Rajamouli RRR: ಜೇಮ್ಸ್‌ಗೆ ದಾರಿ ಮಾಡಿಕೊಟ್ಟ ರಾಜಮೌಳಿ, RRR ರಿಲೀಸ್ ಡೇಟ್ ಫಿಕ್ಸ್!
ಬೆಂಗಳೂರು/ಹೈದರಾಬಾದ್(ಫೆ. 01) ಕೊರೋನಾ (Coronavirus)ಕಾರಣಕ್ಕೆ ಬಿಡುಗಡೆ ದಿನಾಂಕಗಳನ್ನು ಮುಂದಕ್ಕೆ ಹಾಕಿಕೊಂಡೇ ಬರಲಾಗಿತ್ತು. ಇದೀಗ ಅಂತಿಮವಾಗಿ ಒಂದು ಮಟ್ಟಿನ ಹವಾ ಸೃಷಿ ಮಾಡಿರುವ ಆರ್ ಆರ್ ಆರ್(RRR) ಸಿನಿಮಾ ಮಾರ್ಚ್ 25ರಂದು ತೆರೆಗೆ ಬರಲಿದೆ.

ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಜೇಮ್ಸ್ (James) ಚಿತ್ರಕ್ಕೆ ರಾಜಮೌಳಿ (SS Rajamouli) ದಾರಿ ಮಾಡಿಕೊಟ್ಟಿದ್ದಾರೆ ಎಂದೇ ವಿಶ್ಲೇಷಣೆ ಮಾಡಬಹುದಾಗಿದೆ. ಈ ಮೊದಲು ಮಾರ್ಚ್ 18 ಕ್ಕೆ ಆರ್ ಆರ್ ಆರ್ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು.
ಮಾರ್ಚ್ 18 ಅಥವಾ ಏಪ್ರಿಲ್ 29ಕ್ಕೆ ಆರ್ ಆರ್ ಆರ್ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ರಾಜಮೌಳಿ ಹೇಳಿದ್ದರು. ಮಾರ್ಚ್ 17 ಕ್ಕೆ ಪುನೀತ್ ಜನ್ಮದಿನದಂದೆ ಅಪ್ಪು ನಟನೆಯ ಜೇಮ್ಸ್ ಸಿನಿಮಾ ರಿಲೀಸ್ ಮಾಡೋದಕ್ಕೆ ಪ್ಲಾನ್ ನಡೀತಿದೆ.
ಅಷ್ಟಕ್ಕೂ ಜೇಮ್ಸ್ ಚಿತ್ರ ಬಿಡುಗಡೆಗೂ ಆರ್ ಆರ್ ಆರ್ ಬಿಡುಗಡೆಗೂ ಲಿಂಕ್ ಇದೇಯಾ? ಪೋಸ್ಟರ್ ಮೂಲಕವೇ 'ಜೇಮ್ಸ್' ಮತ್ತಷ್ಟು ನಿರೀಕ್ಷೆ ದುಪ್ಪಟ್ಟು ಮಾಡಿದೆ.
ಕೊರೋನಾ ನಿಯಮಗಳನ್ನು ಒಂದು ಹಂತಕ್ಕೆ ಸಡಿಲ ಮಾಡಿದ್ದರು ಚಿತ್ರಮಂದಿರಗಳಿಗೆ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ನೀಡಲ್ಲ. ಈ ಎಲ್ಲ ಅಂಶಗಳನ್ನು ಮನಗಂಡೇ ಬಿಗ್ ಬಜೆಟ್ ಸಿನಿಮಾಗಳನ್ನು ದಿನಾಂಕ ನೋಡಿ ಬಿಡುಗಡೆ ಮಾಡಲಾಗುತ್ತದೆ.
ಕೋಟಿಗೊಬ್ಬ 3, ಸಲಗ, ಬಡವ ರಾಸ್ಕಲ್ ಸಿನಿಮಾಗಳು ಕೊರೋನಾ ಅಲೆ ನಡುವೆಯೇ ಸದ್ದು ಮಾಡಿದ್ದವು. ಪುಷ್ಪಾ ಸಿನಿಮಾ ಸಹ ಕ್ರೇಜ್ ಸೃಷ್ಟಿ ಮಾಡಿತ್ತು. ಜೂ. ಎನ್ ಟಿಆರ್ ಮತ್ತು ರಾಮ್ ಚರಣ್ ತೇಜಾ ಆರ್ ಆರ್ ಆರ್ ನ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.