- Home
- Entertainment
- Cine World
- ಕಿಯಾರಾ ಕೈ ಹಿಡಿದು ಪ್ಲಾಫ್ ಆದ ರಾಮ್ ಚರಣ್! ಈಗ ₹3,200 ಕೋಟಿ ಬಾಚಿದ ನಾಯಕಿಗೆ ಗಾಳ ಹಾಕಿದ ಮೆಗಾ ಪವರ್‌ಸ್ಟಾರ್!
ಕಿಯಾರಾ ಕೈ ಹಿಡಿದು ಪ್ಲಾಫ್ ಆದ ರಾಮ್ ಚರಣ್! ಈಗ ₹3,200 ಕೋಟಿ ಬಾಚಿದ ನಾಯಕಿಗೆ ಗಾಳ ಹಾಕಿದ ಮೆಗಾ ಪವರ್‌ಸ್ಟಾರ್!
ಮೆಗಾ ಪವರ್‌ಸ್ಟಾರ್ ರಾಮ್ ಚರಣ್ 'ಪೆದ್ದಿ' ಸಿನಿಮಾದ ನಂತರ ನಿರ್ದೇಶಕ ಸುಕುಮಾರ್ ಜೊತೆ ಮತ್ತೊಂದು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. RC17 ಎಂದು ತಾತ್ಕಾಲಿಕವಾಗಿ ಹೆಸರಿಡಲಾದ ಈ ಚಿತ್ರದಲ್ಲಿ 3200 ಕೋಟಿ ಗಳಿಕೆ ಕಂಡ ಚಿತ್ರದ ನಾಯಕಿ ರಾಮ್ ಚರಣ್‌ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

'RC17' ಚಿತ್ರಕ್ಕೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರನ್ನು ಮೊದಲು ಪರಿಗಣಿಸಲಾಗಿತ್ತು. ಬಹಳ ದಿನಗಳ ಹಿಂದೆಯೇ ಅವರನ್ನು ಫೈನಲ್ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ರಾಮ್ ಚರಣ್ ಮತ್ತು ಕಿಯಾರಾ ಕಾಂಬಿನೇಷನ್‌ನಲ್ಲಿ ಈಗಾಗಲೇ 'ವಿನಯ ವಿಧೇಯ ರಾಮ' ಮತ್ತು 'ಗೇಮ್ ಚೇಂಜರ್' ಎಂಬ ಎರಡು ಚಿತ್ರಗಳು ಬಂದಿವೆ. \
ಆದರೆ, ಈ ಎರಡೂ ಚಿತ್ರಗಳು ದೊಡ್ಡ ಡಿಸಾಸ್ಟರ್ ಆಗಿದ್ದವು. ಹೀಗಿರುವಾಗ ಕಿಯಾರಾ ಜೊತೆ ರಾಮ್ ಚರಣ್ ಮತ್ತೊಂದು ಸಿನಿಮಾ ಎನ್ನುವ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ ಈಗ ಕಿಯಾರಾ ಬದಲು ಬೇರೆ ನಾಯಕಿಯನ್ನು ಪರಿಗಣಿಸಲಾಗುತ್ತಿದೆ ಎಂಬ ಹೊಸ ಅಪ್‌ಡೇಟ್ ಬಂದಿದೆ.
'RC17' ಚಿತ್ರದಲ್ಲಿ ರಾಮ್ ಚರಣ್ ಜೊತೆ 3200 ಕೋಟಿ ರೂಪಾಯಿ ಗಳಿಸಿದ ಚಿತ್ರದ ನಾಯಕಿ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆ ನಾಯಕಿಯೇ 'ದುರಂಧರ್' ಖ್ಯಾತಿಯ ಸಾರಾ ಅರ್ಜುನ್. ಇವರು 'ದುರಂಧರ್' ಮತ್ತು 'ದುರಂಧರ್ 2' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಭಾಗ ಸುಮಾರು 1350 ಕೋಟಿ ಗಳಿಸಿದರೆ, 'ದುರಂಧರ್ 2' ಬರೋಬ್ಬರಿ 1850 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಇದು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಮುರಿದು, 'ಬಾಹುಬಲಿ 2' ಚಿತ್ರವನ್ನೇ ಮೀರಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಸಿನಿಮಾದಿಂದ ಸಾರಾ ಅರ್ಜುನ್ ಒಂದೇ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ಹಾಟ್ ಕೇಕ್ ಆಗಿದ್ದಾರೆ. ಹೀಗಾಗಿ, ರಾಮ್ ಚರಣ್-ಸುಕುಮಾರ್ ಚಿತ್ರಕ್ಕೆ ಇವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಲ್ಲಿ ನಿಜವೆಷ್ಟು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

