ರಾಮ್ ಚರಣ್ ಬರ್ತಡೇ ದಿನ ಹೊಸ ಸಿನೆಮಾದ ಫಸ್ಟ್ ಲುಕ್ ರಿವೀಲ್, ವಿಭಿನ್ನ ಟೈಟಲ್!
RC16 ಫಸ್ಟ್ ಲುಕ್: 'ಗ್ಲೋಬಲ್ ಸ್ಟಾರ್' ರಾಮ್ ಚರಣ್ ಅಭಿನಯದ ಅವರ 16ನೇ ಸಿನಿಮಾಕ್ಕೆ 'ಪೆದ್ದಿ (PEDDI)' ಅಂತ ಡಿಫರೆಂಟಾದ ಟೈಟಲ್ ಇಟ್ಟಿದ್ದಾರೆ. ಗೇಮ್ ಚೇಂಜರ್ ಸೋಲಿನ ಬಳಿಕ ಈ ಚಿತ್ರದ ಬಗ್ಗೆ ಅತೀ ಹೆಚ್ಚು ನಿರೀಕ್ಷೆ ಇಟ್ಟುಕೊಂಡು ಮಾಡಲಾಗುತ್ತಿದೆ.

ನಟ ರಾಮ್ ಚರಣ್ ಇವತ್ತು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಖುಷಿಯಲ್ಲಿ, ನ್ಯಾಷನಲ್ ಅವಾರ್ಡ್ ವಿನ್ನರ್ 'ಉಪ್ಪೆನ್ನಾ' ಸಿನಿಮಾದ ಡೈರೆಕ್ಟರ್ ಬುಚ್ಚಿಬಾಬು ಸನಾ ಡೈರೆಕ್ಷನ್‌ನಲ್ಲಿ ನಟಿಸ್ತಿರೋ 16ನೇ ಸಿನಿಮಾದ ಟೈಟಲ್ ಹಾಗು ಫಸ್ಟ್ ಲುಕ್ ರಿಲೀಸ್ ಆಗಿದೆ.
ರಗಡ್ ಲುಕ್ ನಲ್ಲಿ ರಾಮ್‌ಚರಣ್
ಪೆದ್ದಿ ಅಂತ ಹೆಸರಿಟ್ಟಿರೋ ಈ ಸಿನಿಮಾದಲ್ಲಿ ರಾಮ್ ಚರಣ್ ಸಖತ್ ಡಿಫರೆಂಟಾಗಿ ಕಾಣಿಸ್ತಿದ್ದಾರೆ. ಡೈರೆಕ್ಟರ್ ಬುಚ್ಚಿಬಾಬು ರಾಮ್ ಚರಣ್ ಕ್ಯಾರೆಕ್ಟರ್‌ನ ತುಂಬಾ ಕೇರ್ಫುಲ್ ಆಗಿ ಕ್ರಿಯೇಟ್ ಮಾಡಿದ್ದಾರೆ ಅಂತ ಫಸ್ಟ್ ಲುಕ್ ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತೆ. ರಾಮ್ ಚರಣ್ ಅವರ ಈ ಲುಕ್ ಸಿನಿಮಾದ ಬಗ್ಗೆ ಎಕ್ಸ್‌ಪೆಕ್ಟೇಷನ್ ಜಾಸ್ತಿ ಮಾಡಿದೆ.
ಒರಟುತನದ ಲುಕ್‌ನಲ್ಲಿ ರಾಮ್ ಚರಣ್:
ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಡೋ ತರ 'ಪೆದ್ದಿ' ಸಿನಿಮಾದಿಂದ ಎರಡು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಒಂದರಲ್ಲಿ ಸಖತ್ ರಗಡ್ ಆಗಿ ಕಾಣ್ತಿದಾರೆ, ಇನ್ನೊಂದರಲ್ಲಿ ಬೀಡಿ ಸೇದುತ್ತಾ ಮಾಸ್ ಲುಕ್ ಕೊಟ್ಟಿದ್ದಾರೆ. ಈ ಎರಡು ಪೋಸ್ಟರ್ ಸದ್ಯಕ್ಕೆ ವೈರಲ್ ಆಗ್ತಿದೆ.
ಗೇಮ್ ಚೇಂಜರ್ ಚಿತ್ರತಂಡ
ಒಟ್ಟಿನಲ್ಲಿ ಈ ಸಿನಿಮಾ ರಾಮ್ ಚರಣ್ ಅವರನ್ನ ಗೇಮ್ ಚೇಂಜರ್ ಸೋಲಿನಿಂದ ಮೇಲೆತ್ತೋ ಸಿನಿಮಾ ಆಗುತ್ತೆ ಅಂತ ಎಕ್ಸ್ಪೆಕ್ಟ್ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಜಾಹ್ನವಿ ಕಪೂರ್ ನಟಿಸ್ತಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಮಾಡ್ತಿದ್ದಾರೆ. ಆರ್.ರತ್ನವೇಲು ಕ್ಯಾಮೆರಾ ವರ್ಕ್ ಮಾಡ್ತಿದ್ದಾರೆ. ನ್ಯಾಷನಲ್ ಅವಾರ್ಡ್ ವಿನ್ನರ್ ನವೀನ್ ನೂಲಿ ಎಡಿಟಿಂಗ್ ಮಾಡ್ತಿದ್ದಾರೆ. ಅವಿನಾಶ್ ಕೊಲ್ಲಾ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.