Ranbir Kapoor - Alia Bhatt ಒಟ್ಟು ನೆಟ್‌ವರ್ತ್ ಕೇಳಿದರೆ ತಲೆತಿರುಗುತ್ತೆ!
ಬಾಲಿವುಡ್‌ನ ಮೋಸ್ಟ್ ಫೇಮಸ್ ಜೋಡಿ ರಣಬೀರ್ ಕಪೂರ್(Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ದಿನಗಳಲ್ಲಂತೂ ಎಲ್ಲಿ ನೋಡಿದರೂ ಈ ಜೋಡಿಗೆ ಸಂಬಂಧಿಸಿದ ಸುದ್ದಿಯೇ ಹರಿದಾಡುತ್ತಿದೆ. ಇವರ ಮದುವೆಗೆ ಸಂಬಂಧಿಸಿದಂತೆ ಪ್ರತಿದಿನ ಗಳಿಗೊಂದು ಸುದ್ದಿಗಳು ವರದಿಯಾಗುತ್ತಿವೆ. ಇದರ ನಟುವೆ ಈ ಜೋಡಿಯ ನೆಟ್‌ವರ್ತ್ ಬಗ್ಗೆ ವರದಿಯಾಗಿದೆ. ಇಲ್ಲಿದೆ ಆಲಿಯಾ ರಣಬೀರ್ ಅವರ ಒಟ್ಟು ನಿವ್ವಳ ಮೌಲ್ಯದ ಅಂದಾಜು ವಿವರ.
ಈ ವಾರದ ಅಂತ್ಯದ ವೇಳೆಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹವಾಗಲಿದ್ದಾರೆ ಎಂಬ ವರದಿಗಳು ತುಂಬಿ ಹೋಗಿದೆ. ಮದುವೆಯ ಸಿದ್ಧತೆಗಳು ಭರದಿಂದ ಪ್ರಾರಂಭವಾಗುತ್ತಿದ್ದಂತೆ, ಆರ್‌ಕೆ ಹೌಸ್ ಮತ್ತು ರಣಬೀರ್ ಅವರ ನಿವಾಸವು ದೀಪಗಳಿಂದ ಅಲಂಕರಿಸಲ್ಪಟ್ಟಿದೆ. ದಂಪತಿಗಳ ಅಭಿಮಾನಿಗಳಲ್ಲಿ ಅವರ ಮದುವೆಯ ಬಗ್ಗೆ ಪ್ರತಿಯೊಂದು ವಿವರವನ್ನು ತಿಳಿದುಕೊಳ್ಳುವ ಕಾತುರವೂ 10 ಪಟ್ಟು ಹೆಚ್ಚಾಗಿದೆ.
ಅವರ ವಿವಾಹದ ವದಂತಿಗಳು ಪ್ರಬಲವಾಗಿರುವುದರಿಂದ, ಅವರ ಜೀವನಶೈಲಿ, ನಿವ್ವಳ ಮೌಲ್ಯಗಳು ಮತ್ತು ಹೆಚ್ಚಿನವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಭಿಮಾನಿಗಳು ಇನ್ನೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ರಣಬೀರ್ ಕಪೂರ್ ಅವರ ನಿವ್ವಳ ಮೌಲ್ಯ ಸುಮಾರು 330 ಕೋಟಿ ಎಂದು ಅಂದಾಜಿಸಲಾಗಿದೆ. ವೇಕ್ ಅಪ್ ಸಿದ್, ರಾಜನೀತಿ, ರಾಕೆಟ್ ಸಿಂಗ್, ರಾಕ್‌ಸ್ಟಾರ್, ಯೇ ಜವಾನಿ ಹೈ ದೀವಾನಿ, ಬರ್ಫಿ, ತಮಾಶಾ, ಸಂಜು ಮತ್ತು ಇನ್ನೂ ಅನೇಕ ಚಲನಚಿತ್ರಗಳಿಗೆ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸುವ ಮೂಲಕ ನಟ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಅಂತಹ ಯಶಸ್ವಿ ಚಿತ್ರಗಳನ್ನು ಮಾಡಿದ ನಂತರ, ರಣಬೀರ್ ಕಪೂರ್ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ನಟ ಪ್ರತಿ ಯೋಜನೆಗೆ 50 ಕೋಟಿ ರೂ. ಚಾರ್ಜ್ ಮಾಡುತ್ತಾರೆ ವರದಿಯಾಗಿದೆ.
Image: Getty Images
ಇದಲ್ಲದೆ, ರಣಬೀರ್ ಅವರು ಮಾಡುವ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಜಾಹೀರಾತುಗಳ ಮೂಲಕ ದೊಡ್ಡ ಮೊತ್ತದ ಚೆಕ್‌ಗಳನ್ನು ಸಹ ಪಡೆಯುತ್ತಾರೆ. ಅವರು ಲಾಭದಾಯಕ ಹೂಡಿಕೆಗಳನ್ನು ಮಾಡಿದ್ದಾರೆ ಮತ್ತು ಅದು ಅವರ ನಿವ್ವಳ ಮೌಲ್ಯಕ್ಕೆ ಸೇರಿಸುತ್ತದೆ.
Image: Getty Images
ಅವರ ಪತಿ ರಣಬೀರ್ ಕಪೂರ್‌ಗೆ ಹೋಲಿಸಿದರೆ, ಆಲಿಯಾ ಭಟ್ ಅವರ ನಿವ್ವಳ ಮೌಲ್ಯವು ರಣಬೀರ್‌ನ ಅರ್ಧದಷ್ಟು ಎಂದು ವರದಿಯಾಗಿದೆ. 29 ವರ್ಷದ ನಟಿ 2012 ರ 'ಸ್ಟೂಡೆಂಟ್ ಆಫ್ ದಿ ಇಯರ್' ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಪ್ರಸ್ತುತ ರೂ 150 ಕೋಟಿಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ವರದಿಗಳನ್ನು ನಂಬುವುದಾದರೆ, ಆಲಿಯಾ ಭಟ್ ಪ್ರತಿ ಚಿತ್ರಕ್ಕೆ ಸುಮಾರು 5 ರಿಂದ 8 ಕೋಟಿ ರೂ ಸಂಭಾವನೆ ಪಡೆದರೆ. ಅವರು ಮಾಡುವ ಜಾಹೀರಾತುಗಳು ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಗೆ ಸಂಬಂಧಿಸಿದಂತೆ, 1 ಕೋಟಿಯಿಂದ 2 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ ಎಂದು ವರದಿಯಾಗಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಒಟ್ಟು ನೆಟ್‌ವರ್ತ್ ಕೇಳಿದರೆ ಸಾಮಾನ್ಯರು ಶಾಕ್ ಆಗುವುದು ಗ್ಯಾರಂಟಿ. ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿರುವ , ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ವೈಯಕ್ತಿಕ ನಿವ್ವಳ ಮೌಲ್ಯದ ಅಂಕಿಅಂಶಗಳ ಪ್ರಕಾರ, ದಂಪತಿಗಳ ಒಟ್ಟು ನಿವ್ವಳ ಮೌಲ್ಯವು ಸುಮಾರು 500 ಕೋಟಿ ಎಂದು ವರದಿಯಾಗಿದೆ.