Ranbir-Alia ಮದುವೆಯಾಯಿತು ಈಗ ರಿಸೆಪ್ಷನ್ ಇದೆಯೋ ಇಲ್ವೋ ?
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Kapoor Alia Bhatt) ಸಪ್ತಪದಿ ತುಳಿಯುವ ಮೂಲಕ ಇಷ್ಟು ದಿನಗಳ ವರೆಗೆ ಸುತ್ತ ಸುತ್ತುತ್ತಿದ್ದ ಅವರ ಮದುವೆ ವರದಿಗಳು ಹಾಗೂ ರೂಮರ್‌ಗಳಿಗೆ ಅಂತೂ ಕೊನೆ ಹಾಡಿದ್ದಾರೆ. ಆದರೆ ಈಗ ಅವರ ಮದುವೆಯ ರಿಸೆಪ್ಷನ್‌ಗೆ ಸಂಬಂಧಿಸಿದ ಹೊಸ ವರದಿಗಳು ಶುರುವಾಗಿದೆ. ಈಗ ಈ ಜೋಡಿಯ ಮದುವೆ ರಿಸೆಪ್ಷನ್ ತಾಜ್ ಮಹಲ್ ಪ್ಯಾಲೇಸ್ ಅಥವಾ ಚೆಂಬೂರ್ ಇರುವ ಆರ್‌ಕೆ ಹೌಸ್‌ನಲ್ಲಿ ತಮ್ಮ ಅದ್ಧೂರಿಯಾಗಿ ಏರ್ಪಡಿಸುತ್ತಾರೆ ಎಂಬ ವದಂತಿಗಳ ಬರುತ್ತಿದೆ. ಅದರ ಜೊತೆಗೆ ಆರತಕ್ಷತೆ ನಡೆಸದೇ ಸಹ ಇರಬಹುದು ಎಂದು ತಾಜಾ ವರದಿಗಳು ಹೇಳಿವೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯು ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ವಾಸ್ತು ಅಪಾರ್ಟ್‌ಮೆಂಟ್‌ನಲ್ಲಿರುವ ರಣಬೀರ್ ನಿವಾಸದಲ್ಲಿ ನಡೆಯುತ್ತಿದ್ದು, ಈಗ ಈ ಜೋಡಿಯ ಆರತಕ್ಷತೆಯ ಬಗ್ಗೆ ತಾಜಾ ವರದಿಗಳು ಸುತ್ತುತ್ತಿವೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಂತೆಯೇ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸಹ ಇಂಡಸ್ಟ್ರಿಯವರಿಗಾಗಿ ತಮ್ಮ ಸ್ನೇಹಿತರಿಗಾಗಿ ಗ್ರ್ಯಾಂಡ್ ರಿಸೆಪ್ಷನ್ ಪಾರ್ಟಿಯನ್ನು ಆಯೋಜಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮದುವೆಯ ಆರತಕ್ಷತೆಯನ್ನು ಮುಂಬೈನಲ್ಲಿ ಆಯೋಜಿಸುವ ಆಲೋಚನೆಯನ್ನು ಕೈಬಿಟ್ಟಿದ್ದಾರೆ. ಮದುವೆಯ ನೃತ್ಯ ಸಂಯೋಜಕ ರಾಜೇಂದ್ರ ಸಿಂಗ್ ಅವರು ದಂಪತಿ ವಿವಾಹದ ಬಳಿಕ ಆರತಕ್ಷತೆಯ ಬಗ್ಗೆ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ. 'ಆರತಕ್ಷತೆಯೇ ಇಲ್ಲ, ನೆಡೆಯುವುದಿಲ್ಲ' ಎಂದು ಅವರು ಹೇಳಿದರು.
ಏಪ್ರಿಲ್ 15 ರಂದು ಆರತಕ್ಷತೆ ನಡೆಯಲಿದೆ ಎಂದು ಹಲವಾರು ವರದಿಗಳು ಬಂದ ನಂತರ ಈ ವರದಿ ಬಂದಿದೆ. ಆರತಕ್ಷತೆ ದಕ್ಷಿಣ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ನಡೆಯಲಿದೆ ಎಂದು ಒಂದು ವರದಿ ಹೇಳಿದರೆ, ಇನ್ನೊಂದು ಚೆಂಬೂರ್‌ನ ಆರ್‌ಕೆ ಹೌಸ್‌ನಲ್ಲಿ ನಡೆಯಲಿದೆ ಎಂದು ಹೇಳಿಕೊಂಡಿದೆ. ಆದರೆ, ಆರತಕ್ಷತೆ ನಡೆಯಲಿದೆಯೇ ಅಥವಾ ಇಲ್ಲವೇ ಮತ್ತು ಹಾಗಿದ್ದಲ್ಲಿ, ರಿಸ್ಪೆಷನ್‌ಗೆ ಸ್ಥಳ ಯಾವುದು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮೆಹೆಂದಿ ಸಮಾರಂಭಕ್ಕೆ ಡ್ಯಾನ್ಸ್ ನಂಬರ್‌ಗಳನ್ನು ಸಿದ್ಧಪಡಿಸಿದವರು ನೃತ್ಯ ನಿರ್ದೇಶಕ ರಾಜೇಂದ್ರ ಸಿಂಗ್ ಅವರೇ. ನೀತು ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ 'ಮಾಸ್ಟರ್‌ಜಿ' ಜೊತೆಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.
ಮದುವೆಯ ನೃತ್ಯ ಸಂಯೋಜಕರು ಆಲಿಯಾ ಭಟ್ ಅವರ ಇತ್ತೀಚಿನ 'ಧೋಲಿಡಾ' ಮತ್ತು ರಣಬೀರ್ ಕಪೂರ್ ಅವರ ಸೂಪರ್ ಹಿಟ್ ವೆಡ್ಡಿಂಗ್ ಹಾಡು 'ಕ್ಯೂಟಿ ಪೈ' ಸೇರಿದಂತೆ ಹಲವಾರು ಹಾಡುಗಳನ್ನು ಸಿದ್ಧಪಡಿಸಿದ್ದಾರೆ.
'ತೇನು ಲೇಕೆ', ಕರಿಷ್ಮಾ ಕಪೂರ್ ಅವರ ಜುಬೈದಾ ಚಲನಚಿತ್ರದಿಂದ 'ಮೆಹೆಂದಿ ಹೈ ರಚನೆ ವಾಲಿ' ಮತ್ತು ಇನ್ನೂ ಅನೇಕ ಹಾಡುಗಳಿಗೆ ಕುಟುಂಬದ ಸದಸ್ಯರು ತಮ್ಮ ನೃತ್ಯಗಳನ್ನು ಪ್ರದರ್ಶಿಸಿದರು . ರಾಜೇಂದ್ರ ಸಿಂಗ್ ಕಪೂರ್ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ಎಲ್ಲಾ ಮದುವೆಗಳಿಗೆ ಕುಟುಂಬದ ನೃತ್ಯ ಸಂಯೋಜಕರಾಗಿದ್ದ ಅವರು ದಶಕಗಳಿಂದ ಅವರೊಂದಿಗೆ ಸಂಬಂಧ ಹೊಂದಿದ್ದಾರೆ.