ಕ್ಲಬ್ ಈ ವಿಡಿಯೋವನ್ನು ಶೇರ್ ಮಾಡಿ, 'ರಣಬೀರ್ ಕಪೂರ್, ಮೌನಿ ರಾಯ್ ಮತ್ತು ಅಯಾನ್ ಮುಖರ್ಜಿ ಅವರೊಂದಿಗೆ ಬ್ರಹ್ಮಾಸ್ತ್ರದಲ್ಲಿ ಬೇಬಿ ಶಿವ ಪಾತ್ರದಲ್ಲಿ ಬೇಬಿ ನಿವಾನ್' ಎಂದು ಬರೆದು ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ತಂದೆಯಾಗುತ್ತಿರುವ ಸಂಭ್ರಮದಲ್ಲಿರುವ ರಣಬೀರ್ ಕಪೂರ್ ಬೇಬಿ ನಿವಾನ್ ಜೊತೆ ಆಟವಾಡುತ್ತಿರುವ ಫೋಟೋವನ್ನು ಅಲಿಯಾ ಭಟ್ ಗೆ ಟ್ಯಾಗ್ ಮಾಡಿ, ನೋಡಿ ಇಲ್ಲಿ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ ಇವರಲ್ಲಿ ಯಾರು ಕ್ಯೂಟ್ ಎಂದು ನಿರ್ಧರಿಸಲು ಇನ್ನು ಸಾಧ್ಯವಾಗಿಲ್ಲ ಎಂದಿದ್ದಾರೆ.
ಈ ಚಿತ್ರದಲ್ಲಿ ಅಲಿಯಾ ಭಟ್, ರಣಬೀರ್ ಜೊತೆಗೆ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಿರುವುದು ವಿಶೇಷ. ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ.